ಧರ್ಮಸ್ಥಳ ಅಪಪ್ರಚಾರ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
BJP protests against state government, condemning Dharmasthala propaganda
ಚಡಚಣ 31: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಹಾಗೂ ಷಡ್ಯಂತ್ರದ ವಿರುದ್ಧ ‘ಧರ್ಮದ ಉಳಿವಿಗಾಗಿ ಧರ್ಮ ಯುದ್ಧ’ ಎಂಬ ಘೊಷಣೆಯೊಂದಿಗೆ ನೂರಾರು ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಸ್ಥಳೀಯ ಬಸವೇಶ್ವರ ವೃತ್ತದಿಂದ ಆರಂಭಗೊಂಡ ರಾ್ಯಲಿ ತಹಶೀಲ್ದಾರ ಕಚೇರಿ ತಲುಪಿತು. ರಾ್ಯಲಿಯುದ್ದಕ್ಕೂ ಸರ್ಕಾರದ ಹಿಂದೂ ವಿರೋಧ ನೀತಿಯನ್ನು ಖಂಡಿಸಿ, ರಾಜ್ಯ ಸರ್ಕಾರದ ವಿರುದ್ಧ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಅಪಪ್ರಚಾರದ ಮಾಡಿದವರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಯುವ ನಾಯಕ ಸಂಜೀವ ಐಹೊಳ್ಳಿ, ಚಡಚಣ ಮಂಡಲ ಅಧ್ಯಕ್ಷ ಕಾಂತುಗೌಡ ಪಾಟೀಲ, ನಾಗಠಾಣ ಮಂಡಲ ಅಧ್ಯಕ್ಷ ಸಿದಗೊಂಡ ಬಿರಾದಾರ, ತಾ.ಪಂ. ಮಾಜಿ ಸದಸ್ಯ ರಾಜು ಝಳಕಿ, ಮುಖಂಡ ಚಿದಾನಂದ ಛಲವಾದಿ ಮತ್ತಿತರರು ಮಾತನಾಡಿ, ಧರ್ಮಸ್ಥಳವು ಸತ್ಯಧರ್ಮದ ನಿಲಯವಾದ ಧರ್ಮಸ್ಥಳ ಕ್ಷೇಥ್ರವು ಲಕ್ಷಾಂತರ ಪರಮಪಾವನ ಸ್ಥಳವಾಗಿದೆ. ಜಾತಿ, ಮರಗಳ ಬೇಧಭಾವ ಮರೆತು ಡಾಽ ವಿರೇಂದ್ರ ಹೆಗ್ಗಡೆಯವರು ಬಡವರ ಬದುಕಿಗೆ ಬೆಳಕನ್ನು ನೀಡಿದ್ದಾರೆ ಮತ್ತು ಎಷ್ಟೋ ಬಡ ಕುಟುಂಬಗಳ ಹೆಣ್ಣು ಮಕ್ಕಳಿಗೆ ಆರ್ಥಿಕ ಸಹಾಯ ನೀಡಿ ಅವರ ಬದುಕನ್ನು ಹಸನು ಮಾಡುವುದರ ಜೊತೆಗಡೆ ಮಹಿಳಾ ಸಬಲೀಕರಣ ಮಾಡುತ್ತಿದ್ದಾರೆ. ಇಂತಹ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ದುಷ್ಟಶಕ್ತಿಗಳ ಅಪಪ್ರಚಾರ ಭಕ್ತರ ಮನಸ್ಸಿಗೆ ನೋವುಂಟುಮಾಡಿದೆ. ಧರ್ಮ ರಕ್ಷಣೆಗೆ ನಾವೆಲ್ಲರೂ ಒಂದಾಗಿ ಹೋರಾಡೋಣ ಎಂದು ಹೇಳದ ಅವರು, ರಾಜ್ಯ ಸರ್ಕಾರ ಯಾರದ್ದೋ ಮಾತು ಕೇಳಿ ಈ ರೀತಿ ಕೊಟ್ಯಾಂತರ ರೂ. ಖರ್ಚು ಮಾಡಿ ತನಿಖೆ ನಡೆಸುವುದು ಸರಿಯಲ್ಲ. ಈಗ ತನಿಖೆ ನಡೆದಿದೆ. ಆದರೆ ಎಲ್ಲಿಯೂ ಒಂದೇ ಒಂದು ಮೂಳೆ ಪತ್ತೆ ಆಗಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದ ಅವರು, ರಾಜ್ಯದ ಲಕ್ಷಾಂತರ ಭಕ್ತರ ಆಧ್ಯಾತ್ಮಿಕ ಕೇಂದ್ರವಾಗಿರುವ ಧರ್ಮಸ್ಥಳದ ಬಗ್ಗೆ ಕೆಲವರು ದುರುದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡಿದ್ದಾರೆ. ಪೊಲೀಸ್ ತನಿಖೆ ನಂತರ ಅವರ ನಿಜಸ್ವರೂಪ ಬಹಿರಂಗವಾಗಿದೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಉಮೇಶ ಕೊಳಕೂರ, ನಸವರಾಜ ಬೈಚಬಾಳ, ಪ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ, ಮುಂಖಂಡರಾದ ರಾಮ ಅವಟಿ, ನಾಗನಾಥಗೌಡ ಬಿರಾದಾರ, ಚಂದ್ರಶೇಖರ ನಿರಾಳೆ, ಪ್ರಭಾಕರ ನಿರಾಳೆ, ಗಂಗಾಧರ ಪಾವಲೆ, ಪ.ಪಂ. ಸದಸ್ಯರಾದ ಅರವಿಂದ ಗಡ್ಡದೇವರಮಠ, ಪ್ರಮೋದ ಮಠ, ಸಿದ್ಧಾರಾಮ ಬಗಲಿ, ಕೇದಾರ ವಾಳಿಖಿಚಿಡಿ, ಭೀಮನಗೌಡ ಬಿರಾದಾರ, ಮಹಿಳಾ ಸ್ವಸಹಾಯ ಗುಂಪಿನ ಪದಾಧಿಕಾರದ ವಿಜಯಲಕ್ಷ್ಮೀ ಸೋಲಾಪೂರ, ಇಂತಾಜ ನದಾಫ, ಭಾಗ್ಯಶ್ರೀ ಸಿಂದ ಸೇರಿದಂತೆ ನೂರಾರು ಕಾರ್ಯಕರ್ತರು, ಭಕ್ತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 