ಬಿಜೆಪಿ ದೇಶದ ಮೂರು ಪ್ರಮುಖ ರಾಜ್ಯಗಳಲ್ಲಿ ಜಯಭೇರಿ: ಬೀದರ್‌ ದಕ್ಷಿಣ ಕ್ಷೇತ್ರದ ಮನ್ನಾಏಖೇಳ್ಳಿ ಗ್ರಾಮದಲ್ಲಿ ಸಭ್ರಮಾಚರಣೆ

ಬಿಜೆಪಿ ದೇಶದ ಮೂರು ಪ್ರಮುಖ ರಾಜ್ಯಗಳಲ್ಲಿ ಜಯಭೇರಿ: ಬೀದರ್‌ ದಕ್ಷಿಣ ಕ್ಷೇತ್ರದ ಮನ್ನಾಏಖೇಳ್ಳಿ ಗ್ರಾಮದಲ್ಲಿ ಸಭ್ರಮಾಚರಣೆ BJP wins in three major states of the country: Celebrations in Mannaekhelli village of Bidar South c

ಬೀದರ್ 04: ದೇಶದ ಮೂರು ಪ್ರಮುಖ ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಜೆಜೆಪಿ (ಎನ್‌ಡಿಎ) ಐತಿಹಾಸಿಕ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ, ಬೀದರ್ ದಕ್ಷಿಣ ಕ್ಷೇತ್ರದ ಮನ್ನಾಏಖೇಳ್ಳಿ ಗ್ರಾಮದಲ್ಲಿ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರ ನೇತೃತ್ವದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭರ್ಜರಿ ವಿಜಯೋತ್ಸವವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ದೇಶದ ಪ್ರಧಾನಿಗಳಾದ ಸನ್ಮಾನ್ಯ ನರೇಂದ್ರ ಮೋದಿ ಜೀ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಜೀ ಹಾಗೂ ದೇಶದ ಗೃಹ ಸಚಿವರಾದ ಸನ್ಮಾನ್ಯ ಅಮಿತ್ ಶಾ ಜೀ ಸೇರಿದಂತೆ ಅನೇಕ ನಾಯಕರ ಮತ್ತು ಕಾರ್ಯಕರ್ತರ ಪರಿಶ್ರಮದ ಫಲವಾಗಿ ಇಂದು ಮೂರು ರಾಜ್ಯಗಳಲ್ಲಿ ಈ ಭರ್ಜರಿ ಜಯ ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದರು. ಇಂದು ನಾವು ಆಚರಿಸುತ್ತಿರುವ ಈ ವಿಜಯೋತ್ಸವ ಕೇವಲ ಗೆಲುವಿನ ಸಂಭ್ರಮವಲ್ಲ ಇದು ಜನರ ಸೇವೆಗೆ ಸಿಕ್ಕ ಗೌರವ ಇದು ಉತ್ತಮ ಆಡಳಿತಕ್ಕೆ ಸಿಕ್ಕ ಮನ್ನಣೆ ಇದಾಗಿದೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸಹ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ಗೆಲುವು ಸುಲಭವಾಗಿ ಬಂದಿಲ್ಲಇದು ಸಾವಿರಾರು ಕಾರ್ಯಕರ್ತರ ಬೆವರು. ಇದು ಜನರ ವಿಶ್ವಾಸಇದು ದೇಶದ ಭವಿಷ್ಯದ ನಿರ್ಧಾರ.ಪ್ರಧಾನಿಗಳಾದ ನರೇಂದ್ರ ಮೋದಿ ಜೀ ಅವರ ನಾಯಕತ್ವದಲ್ಲಿ ದೇಶ ವಿಶ್ವದ ವೇದಿಕೆಯಲ್ಲಿ ಎತ್ತರಕ್ಕೆ ಏರುತ್ತಿದೆ! ನಮ್ಮ ಗೃಹ ಸಚಿವರಾದ ಅಮಿತ್ ಶಾ ಜೀ ಅವರ ಸಂಘಟನೆ ಶಕ್ತಿಯಿಂದ ಪಕ್ಷ ಇನ್ನಷ್ಟು ಬಲಿಷ್ಠವಾಗಿದೆ! ಈ ಗೆಲುವು ಕೇವಲ ರಾಜಕೀಯ ಜಯವಲ್ಲ, ಇದು ಜನರ ವಿಶ್ವಾಸದ ಪ್ರತಿಫಲ. ಜನರು ಅಭಿವೃದ್ಧಿ, ಸುವ್ಯವಸ್ಥೆ ಮತ್ತು ಉತ್ತಮ ಆಡಳಿತವನ್ನು ಬೆಂಬಲಿಸಿದ್ದಾರೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ. ಇನ್ನಷ್ಟು ಶ್ರಮಿಸಿ, ಜನರ ವಿಶ್ವಾಸವನ್ನು ಕಾಪಾಡಿಕೊಂಡು, ಅಭಿವೃದ್ಧಿಯ ಹಾದಿಯಲ್ಲಿ ದೇಶವನ್ನು ಇನ್ನಷ್ಟು ಮುನ್ನಡೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.ಬಳಿಕ ಗ್ರಾಮದಲ್ಲಿ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಲಾಯಿತು. ಅಲ್ಲದೆ ಸಿಹಿ ಹಂಚುವ ಮೂಲಕ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪಕ್ಷದ ಮಂಡಲ ಅಧ್ಯಕ್ಷರಾದ ಗುರುನಾಥ ರಾಜಗೀರ, ಮುಖಂಡರಾದ ರಾಜರೆಡ್ಡಿ ಶಾಬಾದ, ಝರೆಪ್ಪಾ ಹಂದಿಕೇರಾ, ಬಸವರಾಜ ಬೋರಾಳ, ರವಿ ಬಾಲೆಬಾಯಿ, ರಾಜಕುಮಾರ ಪಾಂಚಾಳ, ಜಗನಾಥ್ ಮಜಗೆ, ಹೇಮಾ ತುಕ್ಕಾರೆಡ್ಡಿ, ಸಂತೋಷಿ ನಿಡವಂಚಾ, ಶಿಲ್ಪಾ ಭಕ್ತಕುಮಾರ, ಸುಜಾತಾ, ಸುನೀತಾ ಮಂಗಲಗಿ,ತಾಜೋದಿನ್, ವಿನೋದ ಕೋಟೆ. ಮೋಹನ ಕೆಳಕೇರಿ, ಬಸು ಸಜ್ಜನಶೆಟ್ಟಿ, ಜಗನ್ನಾಥ್ ಪಂಡಿತ್, ಮಹಾದೇವ ಚಾಮಾ, ಸೈಯದ್ ಅಬೆದ್ ಅಲಿ, ಸಂಗ್ರಾಮ ಬಿರಾದಾರ, ಬಸವ ವಗ್ಗೆರ, ಚಾಂದಪಾಶ, ವಿಠಲ ಮರಕುಂದಾ, ಗಂಗರಾಮ, ಗಣೇಶ, ಉದಯ, ಗಣಪತಿ. ದತ್ತು, ಭರತ, ಮೇಘರಾಜ, ಸಂಗಮೇಶ, ಮಹೇಶ, ಸಂತೋಷ ಕಾಟೆ, ಓಂಕಾರ ಮತ್ತಿತರರು ಉಪಸ್ಥಿತರಿದ್ದರು.ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರ ಮಾಧ್ಯಮ ಸಂಯೋಜಕ, ಸಹಾಯಕ ನಾಗೇಶ್ ಸಿದ್ದಾ.