ಬಸ್ಸು ಚಾಲಕ ಸಾವು: ಹೃದಯಾಘಾತ ಶಂಕೆ

ಮಂಗಳೂರು, ಮಾ.11, ನಿಲ್ಲಿಸಿದ್ದ ಕೆಎಸ್ಆರ್ಟಿಸಿ  ಬಸ್ಸಿನೊಳಗೆ ಹೃದಯಾಘಾತದಿಂದ ಚಾಲಕ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.40 ವರ್ಷದ ಬೀದರ್ ಮೂಲದ  ರೇವಣ್ಣಪ್ಪ, ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಿಲ್ಲಿಸಿದ್ದ ಬಸ್ಸಿನಲ್ಲಿ ಮೃತ ಪಟ್ಟಿದ್ದಾರೆ. ಮಂಗಳವಾರ ಪುತ್ತೂರಿನಿಂದ ಸಂಜೆ ಕಡಬಕ್ಕೆ ಆಗಮಿಸಿದ ಬಸ್ಸನ್ನು ಕಡಬದ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಮೀಪ ಹೆದ್ದಾರಿಯ ಪಕ್ಕದಲ್ಲಿ ರಾತ್ರಿ ನಿಲ್ಲಿಸಲಾಗಿತ್ತು. ಬುಧವಾರಬೆಳಗ್ಗೆ  ಆ ಬಸ್ಸು ಶಾಂತಿಮೊಗರು ಮಾರ್ಗವಾಗಿ ಪುತ್ತೂರಿಗೆ ತೆರಳಬೇಕಿತ್ತು. ಆದರೆ, ಬೆಳಗ್ಗೆ  ನಿರ್ವಾಹಕ ಎದ್ದು ಚಾಲಕನನ್ನು  ನೋಡಿದಾಗ ಚಾಲಕ ಮುಗ್ಗರಿಸಿ ಕುಳಿತ ಸ್ಥಿತಿಯಲ್ಲಿ  ಕಂಡುಬಂದಿದ್ದು, ಹೃದಯಾಘಾತದಿಂದ  ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.