ಯರಗಟ್ಟಿ: ಮುಂಬರುವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸವದತ್ತಿ ತಾಲೂಕಿನ ವಿದ್ಯಾರ್ಥಿಗಳು ಅತೀ ಹೆಚ್ಚು ಸಾಧನೆ ಮಾಡುವ ಮೂಲಕ ತಾಲೂಕಿನ ಸಮಗ್ರ ಫಲಿತಾಂಶ ಜಿಲ್ಲೆಯಲ್ಲಿ ಪ್ರಥಮ ಸ್ಥಾನಕ್ಕೆ ಮುಟ್ಟುವ ಉದೇಶವಿದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ಪೆಟ್ಲೂರ ಹೇಳಿದರು.
ಬುಧವಾರ ಸಂಜೆ ಯರಗಟ್ಟಿ ಭಾಗದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಮನೆ ಮನೆ ತೇರಳಿ ಅವರ ಅಧ್ಯಯನದ ಕುರಿತು ಮಾಹಿತಿ ಸಂಗ್ರಹಿಸಿ ಮಾತನಾಡಿದ ಅವರು, ನಮ್ಮ ತಾಲೂಕಿನಲ್ಲಿ ಎಸ್ಎಸ್ಎಲ್ಸಿ ವಿದ್ಯಾಥರ್ಿಗಳಿಗೆ ಪಠ್ಯಕ್ರಮ ಅನುಸಾರವಾಗಿ ಸರಿಯಾಗಿ ತಯಾರಿ ಮಾಡಿಸಲಾಗುತ್ತದೆ.
ಆದರೆ ನಾವು ನೀರಿಕ್ಷಿಸಿದ ಹಾಗೇ ಫಲಿತಾಂಶ ಬರುತ್ತಿಲ್ಲ ಆದ್ದರಿಂದ ಈ ಮೂರು ತಿಂಗಳು ಪರೀಕ್ಷೆ ದೃಷ್ಟಿಯಿಂದ ತಾಲೂಕಿನ ಎಲ್ಲ 64 ಪ್ರೌಢ ಶಾಲೆಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಹಾಗೂ ವಿದ್ಯಾರ್ಥಿಗಳ ಮನೆಗೆ ಹೋಗಿ ಪಾಲಕರೊಂದಿಗೆ ಚರ್ಚಿಸಿ ವಿದ್ಯಾರ್ಥಿಯ ಕೊರತೆಯನ್ನು ಗುರುತಿಸಿ ಮಾರ್ಗದರ್ಶನ ನೀಡಲಾಗುವುದು ಎಂದರು.
ಎಸ್ಎಸ್ಎಲ್ಸಿ ನೋಡಲ ಅಧಿಕಾರಿ ಎಂ.ಡಿ. ಹುದ್ದಾರ ಮಾತನಾಡಿ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ವರೆಗೆ ಹೆಚ್ಚು ಮನೆ ಕೆಲಸಕ್ಕೆ ಬಳಸಿಕೊಳ್ಳದೆ ಓದಿಗೆ ಹೆಚ್ಚು ಒತ್ತು ನೀಡಬೇಕು ಹಾಗೂ ಅವರ ಅಧ್ಯಯನದ ಸಲುವಾಗಿ ಕಾಳಜಿ ವಹಿಸುವುದು ಪಾಲಕರ ಜವಾಬ್ದಾರಿ ಎಂದರು.
ಇಲ್ಲಿನ ಬಸವೇಶ್ವರ ಪ್ರೌಢ ಶಾಲೆಯ ಶಿಕ್ಷಕರಾದ ವಿ.ಆರ್. ಅಂತಾಪೂರ, ಎಸ್.ಜೆ. ಸತ್ತಿಗೇರಿ, ಕುಮಾರ ದಾಸರ ಇದ್ದರು.