ಅ.14ರಿಂದ ಬಿಜೆಪಿಯಿಂದ ಅಹೋರಾತ್ರಿ ಧರಣಿ
BJP to hold overnight sit-in from October 14
ಲೋಕದರ್ಶನ ವರದಿ
ಅ.14ರಿಂದ ಬಿಜೆಪಿಯಿಂದ ಅಹೋರಾತ್ರಿ ಧರಣಿ
ಸಿಂದಗಿ: ಗೋಲಗೇರಿ ಭಾಗದ 15ರಸ್ತೆಗಳಲ್ಲಿ ಒಂದೇ ಕಿಮೀ. ರಸ್ತೆಯನ್ನು ಹಾಲಿ ಶಾಸಕರ ಅವಧಿಯಲ್ಲಿ ಆಗಿದ್ದನ್ನು ಸಾಬೀತು ಪಡಿಸಿದರೆ ನಾನು ರಾಜೀನಾಮೆ ಕೊಡುತ್ತೇನೆಂದು ಸವಾಲು ಹಾಕಿದ್ದೇನೆ. ಆದರೆ ಶಾಸಕರು ಈ ಸವಾಲನ್ನು ಸ್ವೀಕರಿಸಿಲ್ಲ. ದೀಪಾವಳಿಯ ಹಬ್ಬದ ಪಟಾಕಿ ಸದ್ದು ಮುಗಿದ ನಂತರ ನನ್ನ ರಾಜಕೀಯ ಪಟಾಕಿ ಸದ್ದು ಮಾಡಲಿದೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ಸಿಂದಗಿ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನಾದ್ಯಂತ ವರುಣಾರ್ಭಟದಿಂದ ಕಬ್ಬಿನ ಬೆಳೆ ಶೇ.20ರಷ್ಟು ಹಾನಿಯಾದದ್ದನ್ನು ಹೊರತು ಪಡಿಸಿದರೆ ಉಳಿದೆಲ್ಲ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಕೇಂದ್ರ ಸರಕಾರ ಕಬ್ಬಿಗೆ ಎಫ್‌ಆರ್‌ಪಿ ಬೆಲೆ ನಿಗದಿಪಡಿಸಿದೆ. ಹಾಗೆಯೇ ರಾಜ್ಯ ಸರಕಾರವು ಪ್ರತಿ ಟನ್‌ಗೆ ಕಬ್ಬಿಗೆ 4500 ರೂ. ಘೋಷಣೆ ಮಾಡಬೇಕು. ಉಳಿದೆಲ್ಲ ಬೆಳೆ ಹಾನಿಗೆ ಗರಿಷ್ಟ ಪರಿಹಾರ ಶೀಘ್ರವೇ ಬಿಡುಗಡೆ ಮಾಡಬೇಕು ಆಗ್ರಹಿಸಿದರು. ನೆರೆ ಹಾವಳಿಯಿಂದಾಗಿ ತತ್ತರಿಸಿದ ಈ ಭಾಗಕ್ಕೆ ವಿಶೇಷ ಪ್ಯಾಕೇಜ ಬಿಡುಗಡೆ ಮಾಡಬೇಕು. ಅತಿವೃಷ್ಟಿಯಿಂದ ಹಾನಿಯಾದ ರೈತರಿಗೆ 25ಸಾವಿರ ಪರಿಹಾರ ಕೊಡಬೇಕು. ಮಳೆಯಿಂದ ಬಿದ್ದ ಮನೆಗೆ ಬಿಜೆಪಿ ಸರಕಾರ ಕೊಟ್ಟಂತೆ 5ಲಕ್ಷ ಕೊಡಬೇಕು. ಭೀಮಾ ನದಿ ಪ್ರವಾಹ ಬಾದಿತ ಗ್ರಾಮಗಳನ್ನು ಸ್ಥಳಾಂತರಿಸಿ ಶಾಶ್ವತ ವಸತಿ ಸೌಲಭ್ಯ ಒದಗಿಸಿಕೊಡಬೇಕು. ಬಸವ ವಸತಿ ಯೋಜನೆಯಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಡಬೇಕು. ಬಹುವಾರ್ಷಿಕ ಬೆಳೆಗಳಿಗೆ ಎಕರೆಗೆ 1ಲಕ್ಷ ರೂ. ನೀಡಬೇಕು. ಸಿಂದಗಿ, ಆಲಮೇಲ ತಾಲೂಕಿನ ರಸ್ತೆ-ಗುಂಡಿಗಳನ್ನು ತಕ್ಷಣದಲ್ಲಿ ಮುಚ್ಚಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾಜಿ ಲಿಂಬೆ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಬಿಜೆಪಿ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ, ಗುರು ತಳವಾರ ಮಾತನಾಡಿ, ಬಿಜೆಪಿ ರೈತ ಮೋರ್ಚಾ ಮತ್ತು ಮಂಡಲದ ವತಿಯಿಂದ ಮಾಜಿ ಶಾಸಕ ರಮೇಶ ಭುಸನೂರ ಅವರ ನೇತೃತ್ವದಲ್ಲಿ ಅತಿವೃಷ್ಟಿಯಿಂದ ಹಾನೀಗೀಡಾದ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡವಂತೆ ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಅ.14ರಿಂದ ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ 4ಗಂಟೆಗೆ ಅಹೋರಾತ್ರಿ ಧರಣಿ ಆರಂಭಿಸಲಾಗುವುದು. ಎನ್‌ಡಿಎಫ್‌ನಿಂದ ಬಂದ ಪರಿಹಾರ ಹೊರತುಪಡಿಸಿ ರಾಜ್ಯ ಸರಕಾರದಿಂದ ಯಾವುದೇ ಪರಿಹಾರ ಘೋಷಣೆಯಾಗಿಲ್ಲ. ರಾಜ್ಯ ಸರಕಾರ ಎಲ್ಲ ಬೆಳೆಗಳಿಗೆ ಎಫ್‌ಐಡಿ ಮಾಡಿಸಲೆಬೇಕು. ಬೆಂಬಲ ಬೆಲೆ ಬೇರೆ ಬೇರೆ ಜಿಲ್ಲೆಗಗಳಿಗೆ ಹೊಲಿಸಿದರೆ ವಿಜಯಪುರ ಜಿಲ್ಲೆಗೆ ಪರಿಹಾರದ ಮೊತ್ತ ಅತೀ ಕಡಿಮೆ ಇದೆ. ಸರಕಾರ ಕಬ್ಬಿನ ಬೆಲೆ ನಿಗದಿ ಮಾಡುವಾಗ ಕಾರ್ಖಾನೆ ಮಾಲೀಕರ ಸಭೆಯನ್ನಷ್ಟೇ ಮಾಡದೆ ರೈತರ, ಮುಖಂಡರ ಸಭೆ ಮಾಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪೀರು ಕೆರೂರ, ಗುರು ತಳವಾರ, ಅಶೋಕ ನಾರಾಯಣಪೂರ, ಪ್ರಶಾಂತ ಕದ್ದರಕಿ, ಬಂಗಾರೆಪ್ಪಗೌಡ ಬಿರಾದಾರ, ಸಿದ್ದರಾಮ ಆನಗೊಂಡ, ಮಲ್ಲಿಕಾರ್ಜುನ ಸಾವಳಸಂಗ, ಎಸ್.ಎನ್.ಹಿರೇಮಠ ಸೇರಿದಂತೆ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 