ಬಿಜೆಪಿಯವರು ಧರ್ಮಸ್ಥಳ ವಿಚಾರವನ್ನ ರಾಜಕೀಯವಾಗಿ ಉಪಯೋಗ ಮಾಡಬಾರದು : ಆರ್.ವಿ.ದೇಶಪಾಂಡೆ
BJP should not use Dharmasthala issue politically: R.V. Deshpande
ಕಾರವಾರ 01: ಬಿಜೆಪಿಯವರು ಧರ್ಮಸ್ಥಳ ವಿಚಾರವನ್ನ ರಾಜಕೀಯವಾಗಿ ಉಪಯೋಗ ಮಾಡಬಾರದು ಎಂದು ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷ ಆರ್.ವಿ ದೇಶಪಾಂಡೆ ಅಭಿಪ್ರಾಯಪಟ್ಟರು.
ಸೂಫಾ ಜಲಾಶಯಕ್ಕೆ ಬಾಗಿನ ಅರೆ್ಣ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು. ಬಿಜೆಪಿಯವರು ಧರ್ಮಸ್ಥಳ ವಿಚಾರವನ್ನ ರಾಜಕೀಯವಾಗಿ ಬಳಸುತ್ತಿದ್ದಾರೆ. ಪ್ರತಿಯೊಂದನ್ನು ರಾಜಕೀಯವಾಗಿ ಬಳಸುವುದು ಒಳ್ಳೆಯದಲ್ಲ. ನಾಡಿನ ಜನತೆ ಬುದ್ಧಿವಂತರಿದ್ದಾರೆ. ಜನರಿಗೆ ವಿಚಾರ ಮಾಡುವ ಶಕ್ತಿ ಇದೆ ಎಂದರು. ಧರ್ಮಸ್ಥಳದ ಪಾವಿತ್ರ್ಯತೆ ಹಾಳು ಮಾಡುವ ಯಾರೇ ಷಡ್ಯಂತ್ರಿಗಳಿಗೆ ಶಿಕ್ಷೆ ಆಗುತ್ತದೆ. ಎಸ್ ಐ ಟಿ ಸೂಕ್ತ ತನಿಖೆ ಮಾಡುತ್ತಿದೆ. ನಾನು ಕೂಡಾ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಶಿಷ್ಯ ಎಂದ ದೇಶಪಾಂಡೆ , ಸತ್ಯ ಸತ್ಯ ಇರುತ್ತದೆ, ಸತ್ಯವನ್ನ ಸುಳ್ಳು ಮಾಡಲು ಸಾಧ್ಯವಿಲ್ಲ ಎಂದರು. ಅಲ್ಲಿನ ಕ್ಷೇತ್ರದ ಬಗ್ಗೆ ಆರೋಪ ಬಂದಿಲ್ಲ. ಅಲ್ಲಿನ ಸಾವುಗಳ ಬಗ್ಗೆ ಆರೋಪ ಬಂದಿದೆ. ವಿಷಯ ಕೋರ್ಟಗೆ ಹೋದ ಬಳಿಕ, ರಾಜ್ಯ ಸರಕಾರ ಎಸ್ ಐ ಟಿ ತನಿಖೆಗೆ ಆದೇಶ ಮಾಡಿದೆ. ಬಿಜೆಪಿ ಸಹ ಎಸ್ ಐಟಿ ತನಿಖೆ ಸ್ವಾಗತಿಸಿದೆ. ಅಪಪ್ರಚಾರ ಮಾಡಿದ್ದರೂ ಸಹ ಅದು ಬಯಲಿಗೆ ಬರಲಿದೆ.
