ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯಲ್ಲಿ ಬಾಬು ಜಗಜೀವನರಾಮರವರ ಜಯಂತಿ ಆಚರಣೆ
ಬೆಟಗೇರಿ 05: ನಗರದ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಸಿರು ಕ್ರಾಂತಿ ಹರಿಕಾರ ಹಾಗೂ ಗ್ರಾಮೀಣ ಕಾರ್ಮಿಕ ಚಳುವಳಿ ಸಂಘಟನಾಕಾರರಾಗಿದ್ದ ಬಾಬು ಜಗಜೀವನರಾಮರವರ ಜಯಂತಿಯನ್ನು ಆಚರಿಸಲಾಯಿತು.
ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಗಣೇಶಸಿಂಗ್ ಬ್ಯಾಳಿಯವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಾರೆ್ಪಣ ಮಾಡಿದರು. ಪದವಿ ಪೂರ್ವ ವಿಭಾಗದ ಪ್ರಾಚಾರ್ಯರಾದ ಎ.ಎ.ಹದ್ಲಿ, ಪ್ರೌಢ ಶಾಲಾ ಪ್ರಭಾರ ಮುಖ್ಯಾಧ್ಯಾಪಕರಾದ ಎಚ್.ಎಸ್.ಬ್ಯಾಳಿ ಹಾಗೂ ಸಮಸ್ತ ಸಿಬ್ಬಂದಿ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.