ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ: ಜನಾರ್ದನ ರೆಡ್ಡಿ

ಸಿದ್ದರಾಮಯ್ಯನವರಿಗೆ ಮುಡ ತೊಂದರೆ ನೀಡುತ್ತಿರುವುದು ಡಿಕೆಶಿ ಮತ್ತು ಮೂಲ ಕಾಂಗ್ರೆಸ್ಸಿಗರು  

ಬಳ್ಳಾರಿ 16: ಈ ಬಾರಿ ಹಾಲುಮತ ಮುಖಂಡರ ಸಭೆಯೊಂದಿಗೆ ರಾಜಕೀಯ ಚಟುವಟಿಕೆ ಆರಂಭ ಮಾಡಿದ್ದೇನೆ ಸಂಡೂರು ಕುಮಾರಸ್ವಾಮಿ ಹಾಗೂ ಬಳ್ಳಾರಿ ದುರ್ಗಾದೇವಿಯ ಆಶೀರ್ವಾದ ನನ್ನ ಮೇಲಿದೆ ಇದರಿಂದ ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಶತಸಿದ್ಧ ಎಂದು ಮಾಜಿ ಸಚಿವ ಹಾಗೂ ಹಾಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಿಶ್ವಾಸವನ್ನು ವ್ಯಕ್ತಪಡಿಸಿದರು.    

ಅವರು ಇಂದು ನಗರದ ಹವಾಂಭಾವಿ ಪ್ರದೇಶದ ಗೃಹ ಕಚೇರಿಯಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಹಿನ್ನಲೆಯಲ್ಲಿ ಸಂಡೂರು ತಾಲೂಕಿನ ಹಾಲುಮತ ಸಮಾಜದ ಬಾಂಧವರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸಿದ್ದರಾಮಯ್ಯಗೆ ಕಷ್ಟ ಕಾಲದಲ್ಲಿ ನಾನು ಏನ್ ಸಹಾಯ ಮಾಡಿದ್ದೆ ಅನ್ನೋದು ಅವರಿಗೆ ಮಾತ್ರ ಗೊತ್ತು ಅದನ್ನು ಅವರ ಮನಸಾಕ್ಷಿಗೆ ಬಿಡುತ್ತೇನೆ, ಅವರ ಬಗ್ಗೆ ನನಗೆ ಗೌರವ ಇದೆ. ಆದರೆ ಸಿದ್ದರಾಮಯ್ಯ ರಾಜಕೀಯಕ್ಕಾಗಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ನಾನು ಜೈಲಿಗೆ ಹೋಗಲು ಅವರು ಸಹ ಕಾರಣರಾದರು ಎಂದು ಖೇದವನ್ನು ವ್ಯಕ್ತಪಡಿಸಿದರು.  

