ನವದೆಹಲಿ, ಮಾರ್ಚ್ 13, ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಪ್ರಮಾಣದಲ್ಲಿ ಭಾರಿ ಬದಲಾವಣೆ ಮಾಡಲು ಕೇಂದ್ರ ಮುಂದಾಗಿದ್ದು ಶನಿವಾರ (ನಾಳೆ) ಜರುಗಲಿರುವ ಜಿಎಸ್ಟಿ ಮಂಡಳಿ ಸಭೆ ಮೊಬೈಲ್ ಮತ್ತು ಟಿವಿ ಸೆಟ್ ಗಳ ಮೇಲಿನ ಜಿಎಸ್ಟಿ ತೆರಿಗೆ ಪ್ರಮಾಣ ಹೆಚ್ಚಾಗಲಿದೆ.ಇದರ ಪರಿಣಾಮ ಮುಂದಿನ ದಿನಗಳಲ್ಲಿ ಟಿವಿ, ಮೊಬೈಲ್ ಫೋನ್ ಬೆಲೆ ಏರಿಕೆಯಾಗಿ ಗ್ರಾಹಕರಿಗೆ ಮತ್ತುಷ್ಟು ಹೊರೆಯಾಗಲಿದೆ ಎಂದೂ ಹೇಳಲಾಗಿದೆ .ಹಾಲಿ ತೆರಿಗೆ ದರವನ್ನು ಶೇಕಡ 12ರಿಂದ 18ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಇದೆ ಎಂದು ಉನ್ನತ ಮೂಲಗಳು ಹೇಳಿವೆ.ಮೊಬೈಲ್ ಹ್ಯಾಂಡ್ಸೆಟ್ ಮೇಲಿನ ಜಿಎಸ್ಟಿ ದರವನ್ನು ಶೇಕಡ 12ರಿಂದ 18ಕ್ಕೆ ಹೆಚ್ಚಳವಾಗಲಿದೆ ಎನ್ನಲಾಗಿದೆ. ಜಿಎಸ್ಟಿ ತೆರಿಗೆ ಹೆಚ್ಚಳ ಮೊಬೈಲ್ ಫೋನ್ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನಲಾಗಿದ್ದು ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಂತಹ ಪ್ರಮುಖ ಸೇವೆಗಳ ಮೇಲೂ ಬಹಳ ಪರಿಣಾಮ ಬೀರಲಿದೆ ಎಂಬ ಆತಂಕ ಕಾಡುತ್ತಿದೆ.