ಸಿಬಿಐ ನಿಂದ ಭೋಪಾಲ್ ವಿಷಾನಿಲ ದುರಂತದ ತಪ್ಪಿತಸ್ಥನ ಬಂಧನ

ನಾಗ್ಪುರ, ಫೆ 20, ಭೋಪಾಲ್ ವಿಷಾನಿಲ ದುರಂತದ ತಪ್ಪಿತಸ್ಥ, ತಲೆ ಮರೆಸಿಕೊಂಡಿದ್ದ ಯೂನಿಯನ್ ಕಾರ್ಬೈಡ್ ಭೋಪಾಲ್ನ ಮಾಜಿ ಉದ್ಯೋಗಿ ಯನ್ನು ಸಿಬಿಐ ಬಂಧಿಸಿರುವುದಾಗಿ ಹೇಳಿದೆ. ಭೋಪಾಲ್ ಅನಿಲ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯದಿಂದ    ಶಿಕ್ಷೆಗೊಳಗಾಗಿದ್ದ ಅಪರಾಧಿಯನ್ನು ಸಿಬಿಐ ಸಿಬ್ಬಂದಿ ಬಂಧಿಸಿದೆ  ಎಂದು  ಐ ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.ಅವರು 2016 ರಿಂದ ತಲೆತಪ್ಪಿಸಿಕೊಂಡು ಪರಾರಿಯಾಗಿದ್ದರು , ಅಪರಾಧಿಯನ್ನು ಜಿಲ್ಲಾ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು ಎಂದು ಅವರು ಹೇಳಿದರು.ಡಿಸೆಂಬರ್ 3, 1984 ರಂದು, ಯೂನಿಯನ್  ಕಾರ್ಖಾನೆಯಿಂದ ಕೊಳೆಗೇರಿಗಳು  ವಾಸವಾಗಿದ್ದ  ಪ್ರದೇಶದಲ್ಲಿ   ನಲವತ್ತು ಟನ್ ಮೀಥೈಲ್ ಐಸೊಸೈನೇಟ್ ಸೋರಿಕೆಯಾಗಿತ್ತು.

ಭೋಪಾಲ್ ನ್ಯಾಯಾಲಯವು 2010 ರಲ್ಲಿ ಎಂಟು ಜನರಿಗೆ ತಲಾ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.ಶಿಕ್ಷೆಗೊಳಗಾದ ಎಂಟು ಮಂದಿಯಲ್ಲಿ ಯೂನಿಯನ್ ಕಾರ್ಬೈಡ್ (ಯುಸಿಐಎಲ್) ಅಧ್ಯಕ್ಷ ಕೇಶೂಬ್ ಮಹೀಂದ್ರಾ, ವ್ಯವಸ್ಥಾಪಕ ನಿರ್ದೇಶಕ ವಿ ಪಿ ಗೋಖಲೆ, ಉಪಾಧ್ಯಕ್ಷ ಕಿಶೋರ್ ಕಮ್ದಾರ್, ವರ್ಕ್ಸ್ ಮ್ಯಾನೇಜರ್ ಜೆ ಮುಕುಂದ್, ಉತ್ಪಾದನಾ ವ್ಯವಸ್ಥಾಪಕ ಎಸ್ ಪಿ ಚೌಧರಿ,  ಅಧೀಕ್ಷಕ ಕೆ ವಿ ಶೆಟ್ಟಿ ಮತ್ತು ಉತ್ಪಾದನಾ ಸಹಾಯಕ ಖುರೇಷಿ ಸೇರಿದ್ದಾರೆ.ಭೋಪಾಲ್ ಅನಿಲ ದುರಂತ ಪ್ರಕರಣದ ತನಿಖೆಯನ್ನು  ಸಿಬಿಐ ಡಿಸೆಂಬರ್ 12, 1984 ರಂದು ಕೈಗೆತ್ತಿಕೊಂಡಿತ್ತು .