ವಿನಯ್ ಗುರೂಜಿ ಬ್ಲ್ಯಾಕ್ಮೇಲ್ ಪ್ರಕರಣ: ನಾಲ್ವರು ಸಿಸಿಬಿಗೆ ಬಲೆಗೆ

ಬೆಂಗಳೂರು, ಮಾ. 7, ವಿನಯ್ ಗುರೂಜಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಮುನಿರಾಜು, ಮನೋಜ್, ರವಿಕುಮಾರ್ ಮುರಳಿ, ಮಂಜು ಬಂಧಿತರು.ಬಂಧಿತರು  ವಿನಯ್ ಗುರೂಜಿಯ ಭಾಷಣದ ವಿಡಿಯೋ ತುಣುಕಗಳನ್ನು ತಪ್ಪಾಗಿ ಕಾವೇರಿ ಯೂಟ್ಯೂಬ್ ಚಾನೆಲ್  ನಲ್ಲಿ ವೈರಲ್ ಮಾಡುತ್ತಿದ್ದರು. ಇದನ್ನು ನಿಲ್ಲಿಸಬೇಕಾದರೇ ಹಣಕ್ಕಾಗಿ ಗ್ಯಾಂಗ್ ನಲ್ಲಿದ್ದ ಮುರುಳಿ, ಗುರೂಜಿ ಅವರ ಜತೆಗಿದ್ದ ಪ್ರಶಾಂತ್ ಎಂಬುವವರಿಗೆ 30ಲಕ್ಷ ರೂ ಹಣಕ್ಕಾಗಿ ಬೇಡಿಕೆ ಇಟ್ಟಿದ್ದನು.ಹೀಗಾಗಿ  ಈ ಕುರಿತು ವಿನಯ್ ಗುರೂಜಿ ಆಪ್ತ ಪ್ರಶಾಂತ್ ಅವರು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆ  ಕೈಗೊಂಡಿದ್ದಾರೆ.