ಶ್ರೀನಗರ, ಫೆ15, ಉತ್ತರ ಕಾಶ್ಮೀರ ಜಿಲ್ಲೆಯ ಬಂಡಿಪೋರಾದಲ್ಲಿ ಶುಕ್ರವಾರ ತಡರಾತ್ರಿ ಉಗ್ರರು ಮಹಿಳಾ ಪಂಚಾಯತಿ ಸದಸ್ಯರೊಬ್ಬರ ಮನೆಯ ಮೇಲೆ ಕೈ ಬಾಂಬ್ ಎಸೆದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಶಡಿಪೋರಾ ಬಂಡಿಪೋರಾದಲ್ಲಿರುವ ರೋಬೀನಾ ಅಖ್ತರ್ ಅವರ ಮನೆಯ ಮೇಲೆ ಉಗ್ರರು ಗ್ರೆನೇಡ್ ಎಸೆದಿದ್ದಾರೆ ಆದರೆ ಗ್ರೆನೇಡ್ ಸ್ಫೋಟಗೊಂಡಿಲ್ಲ ಮತ್ತು ನಂತರ ಯಾವುದೇ ಹಾನಿಯಾಗದಂತೆ ತಜ್ಞರು ಅದನ್ನು ನಿಷ್ಕ್ರಿಯಗೊಳಿಸಿದ್ದಾರೆ .ನಂತರ, ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿವೆ ಆದರೆ ಉಗ್ರರು ಕತ್ತಲೆಯಲ್ಲಿ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ .
ಮಾರ್ಚ್ ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಖಾಲಿ ಇರುವ ಪಂಚಾಯತ್ ಸ್ಥಾನಗಳಿಗೆ ಚುನಾವಣೆ ನಡೆಸುವುದಾಗಿ ಸರ್ಕಾರ ಘೋಷಿಸಿದ ಎರಡು ದಿನಗಳ ನಂತರ ಈ ದಾಳಿ ನಡೆದಿದೆ.