ಪುದುಚೆರಿ: ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಬೆದರಿಕೆಗಳಿಗೆ ಬಿಜೆಪಿ ಹೆದರುವುದಿಲ್ಲ-ಸಾಮಿನಾಥನ

ಪುದುಚೆರಿ: ಫೆ 20, ಆಡಳಿತಾರೂಢ ಪಕ್ಷವಾದ ಕಾಂಗ್ರೆಸ್ ನ ಸವಾಲುಗಳನ್ನು ಎದುರಿಸಲು ಬಿಜೆಪಿ ಸಿದ್ಧವಾಗಿದ್ದು, ಅದು ಒಡ್ಡುವ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಪುದುಚೆರಿ ಬಿಜೆಪಿ ಘಟಕದ ಅಧ್ಯಕ್ಷ ವಿ ಸಾಮಿನಾಥನ್ ಗುರುವಾರ ಹೇಳಿದ್ದಾರೆ.  ಸರ್ಕಾರದಲ್ಲಿನ ಭ್ರಷ್ಟಾಚಾರ ವಿರುದ್ಧ ಪ್ರತಿಭಟಿಸಿ ಬಿಜೆಪಿ ಎಲ್ಲಾ 30 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಆಯೋಜಿಸಿರುವ ಹೋರಾಟಗಳಿಗೆ ಪ್ರತಿಯಾಗಿ ಪ್ರತಿಭಟನೆಗಳನ್ನು ನಡೆಸುವಂತೆ  ಮುಖ್ಯಮಂತ್ರಿ ವಿ ನಾರಾಯಣಸಾಮಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ ಎಂದು ಸಾಮಿನಾಥನ್ ಆರೋಪಿಸಿದ್ದಾರೆ.   ಮುಖ್ಯಮಂತ್ರಿಯವರ ಈ ಹೇಳಿಕೆ ಹಿಂಸಾಚಾರವನ್ನು ಪ್ರಚೋದಿಸಲಿದೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದ ಮತಗಳನ್ನು ಕ್ರೋಢೀಕರಿಸಲು ನಾರಾಯಣ ಸ್ವಾಮಿ ಯೋಜನೆ ರೂಪಿಸಿದ್ದಾರೆ. ಆದರೆ, ಇದು ಹಗಲು ಕನಸಾಗಲಿದೆ ಎಂದು ಸಾಮಿನಾಥನ್ ಹೇಳಿದ್ದಾರೆ.   ಆದರೆ, ಪುದುಚೇರಿಯಲ್ಲಿ ವಿಷಯಗಳು ಬದಲಾಗಿವೆ. ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗಳಿಂದಾಗಿ ಅನೇಕರು ಬಿಜೆಪಿಯೊಂದಿಗಿದ್ದಾರೆ ಎಂದು ಬಿಜೆಪಿ ಶಾಸಕರೂ ಆದ ಸಾಮಿನಾಥನ್ ಹೇಳಿದ್ದಾರೆ.