ಕಾಲ್ತುಳಿತ ಪ್ರಕರಣ ಬಿಜೆಪಿ ಪ್ರತಿಭಟನೆ
BJP protests over stampede case- Siggavi- News
ಶಿಗ್ಗಾವಿ 18 : ಬೆಂಗಳೂರು ಕಾಲ್ತುಳಿತದಲ್ಲಿ 11ಜನರ ಸಾವಿಗೆ ಸರಕಾರ ಹೊಣೆ ಎಂದು ಆರೋಪಿಸಿ ಪಟ್ಟಣದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು. ರಾಜ್ಯ ಸರಕಾರದ ವೈಫಲ್ಯದಿಂದ ಇಂತಹ ಅನಾಹುತ ಸಂಭವಿಸಿದೆ.
ಸರಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು 5 ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವದು ಖಂಡನೀಯ. ಕೂಡಲೆ ಅಮಾನತು ಹಿಂಪಡೆದು ಈ ಘಟನೆಯ ನೈತಿಕ ಹೊಣೆ ಹೊತ್ತು ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಶಿಗ್ಗಾವಿ ಮಂಡಲ ಅಧ್ಯಕ್ಷ ವಿಶ್ವನಾಥ ಹರವಿ ಆಗ್ರಹಿಸಿದರು.್ಷ
ಶಿಗ್ಗಾವಿ ಬಿಜೆಪಿ ಮಂಡಲದವತಿಯಿಂದ ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ರಾಜ್ಯ ಸರ್ಕಾರದ ವೈಪಲ್ಯ ಖಂಡಿಸಿ ಮಾನವ ಸರಪಳಿಯ ಮೂಲಕ ದಿಕ್ಕಾರ ಕೂಗಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಯುವ ಮೋರ್ಚಾ ರಾಜ್ಯ ಸಮಿತಿ ಸದಸ್ಯ ನರಹರಿ ಕಟ್ಟಿ, ಮಾಜಿ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಪ್ರಧಾನ ಕಾಯದರ್ಶಿ ರೇಣುಕನಗೌಡ ಪಾಟೀಲ,ಪುರಸಭೆ ಸದಸ್ಯರಾದ ಪರುಶರಾಮ ಸೊನ್ನದ, ದಯಾನಂದ ಅಕ್ಕಿ, ಮಂಜುನಾಥ ಬ್ಯಾಹಟ್ಟಿ, ಸೋಮಶೇಖರ ಗೌರಿಮಠ, ಕರಿಯಪ್ಪ ಕಟ್ಟಿಮನಿ, ಶರೀಫಸಾಬ ನದಾಫ, ಹೊನ್ನಪ್ಪ ಹೂಗಾರ, ಸಂಜೀವ ಮಣ್ಣಣ್ಣವರ,ರಮೇಶ ಸಾತಣ್ಣವರ, ಪ್ರತೀಕ ಕೊಳೇಕರ, ಚೇತನ ಕಲಾಲ, ಸಚಿನ ಮಡಿವಾಳರ, ಕಿರಣ ಬಡ್ಡಿ, ಸಂಜೀವ ಬಾರಿಗಿಡದ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 