ಐಪಿಎಲ್ ಮಾಲೀಕರೊಂದಿಗಿನ ಕಾನ್ಫೆರೆನ್ಸ್ ಸಭೆ ರದ್ದುಗೊಳಿಸಿದ ಬಿಸಿಸಿಐ
ನವದೆಹಲಿ, ಮಾ 24 ಈಗಾಗಲೇ ಏಪ್ರಿಲ್ 15ರ ವರೆಗೆ ಮುಂದೂಡಲ್ಪಟ್ಟಿರುವ ಹಾಗೂ ಈ ವರ್ಷ ನಡೆಯುವ ಬಗ್ಗೆ ಅನುಮಾನ ಮೂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕುರಿತು ಬಿಸಿಸಿಐ, ಮಂಗಳವಾರ ಫ್ರಾಂಚೈಸಿ ಮಾಲೀಕರೊಂದಿಗೆ ಕರೆದಿದ್ದ ಕಾನ್ಫರೆನ್ಸ್ ಕಾಲ್ ಸಭೆಯನ್ನು ರದ್ದುಗೊಳಿಸಿದೆ. ದೇಶದಲ್ಲಿಕೊರೊನಾ ವೈರಸ್ ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಈ ಕ್ರಮ ಕೈಗೊಂಡಿದೆ.ಜಾಗತಿಕ ಪಿಡುಗು ಕೊರೊನಾ ನಿತ್ಯ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷದ ಐಪಿಎಲ್ ಟೂರ್ನಿ ಬಹುತೇಕ ರದ್ದಾಗುವ ಸಾಧ್ಯತೆ ನಿಚ್ಚಳಗೊಳ್ಳುತ್ತಿದೆ. ಇದನ್ನು ಪುಷ್ಠಕರಿಸುವಂತೆ ಮಾರ್ಚ್ 31ರವರೆಗೆ ದೇಶಾದ್ಯಂತ ಲಾಕ್ ಡೌನ್ ಆದೇಶಿಸಲಾಗಿದೆ.ಮಾನವೀಯತೆ ಮೊದಲು. ಉಳಿದೆಲ್ಲವೂ ನಂತರದ್ದು. ಸದ್ಯದ ಪರಿಸ್ಥಿತಿ ಸುಧಾರಣೆಯಾಗದಿರುವ ಕಾರಣ ಅದರ ಬಗ್ಗೆ ಮಾತುನಾಡುವುದರಲ್ಲಿ ಅರ್ಥವಿಲ್ಲ. ಐಪಿಎಲ್ ನಡೆಯದಿದ್ದರೆ ಇರಲಿ, '' ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ತಿಳಿಸಿದ್ದಾರೆ.ಜತೆಗೆ ಈ ಸಮಯದಲ್ಲಿ ಯಾವುದನ್ನೂ ಚರ್ಚಿಸುವುದರಲ್ಲಿ ಅರ್ಥವಿಲ್ಲ. ಇಡೀ ದೇಶವೇ ಸ್ತಬ್ಧವಾಗಿದೆ. ಐಪಿಎಲ್ ಗಿಂತ ನಾವು ಮುಖ್ಯವಾದ ವಿಷಯಗಳನ್ನು ಎದುರಿಸಬೇಕಿದೆ ಎಂದು ಮತ್ತೊಂದು ಫ್ರಾಂಚೈಸಿ ಮಾಲೀಕರೊಬ್ಬರು ಹೇಳಿದ್ದಾರೆ.ಐಪಿಎಲ್ ಮುಂದೂಡುವುದು, ಪಂದ್ಯಗಳನ್ನು ಕಡಿತಗೊಳಿಸುವುದು ಅಥವಾ ರದ್ದುಗೊಳಿಸುವುದು ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಲು ಬಿಸಿಸಿಐ ಕಾನ್ಫೆರೆನ್ಸ್ ಸಭೆ ಕರೆದಿತ್ತು.ಮುಂಬಯಿನಲ್ಲಿ ಮಾರ್ಚ್ 29ರಂದು ಐಪಿಎಲ್ 13ನೇ ಆವೃತ್ತಿ ಆರಂಭವಾಗಬೇಕಿತ್ತು. ಆದರೆ ಕೋವಿಡ್ -19 ಭೀತಿಯಿಂದಾಗಿ ಟೂರ್ನಿಯನ್ನು ಮುಂದೂಡಲಾಗಿದೆ. ಆದರೆ ಬಿಸಿಸಿಐ ಪರಿಸ್ಥಿತಿ ಸುಧಾರಣೆಗೊಳ್ಳುವ ಆತ್ಮವಿಶ್ವಾಸದಲ್ಲಿ ದಿನ ದೂಡುತ್ತಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 