ಎಸ್ ಐಆರ್ ಅವಧಿಗೆ ಮುನ್ನವೇ ಸಾಧನೆ ಬಬಲೇಶ್ವರ ಮತಗಟ್ಟೆ ಅಧಿಕಾರಿಗಳಿಗೆ ಸನ್ಮಾನ
Babaleshwar polling officials felicitated for achieving targets ahead of schedule
ಲೋಕದರ್ಶನ ವರದಿ
ವಿಜಯಪುರ 13: ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಅವಧಿಗೆ ಮುನ್ನವೇ ಶೇ. ನೂರರಷ್ಟು ಪ್ರಗತಿ ಸಾಧಿಸಿದ ಮತಗಟ್ಟೆ ಅಧಿಕಾರಿಗಳನ್ನು ನಗರದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದ ಒಟ್ಟು 244 ಮತಗಟ್ಟೆಗಳ ಪೈಕಿ ಪ್ರಥಮವಾಗಿ ತಿಕೋಟಾ ತಾಲೂಕಿನ ಧನರ್ಗಿ ಗ್ರಾಮದ ಭಾಗ ಸಂಖ್ಯೆ-60 ರ ಮತಗಟ್ಟೆ ಮಟ್ಟದ ಅಧಿಕಾರಿ ಎಸ್. ಬಿ. ಮಡಸನಾಳ ಹಾಗೂ ಮತಗಟ್ಟೆ ಮೇಲ್ವಿಚಾರಕರಾದ ಶ್ರೀಮತಿ ಜ್ಯೋತಿ ಕೊಣ್ಣೂರ ಅವರನ್ನು ಮೇಲಧಿಕಾರಿಗಳು ಸನ್ಮಾನಿಸಿದರು.
ಈ ಸಿಬ್ಬಂದಿ ಬಲೇಶ್ವರ ವಿಧಾನಸಭಾ ಮತಕ್ಷೇತ್ರದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಅವಧಿಗೆ ಮುನ್ನವೇ ಶೇ.ನೂರರಷ್ಟು ಪ್ರಗತಿ ಸಾಧಿಸಿದ್ದಾರೆ. ಈ ಇಬ್ಬರು ಮತಗಟ್ಟೆ ಅಧಿಕಾರಿಗಳು ಎನ್ಯುಮರೇಶನ್ ಫಾರ್ಮಗಳ ಹಂಚಿಕೆ ಹಾಗೂ ಡಿಜಿಟೈಜೇಶನ್ ಕಾರ್ಯವನ್ನು ನಿಗದಿತ ಅವಧಿಗಿಂತ ಮುನ್ನವೇ ಮುಗಿಸಿದ್ದರಿಂದ ಸನ್ಮಾನಿಸಲಾಯಿತು. ಉಪವಿಭಾಗಾಧಿಕಾರಿಗಳಾದ ಗುರುನಾಥ ದಡ್ಡೆ, ಬಬಲೇಶ್ವರ ತಹಶೀಲ್ದಾರ್ ಶಾಂತಲಾ ಚಂದನ್, ತಿಕೋಟಾ ತಹಶೀಲ್ದಾರ್ ಸುರೇಶ ಚವಲರ್ ಸೇರಿದಂತೆ ಅಧಿಕಾರಿ ,ಸಿಬ್ಬಂದಿ ಇದ್ದರು.
ಆಗಸ್ಟ್ 6ರ ವಿಧಾನಸಭೆ ಅಧಿವೇಶನಕ್ಕೂ ಮುನ್ನ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ಸಿಎಂ ಡಿ.ಕೆ. ಶಿವಕುಮಾರ್
ರಾಜಸ್ಥಾನದ ಬಾಲೋತ್ರಾ-ಜೋಧ್ಪುರ ಹೆದ್ದಾರಿಯಲ್ಲಿ ಎಸ್ಯುವಿ-ಡಂಪರ್ ಡಿಕ್ಕಿ: ಐವರು ಸಾವು, ಮೂವರಿಗೆ ಗಾಯ
ಬಕ್ಕಖಾಲಿ ಕರಾವಳಿಯಲ್ಲಿ ಮುಳುಗಿದ್ದ ಮೀನುಗಾರಿಕಾ ದೋಣಿಯಲ್ಲಿ 9 ಮೀನುಗಾರರ ಶವ ಪತ್ತೆ; 6 ಮಂದಿಗಾಗಿ ಶೋಧ ಮುಂದುವರಿಕೆ
ಅಂತರರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್ 2026ರಲ್ಲಿ ಚಿನ್ನದ ಪದಕಗಳ ಸಾಧನೆ ಮಾಡಿದ ಭಾರತೀಯ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
ಶಾಸಕರ ಆಮಿಷ ಆರೋಪದ ಕಾನೂನು ನೋಟಿಸ್ ಬಳಿಕ ಬಿಜೆಪಿ ನ್ಯಾಯಾಲಯದ ಮೂಲಕ ರಾಜಕೀಯ ಹೋರಾಟ ನಡೆಸುತ್ತಿದೆ ಎಂದು ಒಮರ್ ಅಬ್ದುಲ್ಲಾ ಆರೋಪ
ಮಧುರೈ ಸಮೀಪ ಓಮ್ನಿ ಬಸ್–ಟಿಎನ್ಎಸ್ಟಿಸಿ ಬಸ್ ಮುಖಾಮುಖಿ ಡಿಕ್ಕಿ: ಐವರು ಸಾವು, 42 ಮಂದಿಗೆ ಗಾಯ 