“ಪ್ರೇಕ್ಷಕರಿಲ್ಲದೆ ಐಪಿಎಲ್ ಆಯೋಜನೆಗೆ ಬಿಸಿಸಿಐ ಚಿಂತನೆ”

ನವದೆಹಲಿ, ಜೂನ್ 11, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್‌ನ 13 ನೇ ಋತುವನ್ನು ಆಯೋಜಿಸಲು ಎಲ್ಲ ಪ್ರಯತ್ನ ನಡೆಸಿದೆ ಮತ್ತು ಪ್ರೇಕ್ಷಕರಿಲ್ಲದೆ ಪಂದ್ಯಾವಳಿಯನ್ನು ನಡೆಸುವ ಜೊತೆಗೆ ಇತರ ಆಯ್ಕೆಗಳನ್ನು ಪರಿಗಣಿಸಲಾಗುತ್ತಿದೆ ಎಂದು ಮಂಡಳಿ ಹೇಳಿದೆ.ಮಾರ್ಚ್ 29 ರಿಂದ ಐಪಿಎಲ್ ನಡೆಯಬೇಕಿತ್ತು ಆದರೆ ಕೊರೊನಾ ವೈರಸ್ ಮತ್ತು ಪ್ರಯಾಣದ ನಿರ್ಬಂಧದಿಂದಾಗಿ ಟೂರ್ನಿಯನ್ನು ಅನಿರ್ದಿಷ್ಟವಾಗಿ ಮುಂದೂಡಲಾಯಿತು. ಆದರೆ, ಅದನ್ನು ಸಂಘಟಿಸಲು ಬಿಸಿಸಿಐ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.ಬಿಸಿಸಿಐ ಅಧ್ಯಕ್ಷ ಸೌರಭ್ ಗಂಗೂಲಿ ಅವರು ಎಲ್ಲಾ ರಾಜ್ಯ ಸಂಘಗಳಿಗೆ ಪತ್ರ ಬರೆದಿದ್ದಾರೆ. "ಪ್ರೇಕ್ಷಕರು ಇಲ್ಲದೆ ಐಪಿಎಲ್  ಆಯೋಜಿಸುವುದರ ಜೊತೆಗೆ ಬಿಸಿಸಿಐ ಇತರ ಆಯ್ಕೆಗಳನ್ನು ನೋಡುತ್ತಿದೆ" ಎಂದು ಗಂಗೂಲಿ ಹೇಳಿದರು. “ಈ ವರ್ಷ ಐಪಿಎಲ್ ನಡೆಸಲು ಎಲ್ಲಾ ಆಯ್ಕೆಗಳನ್ನು ಬಿಸಿಸಿಐ ಪರಿಗಣಿಸುತ್ತಿದೆ. ಅಭಿಮಾನಿಗಳು, ಫ್ರಾಂಚೈಸಿಗಳು, ಆಟಗಾರರು, ಪ್ರಸಾರಕರು, ಪ್ರಾಯೋಜಕರು ಮತ್ತು ಇತರರು ಈ ವರ್ಷ ಐಪಿಎಲ್ ನಡೆಸಲು ಉತ್ಸುಕರಾಗಿದ್ದಾರೆ”  ಬಿಸಿಸಿಐ ಅಧ್ಯಕ್ಷರು ಪತ್ರದಲ್ಲಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಬಿಸಿಸಿಐ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಗಂಗೂಲಿ ಬುಧವಾರ ರಾಜ್ಯ ಸಂಘಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಪ್ರೇಕ್ಷಕರಿಲ್ಲದೆ ಬಿಸಿಸಿಐ ಐಪಿಎಲ್ ಅನ್ನು ನಡೆಸಲು ಚಿಂತಿಸುತ್ತಿದೆ. ಇದು ಆದಾಯವನ್ನು ಹೆಚ್ಚಿಸಲು ಬಹಳ ಮುಖ್ಯವಾಗಿದೆ."ಇತ್ತೀಚೆಗೆ ಭಾರತ ಮತ್ತು ಇತರ ದೇಶಗಳ ಅನೇಕ ಆಟಗಾರರು ಐಪಿಎಲ್ ಸೇರಲು ಇಚ್ಛೆ ವ್ಯಕ್ತಪಡಿಸಿದ್ದಾರೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತೇವೆ "ಎಂದು ಹೇಳಿದ್ದಾರೆ.