ಬೆಂಗಳೂರು, ಅ 1: ಸುಪ್ರೀಂಕೊರ್ಟ್ ನಲ್ಲಿ ಅರ್ಜಿ ವಿಚಾರಣೆ ತೀಪು ಇನ್ನೂ ಬಾಕಿ ಇರುವುದರಿಂದ ಈಗಲೇ ಬಿಜೆಪಿ ಸೇರುತ್ತೇನೆ ಎಂದು ಹೇಳಲು ಬರುವುದಿಲ್ಲ ಎಂದು ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಹದಿನೇಳು ಜನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದಲೇ ಬಿಜೆಪಿ ಸರ್ಕಾರ ರಚನೆ ಆಗಿದೆ.
ಸರ್ಕಾರ ರಚನೆಗೆ ನಾವು ಸಹಕರಿಸಿದ್ದಕ್ಕಾಗಿಯೇ ನಮ್ಮ ಬಗ್ಗೆ ಬಿಜೆಪಿಗೆ ಮೃದು ಧೋರಣೆಯಿದೆ. ಆದ್ದರಿಂದ ಉಪಚುನಾವಣೆಗೆ ನಮಗೆ ಟಿಕೆಟ್ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ ಎಂದರು. ಮೊದಲು ನ್ಯಾಯಾಲಯದ ತೀಪು ಬರಲಿ. ಆ ನಂತರ ಯಾವ ಪಕ್ಷಕ್ಕೆ ಸೇರಬೇಕು ಎಂಬ ಬಗ್ಗೆ ನಿರ್ಧಾರ ಮಾಡಲಾಗುವುದು. ಯಾರು ಏನೇ ಹೇಳಿದರೂ ಗೊಂದಲ ಸೃಷ್ಟಿ ಮಾಡಿದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಪ್ರತಾಪ್ ಗೌಡ ಸ್ಪಷ್ಟಪಡಿಸಿದರು.