ಬುದ್ಧ, ಅಂಬೇಡ್ಕರ್ ಪುತ್ಥಳಿ ಧ್ವಂಸ : 8 ಮಂದಿ ವಿರುದ್ಧ ಪ್ರಕರಣ

ಬಲರಾಮ್ ಪುರ, ಮಾ 07, ಉತ್ತರ ಪ್ರದೇಶ ಜಿlಲ್ಲೆಯ ಉತ್ರೌಲಾ ಕೊತ್ವಾಲಿ ವಲಯದಲ್ಲಿ ಬುದ್ಧ, ಅಂಬೇಡ್ಕರ್ ಪುತ್ಥಳಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ 8 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.   ಉತ್ರೌಲಾ ಕೊತ್ವಾಲಿ ವಲಯದ ರಸೌಲಾಬಾದ್ ಜಿಲ್ಲೆಯಲ್ಲಿ ಗುರುವಾರ ದುಷ್ಕರ್ಮಿಗಳು ಅಂಬೇಡ್ಕರ್ ಹಾಗೂ ಬುದ್ಧನ ಕೆಲ ಪ್ರತಿಮೆಗಳನ್ನು ವಿರೂಪಗೊಳಿಸಿದ್ದರು.  ಈ ಸಂಬಂಧ ಶನಿವಾರ 8ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  ದುಷ್ಕೃತ್ಯವನ್ನು ತಡೆಯಲು ಹೋದವರ ಮೇಲೂ ಹಲ್ಲೆ ನಡೆಸಿ ನಿಂದಿಸಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.   ಸದ್ಯಕ್ಕೆ ಗ್ರಾಮದಲ್ಲಿ ಶಾಂತಿ ನೆಲೆಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.