ಫೆ. 15 ರಿಂದ ಬಬಲಾದಿ ಮಠದ ಜಾತ್ರಾಮಹೋತ್ಸವ
Babaladi Mutt Fair to be held from Feb. 15
ಲೋಕದರ್ಶನ ವರದಿ
ಜಮಖಂಡಿ 10: ತಾಲ್ಲೂಕಿನ ಆಲಗೂರ ಪುನರ್ವಸತಿ ಕೇಂದ್ರದಲ್ಲಿನ ಹೊಸ ಬಬಲಾದಿ ಮಠದ ಜಾತ್ರಾಮಹೋತ್ಸವ ಫೆ. 15 ರಿಂದ 18 ವರಗೆ ಜರುಗಲಿದೆ ಎಂದು ಮಠದ ಶಿವರುದ್ರಯ್ಯ ಮುತ್ಯಾ ತಿಳಿಸಿದರು.
ಆಲಗೂರ ಪುರ್ನವಸತಿ ಕೇಂದ್ರದ ಹೊಸ ಬಬಲಾದಿ ಮಠದಲ್ಲಿ ನಡೆದ ಸುದ್ದಿಗಾರರೊಂದಿಗೆ ಮಾತನಾಡಿದರು, ಫೇ.15 ರಂದು ಸಂಜೆ 4 ಗಂಟೆಗೆ ಸದಾಶಿವ ಮುತ್ಯಾರ ಭಾವಚಿತ್ರ ಮೆರವಣಿಗೆ ಬನಶಂಕರಿ ತೋಟದ ವಿಠ್ಠಲ ಮಂದಿರದಿಂದ ಜಮಖಂಡಿ ನಗರದ ಪ್ರಮುಖ ರಸ್ತೆ ಮೂಲಕ ಸಂಚರಿಸುವುದು. ಮೆರವಣಿಗೆಯಲ್ಲಿ ಕುಂಬಹೊತ್ತ ಮಹಿಳೆಯರು ವಿವಿಧ ವಾದ್ಯ ಮೇಳಗಳು ಸೇರಲಿವೆ. 16 ರಂದು ಮಠದ ಉಪಾಸನೆ, ಶಿವಭಜನೆ, ಬಯಲಾಟಗಳು ಜರುಗುತ್ತವೆ. 17 ರಂದು ಮುಂಜಾನೆ 5 ಗಂಟೆಗೆ ಮಠದಲ್ಲಿ ರುದ್ರಾಭೀಷಕ, ಶಿವದಿಕ್ಷೇ, ಲಿಂಗದಿಕ್ಷೇ ನೀಡಲಾಗುವದು. ರಾತ್ರಿ ಮಠದ ರಥೋತ್ಸವ ಜರುಗಿದ ಬಳಿಕ ತುಲಾಭಾರ ಕಾರ್ಯಕ್ರಮ ನಡೆಯುತ್ತದೆ. 18 ರಂದು ಮುಂಜಾನೆ 10 ಗಂಟೆಗೆ ಮಹಾಪ್ರಸಾದೊಂದಿಗೆ ತ್ರಿಕಾಲ ಜ್ಞಾನ ಕಾಲಜ್ಞಾನ ನುಡಿಯನ್ನು ಸಾರಲಾಗುತ್ತದೆ. ನಂತರ ತೇರದ ಬಂಡಿಗಳ ಸ್ಪರ್ಧೆ, ಸಾಯಂಕಾಲ ಲಕ್ಷ ದೀಪೋತ್ಸವ ನಡೆಯುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಠದ ಪೀಠಾಧಿಕಾರಿ ಸದಾಶಿವ ಅಜ್ಜನ್ನವರು ಹಾಗೂ ಮಠದ ಭಕ್ತಾದಿಗಳಾದ ತುಕಾರಾಮ ಮೋರೆ, ಯಂಕಪ್ಪ ಕುಂದಗೋಳ, ಶಿವಪ್ಪ ಕಡಪಟ್ಟಿ, ಹಣಮಂತ ಬೀಳಗಿ, ಪ್ರಜ್ವಳ ಸೊನ್ನಹಳ್ಳಿ, ಮಾದೇವ ನ್ಯಾಮಗೌಡ, ಹಣಮಂತ ಹಳೇಮನಿ, ಭೀಮಪ್ಪ ದೇವರಮನಿ, ರಮೇಶ ಭೂಮಾರ, ಪ್ರಜ್ವಲ ರಜಪೂತ, ಗಂಗಪ್ಪ ಪೂಜಾರಿ ಇದ್ದರು.
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ 