ಕರೋನ ಸೋಂಕಿನಿಂದ ಬಚಾವ್ ಆದ ಅಮೆರಿಕದ ಪ್ರಥಮ ಮಹಿಳೆ

ವಾಷಿಂಗ್ಟನ್, ಮಾರ್ಚ್ 24, ಕರೋನಸೊಂಕು  ಜಗತ್ತಿನ  ಬೇರೆ ಬೇರೆ ದೇಶಗಳಿಗೆ  ಹಬ್ಬುತ್ತಿರುವುದು ಹೊಸ ವಿಚಾರ ವೇನಲ್ಲ ಈಗ ಅಮೆರಿಕ ಪ್ರಥಮ   ಮಹಿಳೆ ಮೆಲಾನಿಯಾ ಟ್ರಂಪ್  ಅವರು ಸೋಂಕಿನ ಪರೀಕ್ಷೆಗೆ ಒಳಗಾಗಿದ್ದು ಸದ್ಯ  ನೆಗೆಟಿವ್ ಎಂಬ  ವರದಿ ಬಂದಿದ್ದು, ಹೆಗೋ ಬಚಾವ್ ಆಗಿದ್ದಾರೆ .ಕರೋನ ಸೋಂಕು ಇಲ್ಲ ಎಂಬುದು  ವೈದ್ಯಕೀಯ ಪರೀಕ್ಷೆಯಲ್ಲಿ  ದೃಡಪಟ್ಟಿದೆ ಎಂದು ಸ್ವತಃ ಅಮೆರಿಕ ಕ ಅಧ್ಯಕ್ಷ ಡೊನಾಲ್ಡ್  ಟ್ರಂಪ್ ಅವರೆ  ಇದನ್ನು ದೃಡಪಡಿಸಿದ್ದಾರೆ . ವೈದ್ಯರು ಕರೋನವೈರಸ್ ಪರೀಕ್ಷಿಸಿದ್ದಾರೆ ಮತ್ತು ಫಲಿತಾಂಶವು ನಕಾರಾತ್ಮಕವಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ತಡರಾತ್ರಿ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಈ  ಮೊದಲು ಕೆನಡಾ ಪ್ರಧಾನಿ ಪತ್ನಿಗೂ ಕರೋನ ಸೋಕು ತಗುಲಿತ್ತು ಅಲ್ಲದೆ  ಅಮೆರಿಕದ ಕೆಲವು ಸಂಸದರಿಗೂ ಸೋಂಕು ಕಾಣಿಸಿಕೊಂಡಿತ್ತು.