ಈ ಹಂತದಲ್ಲಿ ರಾಜಕೀಯ ಲಾಭಕ್ಕೆ ಬಿಜೆಪಿ ಸಮಾವೇಶ ಮಾಡುವುದು, ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು. ಸುದೀರ್ಘ ರಾಜಕೀಯ ಅನುಭವದಿಂದ ಹೇಳುತ್ತಿದ್ದೇನೆ, ವಿಷಯ ಆಧರಿಸಿ ಹೋರಾಟ ಮಾಡಲಿ. ಆದರೆ ಧರ್ಮದ ಹೆಸರಲ್ಲಿ ಇಂತಹ ರಾಜಕಾರಣ ಯಾರಿಗೂ ಒಳ್ಳೆಯದಲ್ಲ ಎಂದು ದೇಶಪಾಂಡೆ ನುಡಿದರು. ಧರ್ಮಸ್ಥಳ ಪಾವಿತ್ರ್ಯತೆ ಅರಿತು ಹೆಜ್ಜೆ ಹಾಕಬೇಕು. ನಮಗೂ ಆ ಕ್ಷೇತ್ರದ ಬಗ್ಗೆ ಗೌರವವಿದೆ. ಇದರಲ್ಲಿ ರಾಜಕೀಯ ಬೇಕಿರಲಿಲ್ಲ ಎಂದರು. ದಸರಾ ಯಾರು ಉದ್ಘಾಟನೆ ಮಾಡಿದರೆ ಏನು ಸಮಸ್ಯೆ : ಮೈಸೂರು ದಸರಾ ರಾಜ್ಯದ ನಾಡ ಹಬ್ಬ ಆಗಿದೆ.ದಸರಾ ಹಬ್ಬ ಎಲ್ಲರಿಗೂ ಸೇರಿದ್ದು. ಅದರ ಉದ್ಘಾಟನೆಗೆ ಅಲ್ಪಸಂಖ್ಯಾತರು, ಹಿಂದುಳಿದವರು ,ಮುಂದುವರಿದವರು ಎಂದು ನೋಡಬಾರದು. ಈ ವಿಷಯದಲ್ಲಿ ಸಹ ಬಿಜೆಪಿ ಅನಗತ್ಯ ಹೇಳಿಕೆ ನೀಡಿತು. ವಿರೋಧ ಪಕ್ಷಕ್ಕೂ ಒಂದು ಜಾವಾಬ್ದಾರಿ ಇದೆ ಎಂಬುದನ್ನು ಮರೆಯಬಾರದು ಎಂದು ಹಿರಿಯ ರಾಜಕಾರಣಿ ದೇಶಪಾಂಡೆ ಹೇಳಿದರು.
ಕನ್ನಡದ ಪ್ರಖ್ಯಾತ ಲೇಖಕಿ, ಭಾನು ಮುಷ್ತಾಕ್ ಕನ್ನಡಕ್ಕೆ ಅಂತರಾಷ್ಟ್ರೀಯ ಮನ್ನಣೆ ತಂದವರು. ಚಾಮುಂಡೇಶ್ವರಿ ಬಗ್ಗೆ ತಮಗೆ ಗೌರವ ಇದೆ. ನಾಡ ಹಬ್ಬವನ್ನು ಗೌರವಿಸುವುದಾಗಿ ಹೇಳಿದ್ದಾರೆ. ಇಷ್ಟು ಸ್ಪಷ್ಟನೆ ನೀಡಿದ ಮೇಲೆ, ಈ ವಿಷಯದಲ್ಲಿ ಬಿಜೆಪಿ ವಿವಾದ ಹುಟ್ಟು ಹಾಕಬಾರದಿತ್ತು. ಮೈಸೂರು ಅರಸರ ಹಿನ್ನೆಲೆ, ಅದು ಇತರೆ ಸಮುದಾಯಗಳನ್ನು ನಡೆಸಿಕೊಂಡ ರೀತಿಯ ಬಗ್ಗೆ ಗಮನಿಸಬೇಕಿತ್ತು. ಉದ್ಘಾಟನೆಗೆ ಮಹಿಳೆಯನ್ನು ಕರೆದರು ಎಂದು ತಕರಾರು ಸರಿಯಲ್ಲ. ಇದರಲ್ಲಿ ಅಲ್ಪಸಂಖ್ಯಾತರು, ಬಹುಸಂಖ್ಯಾತರು ಅಂತ ತಾರತಮ್ಯ ಮಾಡಬಾರದು ಎಂದು ದೇಶಪಾಂಡೆ ಹೇಳಿದರು. ಎಲ್ಲ ಜನಾಂಗದವರಿಗೂ ದಸರಾ ಹಕ್ಕಿದೆ ಎಂದ ಹಿರಿಯ ಕಾಂಗ್ರೆಸ್ಸಿಗ ದೇಶಪಾಂಡೆ , ಬಾನು ಮುಷ್ತಾಕ್ ಅವರು ಒಳ್ಳೆಯ ಲೇಖಕರು. ಒಳ್ಳೆಯ ಸಾಧನೆ ಮಾಡಿದ್ದಾರೆ. ಅವರ ಸಾಧನೆಯನ್ನ ಮೆಚ್ಚಿ ಸರ್ಕಾರ ದಸರಾ ಉದ್ಘಾಟನೆಗೆ ಆಹ್ವಾನ ಮಾಡಿದೆ ಎಂದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 