ವಂದೇ ಮಾತರಂ ಗೀತೆಯ 150ನೇ ವರ್ಷದ ಸಂಭ್ರಮ ಆಚರಿಸಿದ ಬಿ.ಎಲ್.ಡಿ.ಇ ಸಂಸ್ಥೆ
BLDE celebrates 150th anniversary of Vande Mataram
ವಿಜಯಪುರ 08 : ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್‌ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ದಿನಾಂಕ: 07-11-2025 ಶುಕ್ರವಾರದಂದು ವಂದೇ ಮಾತರಂ ಗೀತೆಯ 150 ನೇ ವರ್ಷದ ಸಂಭ್ರಮಾಚರಣೆ ಆಚರಿಸಲಾಯಿತು. ಮಹಾವಿದ್ಯಾಲಯದ ಆವರಣದಲ್ಲಿ ಗಿಡ ನೆಡುವ ಸಂಕಲ್ಪದೊಂದಿಗೆ ಹಾಗೂ ಒಗ್ಗಟ್ಟಿನಿಂದ ವಂದೇ ಮಾತರಂ ಗೀತೆಯನ್ನು ಹಾಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು. ಈ ವೇಳೆಯಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್ ಎಂ.ಮಿರ್ಧೆ ಅವರು ಆವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಂದೇ ಮಾತರಂ 150 ನೇ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆ ವಿವಿಧ ನೆಡುವ ಮೂಲಕ ಹಸಿರು ಸಿರಿಗೆ ಪ್ರಾಮುಖ್ಯತೆ ನೀಡಿಲಾಯಿತು. ನಮ್ಮಲ್ಲಿ ಪರಿಸರ ಒಂದಲ್ಲಾ ಪರಿಸರದಲ್ಲಿ ನಾವು ಎಂಬ ಘೋಷವಾಕ್ಯದ ಫಲಕ ಹಿಡಿದು ಪರಿಸರದ ಮಹತ್ವವನ್ನು ಕೆಡೆಟ್ಗಳಿಂದ ಸಾರಲಾಯಿತು. ಆವರಣದಲ್ಲಿ ವಾಲಿಬಾಲ್, ಪುಟಬಾಲ್ ಮತ್ತು ತ್ರೋಬಾಲ್ ಕ್ರೀಡಾ ಚಟುವಟಿಕೆ ಗಳನ್ನು ಹಮ್ಮಿಕೊಳ್ಳಲಾಯಿತು.
ಯುದ್ಧದಲ್ಲಿ ಅಮರರಾದ ಸೈನಿಕರ ಪರಿಶ್ರಮ ಧೈರ್ಯ,ಸಾಹಸ ಪ್ರದರ್ಶಿಸಲಾಯಿತು. ಭಾರತೀಯ ಸೈನ್ಯದ ಮೇಲಿರುವ ಗೌರವ ಕೆಡೆಟ್‌ಗಳಿಗೆ ಪ್ರೇರಣೆ ನೀಡಿತು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಆರ್ ಎಮ್ ಮಿರ್ಧೆ , ಉಪಪ್ರಾಚಾರ್ಯ ಡಾ ಅನಿಲ್ ಭೀ. ನಾಯಕ್ , ಕ್ಯಾಪ್ಟನ್ ಎಸ್ ಎ ಪಾಟೀಲ್ ,ಲೆಫ್ಟಿನೆಂಟ್ ಡಾ.ರಾಮಚಂದ್ರ ನಾಯ್ಕ್, ಎಮ್ ಸುಬೇದಾರ ತಾನಾಜಿ, ಜೆ ಸಿ ಒ ಮಂಗಲಸಿಂಗ್, ಪವನ್ ಕುಮಾರ್, ಡಾ.ಶ್ರೀಶೈಲ ಉಣಕಿ, ಡಾ.ಅನಿಲ್ ಪಾಟೀಲ ಮತ್ತು ಎನ್‌ಸಿಸಿ ಕೆಡೆಟ್ಗಳು ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 