ಬಿಬಿಎಂಪಿ ವಾರ್ಡ್ ಮರು ವಿಂಗಡನೆ; ಮಾಜಿ ಮೇಯರ್ ಗಳ ವಾರ್ಡ್ ಗಳೇ ಮಾಯ
ಬಿಬಿಎಂಪಿ ವಾರ್ಡ್ ಮರು ವಿಂಗಡನೆ; ಮಾಜಿ ಮೇಯರ್ ಗಳ ವಾರ್ಡ್ ಗಳೇ ಮಾಯBBMP WARD DELIMITATION
Lokadrshan Daily
1/6/25, 2:07 PM ಪ್ರಕಟಿಸಲಾಗಿದೆ
ಬೆಂಗಳೂರು, ಮಾ 4, ರಾಜ್ಯ ಸರ್ಕಾರ 2011ರ ಜನಗಣತಿ ಆಧಾರದ ಮೇಲೆ ರೂಪಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್ ಮರುವಿಂಗಡನೆಯ ಪಟ್ಟಿಯ ಕರಡು ಅಧಿಸೂಚನೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಬಿಬಿಎಂಪಿಗೆ 27 ಹೊಸ ವಾರ್ಡ್ ಗಳು ಸೇರ್ಪಡೆಯಾಗಿವೆ. ಆದರೆ, ಕೆಲ ವಾರ್ಡ್ ಗಳನ್ನು ಕೈಬಿಟ್ಟಿರುವುದರಿಂದ ಒಟ್ಟು ವಾರ್ಡ್ ಗಳ ಸಂಖ್ಯೆ 198ರಿಂದ ಬದಲಾಗಿಲ್ಲ. ಪ್ರತಿ ವಾರ್ಡ್ ನ ನಾಲ್ಕು ದಿಕ್ಕುಗಳ ಗಡಿಗಳ ವಿವರಗಳನ್ನು ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದು, ಈ ಸಂಬಂಧ ಲಿಖಿತ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಪಟ್ಟಿಯಲ್ಲಿ ಕೈಬಿಟ್ಟಿರುವ ವಾರ್ಡ್ ಗಳಲ್ಲಿ ಕೆಲವು ಮಾಜಿ ಮೇಯರ್ ಗಳಿಗೆ ಸೇರಿದ್ದು, ಹೆಚ್ಚಾಗಿ ಕಾಂಗ್ರೆಸ್ ಸದಸ್ಯ ರದ್ದಾಗಿರುವುದರಿಂದ ಇದು ದುರುದ್ದೇಶಪೂರಿತ ಕ್ರಮ ಎಂದು ಪಕ್ಷದ ನಾಯಕರು ಆರೋಪಿಸಿದ್ದಾರೆ. ಸರಾಸರಿ 42 ಸಾವಿರಕ್ಕೊಂದು ವಾರ್ಡ್ ರಚಿಸಲಾಗಿದ್ದು, ಕಾಮಗ್ರೆಸ್ ನ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರ ಜಯನಗರ, ಜಿ.ಪದ್ಮಾವತಿ ಅವರು ಪ್ರಕಾಶ್ ನಗರ ವಾರ್ಡ್ ಗಳನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, ಇತರ ವಾರ್ಡ್ ಗಳೊಂದಿಗೆ ವಿಲೀನಗೊಳಿಸಲಾಗಿದೆ. ಕೆಲ ವಾರ್ಡ್ ಗಳನ್ನು ಮರುನಾಮಕರಣ ಮಾಡಲಾಗಿದೆ. ಈಗಿನ ಬಿಬಿಎಂಪಿ ಸದಸ್ಯರ ಅವಧಿ 2020ರ ಸೆ. 10 ಪೂರ್ಣಗೊಳ್ಳಲಿದೆ. ನಂತರ ಹೊಸ ವಾರ್ಡ್ ವಿಂಗಡನೆ ಹಾಗೂ ಮೀಸಲಾತಿ ಪ್ರಕಾರ ಚುನಾವಣೆ ನಡೆಯಲಿದೆ. ಹೊಸ ವಾರ್ಡ್ ವಿಂಗಡನೆ ಪಟ್ಟಿಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಲು ಕಾಂಗ್ರೆಸ್ ಚಿಂತನೆ ನಡೆಸಿದೆ.