14 ವರ್ಷದಿಂದ ನಾನು ಬಳ್ಳಾರಿ ಜಿಲ್ಲೆಯಿಂದ ನನ್ನ ಬಳ್ಳಾರಿ ಜನತೆಯಿಂದ ದೂರವಿದ್ದೆ ಅ ನೋವು ಬಹಳ ಇದೆ, ಲಕ್ಷ ಕೋಟಿ ಲೂಟಿ ಮಾಡಿದ್ದೇನೆ ಎಂದು ನನ್ನ ವಿರುದ್ದ ಅಪಪ್ರಚಾರ ಮಾಡಿದ್ರು ಆದರೆ ನಾನು ಬೇರೆಯವರ ಅಥವಾ ಸರ್ಕಾರದ ಒಂದು ನೂರು ರೂಪಾಯಿ ಸಹ ಮುಟ್ಟಿರೋದಿಲ್ಲ ಎಂದರು ಎಂದು ತನ್ನ ಮನದ ನೋವನ್ನು ತೋಡಿಕೊಂಡರು. ಸಿದ್ದರಾಮಯ್ಯ ನವರಿಗೆ ಮುಡಾ ಹಗರಣದಿಂದ ತೊಂದರೆಯಾಗಿರುವುದು ಬಿಜೆಪಿಯಿಂದ ಅಲ್ಲ ಡಿಕೆಶಿ ಮತ್ತು ಅವರ ಸ್ವ ಪಕ್ಷಯರಿಂದಲೇ ಅವರಿಗೆ ತೊಂದರೆಯಾಗಿದೆ, ಇದನ್ನ ಈ ಹಿಂದೆ ಡಿಕೆಶಿ ತಾಯಿ ಹೇಳಿದ್ದಾರೆ. 2028 ರ ಚುನಾವಣೆಯಲ್ಲಿ 150 ಸ್ಥಾನ ಗೆದ್ದು ಬಿಜೆಪಿ ಅಧಿಕಾರಕ್ಕೆ ಬಂದೆ ಬರುತ್ತೆ ಸಂಡೂರು ಉಪಚುನಾವಣೆಯ ಗೆಲುವು ಇದಕ್ಕೆ ಬುನಾದಿ ಎಂದರು. ಇದುವರೆಗೆ ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿಲ್ಲ ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಮೂಲಕ ಚರಿತ್ರೆ ಸೃಷ್ಟಿಸಬೇಕಾಗಿದೆ ನಾನು ಮಾತು ಕೊಟ್ರೆ ಖಂಡಿತ ಈಡೇರಿಸುವೆ ನಾನು ಪ್ರಾಣ ಬಿಡ್ತೇನೆ ಹೊರತು ಕೊಟ್ಟ ಮಾತು ತಪ್ಪಲ್ಲ ಎಂದು ಹಾಲುಮತ ಸಮಾಜದ ಮುಖಂಡರ ಸಭೆಯಲ್ಲಿ ತಿಳಿಸಿದರು. ಜಿಲ್ಲೆಯಲ್ಲಿ ಇನ್ನಷ್ಟು ಗಣಿಗಾರಿಕೆಯನ್ನು ನಡೆಸಲು ಅನುಮತಿ ನೀಡಬೇಕಿದೆ ಜೊತೆಗೆ ಮೂರ್ ನಾಲ್ಕು ಕೈಗಾರಿಕೆ ಕಾರ್ಖಾನೆಗಳು ಕೂಡ ಸ್ಥಾಪನೆ ಆಗಬೇಕಿದೆ ಇದರಿಂದ ಉತ್ತರ ಕರ್ನಾಟಕ ಭಾಗದ ಸುಮಾರು 10 ಲಕ್ಷ ಯುವಕರಿಗೆ ಉದ್ಯೋಗ ಸಿಗುತ್ತದೆ ಇದು ನನ್ನ ಗುರಿಯಾಗಿದ್ದು ಇದನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಮುಂದಿನ ದಿನಗಳಲ್ಲಿ ಕಾರ್ಯಗತಗೊಳಿಸುತ್ತೇನೆ ಎಂದರು.  

ಇದಕ್ಕೆ ಸಾಕ್ಷಿಯಾಗಿ ಸಂಡೂರು ತಾಲೂಕಿನಲ್ಲಿ ನನ್ನ ಅವಧಿಯಲ್ಲಿ ನಿರ್ಮಿಸಲಾದ ಇಂದಿಗೂ ಸುಸ್ಥಿತಿಯಲ್ಲಿರುವ ಸಿಸಿ ರೋಡ್ ಗಳೇ ಕಾರಣ ಎಂದು ತಮ್ಮ ಕಾಲದ ಅಭಿವೃದ್ಧಿ ಕೆಲಸಗಳನ್ನು ನೆನಪಿಸಿಕೊಂಡರು.ಈ ಸಭೆಯ ವೇದಿಕೆಯಲ್ಲಿ ಮಾಧ್ಯಮ ವಕ್ರರಾದ ಮಲ್ಲಿಕಾರ್ಜುನ ಆಚಾರ್, ಮಾಜಿ ಬುಡ  ಅಧ್ಯಕ್ಷ ದಮ್ಮೂರು ಶೇಖರ್, ಸಂಗೊಳ್ಳಿ ರಾಯಣ್ಣ ಸಂಘದ ಜಿಲ್ಲಾಧ್ಯಕ್ಷ ಬಟ್ಟಿ ಎರ್ರಿಸ್ವಾಮಿ, ಕಟ್ಟೆ ಬಸಪ್ಪ,   ಸಂಡೂರು ತಾಲೂಕಿನ ಮುಖಂಡರಾದ ಅಂಬಣ್ಣ ತಿರುಮಲೇಶ ನಾಗರಾಜ ಸೇರಿದಂತೆ ನೂರಾರು ಜನರು ಸಭೆಯಲ್ಲಿ ಇದ್ದರು.