ಬಿ.ಆರ್.ಟಿ.ಎಸ್. ಬಸ್ ಸಂಚಾರಕ್ಕೆ ಜುಲೈ 1ರಿಂದ ಸೂಕ್ತ ಬಂದೊಬಸ್ತ್ ; ರಾಜೇಂದ್ರ ಚೋಳನ್

ಧಾರವಾಡ 27: ಅವಳಿನಗರ ಮದ್ಯದಲ್ಲಿ ಬಿ.ಆರ್.ಟಿ.ಎಸ್. ಬಸ್ಗಳು ಸುಗಮವಾಗಿ ಸಂಚರಿಸಲು ಮತ್ತು ಬಸ್ ಸಂಚಾರಕ್ಕಾಗಿ ನಿರ್ಮಿಸಿರುವ ವಿಶೇಷ ಕಾರಿಡಾರ್ ರಸ್ತೆಯಲ್ಲಿ ಖಾಸಗಿ ವಾಹನಗಳು ಸಂಚರಿಸದಂತೆ ಬದ್ರತಾ ಸಿಬ್ಬಂದಿಗಳನ್ನು ನೇಮಿಸಿ ಜುಲೈ 1 ರಿಂದ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಬಿ.ಆರ್.ಟಿ.ಎಸ್. ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಅವರು ಹೇಳಿದರು. 

ಅವರು ಇಂದು ಬೆಳಿಗ್ಗೆ ಬಿ.ಆರ್.ಟಿ.ಎಸ್ ಕಾರಿಡಾರ್ ರಸ್ತೆ ಪರಿಶೀಲನೆ ಸಂದರ್ಭದಲ್ಲಿ ಕೊರ್ಟವೃತ್ತದಲ್ಲಿರುವ ಬಿ.ಆರ್.ಟಿ.ಎಸ್ ಬಸ್ನಿಲ್ದಾಣದಲ್ಲಿ ಅಧಿಕಾರಿಗಳಿಗೆ ತಿಳಿಸಿದರು.

ಧಾರವಾಡ ಮಿತ್ರಸಮಾಜದಿಂದ ಹುಬ್ಬಳ್ಳಿಯವರೆಗೆ ಬಿ.ಆರ್.ಟಿ.ಎಸ್. ಬಸ್ಸಂಚಾರಕ್ಕಾಗಿ 24 ಕಿಮೀ ರಸ್ತೆ ನಿರ್ಮಿಸಲಾಗಿದೆ. 31 ಬಸ್ ನಿಲ್ದಾಣ ಆರಂಭಿಸಲಾಗಿದೆ. 21 ಜಂಕ್ಷನ್ ಮಾಡಲಾಗಿದೆ.

ಬಸ್ಗಳ ಸುಗಮ ಸಂಚಾರಕ್ಕಾಗಿ ಮತ್ತು ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ಜರುಗಿಸಲು 70 ಹೋಮ್ಗಾರ್ಡ್ , 120 ಸೆಕ್ಯೂರಿಟಿ ಗಾರ್ಡ ಮತ್ತು ಪೋಲಿಸ್ ಕಮಿಶನರೇಟ್ದಿಂದ 70 ಪೋಲಿಸ್ ಪೇದೆಗಳನ್ನು ನೇಮಿಸಲಾಗಿದೆ. ಬಸ್ ನಿಲ್ದಾಣ ಸೇರಿದಂತೆ ರಸ್ತೆಯುದ್ದಕ್ಕೂ ಇರುವ ಪ್ರಮುಖ ಸ್ಥಳಗಳಲ್ಲಿ ಸುಮಾರು 68 ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಅವರು ತಿಳಿಸಿದರು.


ಈ ಸಂದಂರ್ಭದಲ್ಲಿ ನಗರ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ  ಡಾ.ಶಿವಕುಮಾರ ಗುಣಾರೆ, ಎ.ಸಿ.ಪಿ. ಎಸ್.ಎಂ.ಸಂದಿಗವಾಡ, ಸಿಪಿಐ ಮುರಗೇಶ ಚನ್ನಣ್ಣವರ, ಎನ್ಡಬ್ಲೂಕೆಎಸ್ಆರ್ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ, ಸಾರಿಗೆ ಅಧಿಕಾರಿ ಕೆಂಪಣ್ಣ ಗುಡೆನ್ನವರ, ಬಿ.ಆರ್.ಟಿ.ಎಸ್ನ ಉಪಪ್ರಧಾನ ವ್ಯವಸ್ಥಾಪಕ ಗಣೇಶ ರಾಠೊಡ ಸೇರಿದಂತೆ ಬಿ.ಆರ್.ಟಿ.ಎಸ್, ಎನ್ಡಬ್ಲೂಕೆಎಸ್ಆರ್ಟಿಸಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.