ಕೆಟ್ಟ ಆಲೋಚನೆಗಳಿಗೆ ಗೆಲುವಿಲ್ಲ : ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜುಲೈ 28 ದ್ವೇಷವನ್ನು ಹರಡುವ ಮತ್ತು ಉತ್ತಮ ಕಾರ್ಯಗಳಿಗೆ ಅಡ್ಡಿ ಉಂಟು ಮಾಡುವವವರು ಎಂದೂ ತಮ್ಮ ಕೆಟ್ಟ ಯೋಜನೆಗಳಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ. 

    ಆಕಾಶವಾಣಿಯ ಮಾಸಿಕ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಎರಡನೇ ಕಾರ್ಯಕ್ರಮದಲ್ಲಿ ಅವರು ಜಮ್ಮು ಮತ್ತು ಕಾಶ್ಮೀರ ಜನರು ಜನರು ಮುಖ್ಯ ವಾಹಿನಿಗೆ ಸೇರಲು ಆಸಕ್ತಿ ತೋರಿದ್ದು, ಉತ್ತಮ ಆಡಳಿತವನ್ನು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ. 

    ರಾಜ್ಯದ ಹಳ್ಳಿಗೆ ಹಿಂದಿರುಗಿ ಎಂದು ಕರೆಯಲ್ಪಡುವ ಸಮುದಾಯ ಕ್ರೋಡೀಕರಣ ಕಾರ್ಯಕ್ರಮದ ಯಶಸ್ಸನ್ನು ಉಲ್ಲೇಖಿಸಿದ ಅವರು, ಈ ಕಾರ್ಯಕ್ರಮದಲ್ಲಿ ಜನರ ದೊಡ್ಡ ಪ್ರಮಾಣದಲ್ಲಿ ಭಾಗವಹಿಸಿದ್ದು ಗುಂಡುಗಳು ಮತ್ತು ಬಾಂಬ್ಗಳ ಶಕ್ತಿಗಿಂತ ಅಭಿವೃದ್ಧಿಯ ಶಕ್ತಿ ಪ್ರಬಲವಾಗಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಹೇಳಿದರು. 

    ಸರ್ಕಾರ ಆರಂಭಿಸಿರುವ ಈ ಕಾರ್ಯಕ್ರಮ ವಾರವಿಡೀ ನಡೆದಿದ್ದು, ರಾಜ್ಯದ ಸುಮಾರು 4 ಸಾವಿರದ 500 ಪಂಚಾಯಿತಿಗಳಲ್ಲಿ ಸರ್ಕಾರಿ ಅಧಿಕಾರಿಗಳು ಹಳ್ಳಿಯ ಜನರಿಗೆ ಸರ್ಕಾರಿ ಯೋಜನೆ ಮತ್ತು ಕಾರ್ಯಕ್ರಮಗಳ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ ಎಂದರು. 

    ಈ ಬಾರಿಯ ಅಮರನಾಥ ಯಾತ್ರೆಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಕಳೆದ ನಾಲ್ಕು ವರ್ಷಗಳಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಯಾತ್ರೆ ಕೈಗೊಂಡಿದ್ದು ಇದು ಅಲ್ಲಿ ಉತ್ತಮ ವಾತಾವರಣವಿರುವ ಸಂಕೇತ ಎಂದರು. 

    ಬಾಹ್ಯಾಕಾಶ ವಲಯದಲ್ಲಿ 2019 ನೇ ಸಾಲು ಭಾರತದ ಪಾಲಿಗೆ ಅತ್ಯಂತ ಶುಭಪ್ರದವಾಗಿದೆ ಭಾರತೀಯ ವಿಜ್ಞಾನಿಗಳು ಎ-ಸ್ಯಾಟ್ ಅನ್ನು ಉಡಾವಣೆ ಮಾಡಿದ್ದಾರೆ. ಶ್ರೀಹರಿಕೋಟಾದ ಬಾಹ್ಯಾಕಾಶ ಕ್ಷೇತ್ರದಿಂದ ಚಂದ್ರಯಾನ- 2 ಅಂತರಿಕ್ಷದೆಡೆಗೆ ತನ್ನ ದಾಪುಗಾಲು ಇಟ್ಟಿರುವುದನ್ನು ಇಡೀ ದೇಶ ಹೆಮ್ಮೆಯಿಂದ ವೀಕ್ಷಿಸಿದೆ. ಚಂದ್ರಯಾನ- 2 ಯಶಸ್ವಿ ಉಡಾವಣೆ ದೃಶ್ಯಗಳು ದೇಶಬಾಂಧವರಲ್ಲಿ ಗೌರವ, ಉತ್ಸಾಹ ತುಂಬಿದೆ ಎಂದು ಮೋದಿ ಬಣ್ಣಿಸಿದರು. 

    ಐದು ವರ್ಷಗಳ ಹಿಂದೆ ಪ್ರಾರಂಭವಾದ ಸ್ವಚ್ಛತಾ ಅಭಿಯಾನ ಸಾಮೂಹಿಕ ಭಾಗವಹಿಸುವಿಕೆಯೊಂದಿಗೆ ವೇಗ ಪಡೆದುಕೊಂಡಿದೆ. ಈಗ ಸ್ವಚ್ಛತೆ ಮತ್ತು ನೈರ್ಮಲ್ಯದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಈ ಆಂದೋಲನ ಈಗ ಸ್ವಚ್ಛತೆಯಿಂದ ಸುಂದರೀಕರಣದತ್ತ ಸಾಗಿದೆ. ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಅಮೆರಿಕದಲ್ಲಿ ಕೆಲಸ ಬಿಟ್ಟು ಭಾರತಕ್ಕೆ ಮರಳಿದ ಇಂಜಿನಿಯರ್ ಯೋಗೇಶ್ ಸೈನಿ ಅವರ ಯಶೋಗಾಥೆಯನ್ನು ಮೋದಿ ಉಲ್ಲೇಖಿಸಿದರು