ಎಚ್.ಡಿ.ಕೋಟೆ, ಫೆ.6, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸರ್ಕಾರ ಬೀಳಿಸಲು ಮತ್ತು ಸರ್ಕಾರ ರಚಿಸುವ ಕಲೆ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ. ಅವರು ಈ ಹಿಂದೆ ಏನೆಲ್ಲಾ ಮಾಡಿದ್ದರು, ಹೇಗೆ ಸರ್ಕಾರ ರಚಿಸಿದ್ದರು ಎಂಬುದನ್ನು ಜನ ನೋಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದಷ್ಟೇ ಹೇಳುತ್ತೇನೆ ಎಂದು ಕುಮಾರಸ್ವಾಮಿ ಎಚ್.ಡಿ.ಕೋಟೆಯ ಕಂಚಮಳ್ಳಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ವಿಷಯದಲ್ಲಿ ಯಡಿಯೂರಪ್ಪ ಅವರು ಬೆಳಗ್ಗೆ ಒಂದು ತೀರ್ಮಾನ, ಮಧ್ಯಾಹ್ನ ಮತ್ತೊಂದು ತೀರ್ಮಾನ ಕೈಗೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.ಈ ಹಿಂದೆ ಅವರು 105 ಜನ ಬಿಜೆಪಿ ಶಾಸಕರು ಕಡುಬು ತಿಂದುಕೊಂಡು ಕೂತಿರುತ್ತಾರಾ ? ಎಂದು ಯಡಿಯೂರಪ್ಪ ಕೇಳಿದ್ದರು.ಮುಂದೆ ಯಾರನ್ನು ಹೊಗಳುತ್ತಾರೆ ಕಾದು ನೋಡಿ, 10 ಜನ ಪ್ರಮಾಣ ವಚನ ಸ್ವೀಕಾರ ಮಾಡಿದರೂ ಹೊಗಳುತ್ತಾರೋ ಬಯ್ಯುತ್ತಾರೋ ನೋಡಿ ಎಂದು ಹೇಳಿದರು. ಈಗ 10 ಜನ ಸಚಿವರಾಗಿದ್ದಾರೆ. ಉಳಿದವರು ಸುಮ್ಮನೆ ಇರುತ್ತಾರಾ ? ಎಂದು ಪ್ರಶ್ನಿಸಿದ ಅವರು, ಕೋಡಿ ಮಠದ ಸ್ವಾಮೀಜಿ ಈಗಾಗಲೇ ಭವಿಷ್ಯ ನುಡಿದಿದ್ದಾರೆ. ಈ ಗ ಸಮಸ್ಯೆ ಇಲ್ಲ, ಮುಂದೆ ಏನಾಗುತ್ತದೆಯೋ ಗೊತ್ತಿಲ್ಲ. ಭವಿಷ್ಯ ಹೇಳಲು ನಾನು ಜ್ಯೋತಿಷಿ ಅಲ್ಲ ಎಂದು ಕಂಚಮಳ್ಳಿಯಲ್ಲಿ ಕುಮಾರಸ್ವಾಮಿ ಹೇಳಿದರು.