ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು

ಬೈಲಹೊಂಗಲ 09: ಮೂರು ರಾಜಕೀಯ ಪಕ್ಷಗಳಿಗೆ ಪ್ರತಿಷ್ಟೆಯಾಗಿದ್ದ ರಾಜ್ಯ ವಿಧಾನಸಭೆ ಉಪಚುನಾವನೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವಿಗೆ ಜಿಲ್ಲಾ ಭಾಜಪಾ ಗ್ರಾಮೀಣ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಅವರ ನೇತೃತ್ವದಲ್ಲಿ ಸೋಮವಾರ ನೂರಾರು ಬಿಜೆಪಿ ಕಾರ್ಯಕರ್ತರು ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

    ಈಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪಾದ ಕಳ್ಳಿ, ಮಡಿವಾಳಪ್ಪ ಹೋಟಿ, ನಿಂಗಪ್ಪ ಚೌಡನ್ನವರ, ಶಿವಾನಂದ ಕೋಲಕಾರ, ಬಸವರಾಜ ಬಜಂತ್ರಿ, ರುದ್ರಪ್ಪ ಹೊಸಮನಿ, ಮಹೇಶ ಹರಕುಣಿ, ಸಂಜಯ ಗಿರೇಪ್ಪಗೌಡ್ರ, ವಿಜಯ ಪತ್ತಾರ, ಮಹಾಂತೇಶ ಗುಂಡ್ಲೂರ, ಆನಂದ ಮೂಗಿ, ಈಶ್ವರ ಬೋರಕನವರ, ವಿಶಾಲ ಹೊಸೂರ, ಬಸನಗೌಡ ಸಂಗನಗೌಡ್ರ, ಮಹಾಂತೇಶ ಹರಕುಣಿ, ಶ್ರೀಶೈಲ ಶರಣಪ್ಪನವರ, ಶ್ರೀಶೈಲ ಯಡಳ್ಳಿ, ಕಿರಣ ಅರವಳ್ಳಿ, ಶಿವಾಜು ಕುದರಿ, ಸುನೀಲ ಈಟಿ, ಗೂಳಪ್ಪ ಹೊಳಿ, ರಾಮನಗೌಡ ಪಾಟೀಲ ಹಾಗೂ ಅನೇಕ ಕಾರ್ಯಕರ್ತರು ಇದ್ದರು.