ಸಮಸ್ತ ಕನ್ನಡಿಗರಿಗೆ ಯಕ್ಷಗಾನ ಮೆಚ್ಚಿಸಲು ಬಾ.ಸಾಮಗ ಕರೆ

ಉಡುಪಿ : ಕಳೆದ ಶತಮಾನಗಳಲ್ಲಿ ಹಲವಾರು ಬದಲಾವಣೆಗಳಾಗಿ ಇದೀಗ ಯಕ್ಷಗಾನ ವಿಶ್ವಮಟ್ಟದಲ್ಲಿ ಪ್ರದಶರ್ಿತವಾಗುತ್ತಿದ್ದು ಯಕ್ಷಗಾನದ ಸುವರ್ಣಯುಗವೆನಿಸಿಕೊಂಡಿದ್ದರೂ ಕರಾವಳಿಯವರು ಮಾತ್ರ ಮನವೊಲಿದು ಎಲ್ಲಾ ಕಡೆ ಪ್ರದಶರ್ಿತವಾಗುತ್ತಿರುವ ಯಕ್ಷಗಾನಕ್ಕೆ ಪ್ರೇಕ್ಷಕರಾಗಿರುವುದರಿಂದ ಪ್ರಾದೇಶಿಕತೆ ಮೀರಿ ವಿಶ್ವದ ಸಮಸ್ತ ಕನ್ನಡಿಗರು ಯಕ್ಷಗಾನಕ್ಕೆ ಮನವೊಲಿಯುವಂತೆ ಯಕ್ಷಗಾನ ವಿದ್ವಾಂಸ, ದೆಹಲಿ ಕನ್ನಡಿಗ, ತುಳುವೆರ್ ಪತ್ರಿಕೆಗಳ ಸಂಪಾದಕ ಬಾ.ಸಾಮಗ ಅವರು ಕರೆ ನೀಡಿದರು.

ವಿಷ್ಣುಮೂತರ್ಿ ಯಕ್ಷಗಾನ ಕಲಾ ಸಂಘ ಡಿ.21ರಂದು ಉಡುಪಿ ಸಮೀಪದ ಕೆಳಾರ್ಕಳಬೆಟ್ಟಿನಲ್ಲಿ ಏರ್ಪಡಿಸಿದ 12ನೇ ವಾಷರ್ಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರೇಕ್ಷಕರ ಅಭಿರುಚಿಗೆ ಹೊಂದಿಕೊಂಡು ಯಕ್ಷಗಾನ ಕಾಲಕಾಲಕ್ಕೆ ಬದಲಾವಣೆಯಾಗಿ ಪ್ರಗತಿ ಪಡೆದು ಹೆಚ್ಚೆಚ್ಚು ಪ್ರೇಕ್ಷಕರನ್ನು ಪಡೆಯಲು ಸಾಧ್ಯವಾಯಿತೆಂದ ಸಾಮಗ ಅವರು ಕನರ್ಾಟಕದ ಬೇರೆ ಬೇರೆ ಭಾಗಗಳಲ್ಲಿರುವ ಜಾನಪದ ಕಲೆ, ಭಾಷೆ, ಸಂಸ್ಕೃತಿಯ ಉತ್ತಮ ಅಂಶಗಳನ್ನು ಯಕ್ಷಗಾನದೊಂದಿಗೆ ಸೇರಿಸಿಕೊಂಡಲ್ಲಿ ಆಯಾ ಭಾಗಗಳಲ್ಲಿನ ಕನ್ನಡಿಗರು ಯಕ್ಷಗಾನವನ್ನು ಮೆಚ್ಚಿಕೊಂಡು ಯಕ್ಷಗಾನ ಉಜ್ವಲವಾಗುವುದರಲ್ಲಿ ಸಂಶಯವಿಲ್ಲವೆಂದರು. ಸಂಗೀತ, ನೃತ್ಯವೇ ಅಗ್ರಸ್ಥಾನ ಪಡೆದಿರುವ ಇಂದಿನ ಯಕ್ಷಗಾನದಲ್ಲಿ ಹೆಂಗಸರು, ಮಕ್ಕಳು ಸೇರಿದಂತೆ ಎಲ್ಲರೂ ಪಾತ್ರ ಮಾಡುತ್ತಿದ್ದರೂ ಪ್ರೇಕ್ಷಕರ ಕೊರತೆ ಹೋಗಲಾಡಿಸಬೇಕೆಂದ ಸಾಮಗ ಅವರು ಡೇರೆ ಮೇಳಗಳನ್ನು ಜಾಣ್ಮೆಯಿಂದ ಮುನ್ನಡೆಸುವ ಕಲೆ ಕರಗತ ಮಾಡಿಕೊಂಡಲ್ಲಿ ಯಕ್ಷಗಾನದ ಭವಿಷ್ಯ ಭದ್ರವಾಗಲಿದೆ ಎಂದರು.

ಗುರುವಂದನಾ ಕಾರ್ಯಕ್ರಮದಲ್ಲಿ ನಿದರ್ೇಶಕ ಬಡಾನಿಡಿಯೂರು ಕೇಶವ ರಾವ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತರಿಗೆ ಗೌರವ ಧನ ನೀಡಿ ಅಭಿನಂದಿಸಲಾಯಿತು. ಸಂಘದ ಗೌರವಾಧ್ಯಕ್ಷ ದಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಗವರ್ನರ್ ರಾಜಾರಾಮ್ ಭಟ್, ಕಲಾವಿದೆ ಮಮತಾ ಶೆಟ್ಟಿ ಶುಭ ಹಾರೈಸಿದರು. ಕೆ.ಸದಾನಂದ ನಾಯ್ಕ್, ಪ್ರವೀಣ್ ಶೆಟ್ಟಿ, ಶೇಷರಾಜ ರಾವ್, ಜಯರಾಮಯ್ಯ, ಸುಕುಮಾರ ಶೆಟ್ಟಿ, ಜಯಂತ ಕುಮಾರ್, ರತ್ನಾಕರ ಆಚಾರ್ಯ, ರವಿನಂದನ ಭಟ್ ಉಪಸ್ಥಿತರಿದ್ದರು. ನಾಗರಾಜ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಗುರುದಕ್ಷಿಣೆ, ರುಕ್ಮಿಣಿ ಸ್ವಯಂವರ, ಭೀಷ್ಮ-ಭೀಷ್ಮ ಪ್ರಸಂಗಗಳ ಯಕ್ಷಗಾನ ಪ್ರದರ್ಶನ ನಡೆಯಿತು. (ಚಿತ್ರದಲ್ಲಿ ಬಾ.ಸಾಮಗ ಭಾಷಣ ಮಾಡುತ್ತಿರುವುದು. ಮಮತಾ ಶೆಟ್ಟಿ, ದಯಾನಂದ ಶೆಟ್ಟಿ, ರಾಜಾರಾಮ್ ಭಟ್, ಕೇಶವ ಭಟ್, ಸದಾನಂದ ನಾಯ್ಕ್, ಶೇಷರಾಜ ಅವರೂ ಇದ್ದಾರೆ)