ದೆಹಲಿ ಮತದಾರರನ್ನು ಸೆಳೆಯಲು ಬಿಜೆಪಿ ಪರ ಯೋಗಿ ಆದಿತ್ಯನಾಥ್ ಪ್ರಚಾರ

ನವದೆಹಲಿ, ಜ 30, ಫೆಬ್ರವರಿ 8 ರ ದೆಹಲಿ ಚುನಾವಣೆಗಾಗಿ ಭಾರತೀಯ ಜನತಾಪಕ್ಷ, ಕೇಂದ್ರ ಸಚಿವರು ಮತ್ತು ಪಕ್ಷದ ಆಡಳಿತವಿರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಉನ್ನತ ನಾಯಕರ ಪ್ರಚಾರ ಅಭಿಯಾನವನ್ನು ತೀವ್ರಗೊಳಿಸಿದೆ.ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಹಿಮಾಚಲ ಪ್ರದೇಶದ ಸಿಎಂ ಜೈ ರಾಮ್ ಠಾಕೂರ್ ನಂತರ, ಪಕ್ಷದ ಪ್ರಮುಖ ನಾಯಕ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಫೆಬ್ರವರಿ 1, ಶನಿವಾರದಿಂದ ಪ್ರಾರಂಭವಾಗುವ ಅಭಿಯಾನದಲ್ಲಿ ಸೇರಿಕೊಳ್ಳಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 3 ರಂದು ಪೂರ್ವ ದೆಹಲಿಯಲ್ಲಿ ತಮ್ಮ ಚೊಚ್ಚಲ ಚುನಾವಣಾ ರ್ಯಾಲಿಯಲ್ಲಿ ಭಾಷಣ ಮಾಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ಈಗಾಗಲೇ ತಿಳಿಸಿವೆ.ಬುಧವಾರ ರಾತ್ರಿ ಶಾಸ್ತ್ರಿ ನಗರದಲ್ಲಿ ನಡೆದ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ರೂಪಾನಿ, ರಾಷ್ಟ್ರ ರಾಜಧಾನಿಯಲ್ಲಿ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಜನರು ಬಿಜೆಪಿಗೆ ಮತ ಚಲಾಯಿಸುವಂತೆ ಮನವರಿ ಮಾಡಿದರು.

 "ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಅಭಿವೃದ್ಧಿಯತ್ತ ದಾಪುಗಾಲು ಹಾಗಿಕದೆ ಸ್ವಚ್ಛತಾ ಅಭಿಯಾನದಡಿ ಇಡೀ ಏಷ್ಯಾದಲ್ಲಿ, ಸಬರಮತಿ ನದಿಯು ಸ್ವಚ್ಛ ನದಿಯಾಗಿ ಮಾರ್ಪಟ್ಟಿದೆ. ಜಪಾನಿನ ಪ್ರಧಾನಿ ಶಿಂಜೊ ಅಬೆ ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೊದಲಾದ ಪ್ರಮುಖ ನಾಯಕರು ನದಿಗೆ ಭೇಟಿ ನೀಡಿದ್ದಾರೆ” ಎಂದು ತಿಳಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಫೆಬ್ರವರಿಯಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಸಬರಮತಿ ನದಿ ವೀಕ್ಷಣೆಗೂ ತೆರಳಲಿದ್ದಾರೆ.  ಆದರೆ  ಟ್ರಂಪ್ ಭಾರತ ಭೇಟಿಯ ದಿನಾಂಕ ಇನ್ನೂ ಅಂತ್ಯಗೊಂಡಿಲ್ಲ ಹಾಗೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ಈ ಮಧ್ಯೆ, ಕೇಸರಿ ಪಕ್ಷದ ಅಭಿಯಾನದಲ್ಲಿ ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ನಿಕಟಪೂರ್ವ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ, ದೆಹಲಿಯಲ್ಲಿ ಹಲವು ರ್ಯಾಲಿಗಳಲ್ಲಿ ಪಾಲ್ಗೊಂಡು ಮತಯಾಚನೆ ನಡೆಸುತ್ತಿದ್ದಾರೆ. ಪಕ್ಷದ ಮಾಜಿ ಮುಖ್ಯಸ್ಥರೂ ಆಗಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಪ್ರಚಾರ ನಡೆಸುತ್ತಿದ್ದಾರೆ.ಬಿಜೆಪಿಯ ಮತ್ತೊಬ್ಬ ಮಾಜಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಆರಂಭಿಸಲಿದ್ದಾರೆ. ಬಿಜೆಪಿ 1998 ರಿಂದ ದೆಹಲಿಯಲ್ಲಿ ಅಧಿಕಾರದಿಂದ ಹೊರಗಿದ್ದು, ಈ ಬಾರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿದೆ. ಬಿಜೆಪಿ, ಎಎಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಇದ್ದರೂ, ಬಿಜೆಪಿ ಹಾಗೂ ಆಪ್ ನಡುವಿನ ಹಣಾಹಣಿ ತೀವ್ರವಾಗಿದೆ.