ಕಾಂಗ್ರೆಸ್ ನ “ರಾಜಧರ್ಮ” ಹೇಳಿಕೆಗೆ ಬಿಜೆಪಿ ವಾಗ್ದಾಳಿ

ನವದೆಹಲಿ, ಫೆ ೨೮ :   ಕೇಸರಿ ಪಕ್ಷಕ್ಕೆ ’ರಾಜಧರ್ಮ’  ಬೋಧಿಸುವ  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ.  ಮತ್ತೊಂದು ಕಡೆ    ಸರ್ಕಾರದ  ವಿರುದ್ದ  ಜನರನ್ನು  ಪ್ರಚೋದಿಸುತ್ತಿದ್ದಾರೆ  ಎಂದು ಕಾಂಗ್ರೆಸ್ ವಿರುದ್ಧ   ಬಿಜೆಪಿ   ಶುಕ್ರವಾರ  ತೀವ್ರ ವಾಗ್ದಾಳಿ ನಡೆಸಿದೆ.

ಪಕ್ಷದ ಕೇಂದ್ರ ಕಚೇರಿಯಲ್ಲಿಂದು ಮಾಧ್ಯಮಗಳೊಂದಿಗೆ   ಮಾತನಾಡಿದ  ಪಕ್ಷದ  ಹಿರಿಯ ನಾಯಕ,  ಕೇಂದ್ರ ಸಚಿವ  ರವಿಶಂಕರ್ ಪ್ರಸಾದ್,   ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಗುರುವಾರ ಭೇಟಿ  ಮಾಡಿದ್ದ    ಸೋನಿಯಾ ಗಾಂಧಿ ನೇತೃತ್ವದ   ಕಾಂಗ್ರೆಸ್  ನಿಯೋಗ  ಇತರರಿಗೆ ರಾಜಧರ್ಮ ಬೋಧಿಸಲು ಹೊರಟಿದೆ.  ಆದರೆ,  ನೆರೆಯ ಮೂರು ದೇಶಗಳ  ಅಲ್ಪಸಂಖ್ಯಾತರಿಗೆ  ಪೌರತ್ವ  ಕಲ್ಪಿಸುವ  ವಿಷಯದಲ್ಲಿ   ಪದೇ ಪದೇ  ನಿಲುವು  ಬದಲಾಯಿಸುತ್ತಿರುವುದು  ಏಕೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು  ಒತ್ತಾಯಿಸಿದ್ದಾರೆ.

ಕೇಂದ್ರ  ಸರ್ಕಾರ   ಶಾಂತಿ  ಸೌಹಾರ್ದತೆ ಕಾಪಾಡಿ.  ಸಹ ಬಾಳ್ವೆಯನ್ನು  ಪುನರ್ ಸ್ಥಾಪಿಸಲು  ಸಾಮೂಹಿಕವಾಗಿ  ಪ್ರಯತ್ನಿಸುತ್ತಿರುವಾಗ  ಅತ್ಯಂತ ಸೂಕ್ಷ್ಮ ವಿಷಯವನ್ನು  ಕಾಂಗ್ರೆಸ್  ರಾಜಕೀರಣಗೊಳಿಸುತ್ತಿರುವುದನ್ನು   ಅತ್ಯಂತ ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ   ಅಲ್ಪಸಂಖ್ಯಾತ  ಸಮುದಾಯಗಳಿಗೆ   ನೀಡಿತ್ತಿರುವ   ಹಿಂಸೆಯ  ಬಗ್ಗೆ  ಸೋನಿಯಾ ಗಾಂಧಿ   ಸ್ಪಷ್ಟನೆ  ನೀಡಬೇಕೆಂದು    ಸಚಿವ ರವಿಶಂಕರ್ ಪ್ರಸಾದ್ ಆಗ್ರಹಿಸಿದ್ದಾರೆ.

ಇಂದಿರಾಗಾಂಧಿ ಉಗಾಂಡಾದ ವಲಸಿಗರಿಗೆ ಸಹಾಯ ಮಾಡಿದ್ದರು.   ರಾಜೀವ್  ಗಾಂಧಿ  ತಮಿಳು ನಿರಾಶ್ರಿತರಿಗೆ  ನೆರವು ನೀಡಿದ್ದರು.  ಡಾ. ಮನಮೋಹನ್ ಸಿಂಗ್   ಪೌರತ್ವ  ನೀಡಬೇಕು ಎಂದು ಹೇಳಿದ್ದರು.  ಅಶೋಕ್ ಗೆಹ್ಲೋಟ್     ಪಾಕಿಸ್ತಾನದ  ಹಿಂದೂಗಳಿಗೆ  ಭಾರತೀಯ  ಪೌರತ್ವ  ನೀಡಬೇಕು ಎಂದು  ಅಂದಿನ  ಗೃಹ  ಸಚಿವರಾಗಿದ್ದ   ಶಿವರಾಜ್ ಪಾಟೀಲ್ ಮತ್ತು ಎಲ್ ಕೆ ಅಡ್ವಾಣಿಗೆ ಪತ್ರ ಬರೆದಿದ್ದಾರೆ  ಎಂದು  ಸಚಿವ ಪ್ರಸಾದ್ ಹೇಳಿದರು.

ಈ ವಿಷಯದಲ್ಲಿ  ಕಾಂಗ್ರೆಸ್   ತನ್ನ ನಿಲುವು ಬದಲಾಯಿಸಿಕೊಳ್ಳುತ್ತಿರುವುದು  ಏಕೆ?  ಇದರ  ಹಿಂದಿನ    ಕಾರಣ ಏನು?  ಈ  ವಿಷಯದಲ್ಲಿ  ಡಾ. ಮನಮೋಹನ್ ಸಿಂಗ್,   ಇಂದಿರಾ ಹಾಗೂ ರಾಜೀವ್ ಗಾಂಧಿ ಮಾಡಿದ್ದು ತಪ್ಪೇ   ಎಂದು ಅವರು ಪ್ರಶ್ನಿಸಿದ್ದಾರೆ.

ಶಾಹೀನ್ ಬಾಗ್ ನಲ್ಲಿ   ಪ್ರಧಾನಿ  ನರೇಂದ್ರ ಮೋದಿ ವಿರುದ್ದ   ಮಕ್ಕಳನ್ನು  ಹಿಂಸೆಗೆ ಪ್ರಚೋದಿಸುವಾಗ  ಸೋನಿಯಾ ಗಾಂಧಿ ಅವರು   ವಹಿಸಿದ್ದ  ಮೌನ ಸರಿಯೇ  ಸಚಿವ ಪ್ರಸಾದ್   ಪ್ರಶ್ನಿಸಿದ್ದಾರೆ.