ಯತ್ನಳ್ಳಿ ಯಳವತ್ತಿ ಗ್ರಾಮದ ರೈತರ ಸಮಸ್ಯೆ ಆಲಿಸಿದ ಬಿ.ಟಿ ಚಂದ್ರಶೇಖರ್
B.T. Chandrashekhar listened to the grievances of farmers from Yatnalli Yelavatti village
ಲಕ್ಷ್ಮೇಶ್ವರ 16: ಗದಗ ಜಿಲ್ಲೆಯ ಮೀಸಲು ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ರೈತರ ಸಮಸ್ಯೆಗಳನ್ನು ಆಲಿಸುತ್ತಿರುವ ರಾಜ್ಯ ರೈತೋದಯ ಹಸಿರು ಸೇನೆ ರಾಜ್ಯ ಅಧ್ಯಕ್ಷರು 1008 ಬಡವರ ಕಲ್ಯಾಣೋತ್ಸವ ನೆರವೇರಿಸಿದ ಕಲ್ಯಾಣ ಪುರುಷ ಡಿ.ಟಿ. ಚಂದ್ರಶೇಖರ್ ಅವರು ಲಕ್ಷ್ಮೇಶ್ವರ ತಾಲೂಕಿನ ಯತ್ನಳ್ಳಿ ಯಳವತ್ತಿ ಗ್ರಾಮದ ರೈತರ ಜಮೀನುಗಳಿಗೆ ತೆರಳಿ ರೈತರ ಸಮಸ್ಯೆಗಳನ್ನು ಆಲಿಸಿದರುಈ ಸಮಯದಲ್ಲಿ ರೈತರು ತಾವು ಬೆಳೆದ ಹೆಸರು ಬೆಳೆ ಉತ್ತಮವಾಗಿ ಬಾರದೆ ಇರುವುದರ ಬಗ್ಗೆ ಬಿ.ಟಿ. ಚಂದ್ರಶೇಖರ್ ಅವರಿಗೆ ವಿಸ್ತಾರವಾಗಿ ತಿಳಿಸಿದರು.
ರೈತರ ಸಮಸ್ಯೆಗಳನ್ನು ಕೇಳಿದ ಬಿ ಟಿ ಚಂದ್ರಶೇಖರ್ ಅವರುಈ ಸಾರಿ ರಾಜ್ಯದಲ್ಲಿ ಮುಂಗಾರು ಮಳೆ ಸಂಪೂರ್ಣವಾಗಿ ವಿಫಲವಾಗಿದೆ ಇದರಿಂದಾಗಿ ನೀವು ಹೆಸರು ಬೆಳೆ ಬೆಳೆಯಲು ಮಾಡಿರುವ ಖರ್ಚು ವೆಚ್ಚ ಸಹ ಬಾರದಂತಾಗಿದ್ದು ನಿಮಗೆ ತುಂಬಾ ನೋವು ತಂದಿದೆ ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಡ ತರುತ್ತೇನೆ ಎಂದು ಹೇಳಿದರು ಹಾಗೂ ನಾನು ಈ ತಾಲೂಕಿನ ನಿಮ್ಮ ಮನೆ ಮಗನಾಗಿ ನಿಮ್ಮಲ್ಲ ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಸದಾ ಇರಲಿ.
ನಾನು ಕೂಡ ಈ ತಾಲೂಕಿನ ನಿಮ್ಮ ಸೇವೆ ಮಾಡಲು ಬಂದಿರುವ ಬಿಜೆಪಿ ಪಕ್ಷದ ಸೇವಾ ಆಕಾಂಕ್ಷಿಯಾಗಿದ್ದು ನನಗೂ ಒಂದು ನಿಮ್ಮ ಸೇವೆ ಮಾಡುವ ಅವಕಾಶ ಕೊಡಿ ನಾನು ರೈತ ಕುಟುಂಬದಿಂದ ಬಂದವನೇ ರೈತರ ನೋವು ನಲಿವುಗಳ ಬಗ್ಗೆ ನನಗೆ ಸಂಪೂರ್ಣ ಅರಿವಿದೆ ಅದಕ್ಕಾಗಿ ತಾಲೂಕಿನಲ್ಲಿ ನಿರಂತರವಾಗಿ ರೈತರ ಸಮಸ್ಯೆಗಳಿಗೆ ಹೋರಾಡುತ್ತಲೇ ಇದ್ದೇನೆ ನಿಮ್ಮ ಸೇವೆ ಮಾಡಲು ನನಗೂ ಒಂದು ಅವಕಾಶ ಕೊಡಿ ಎಂದು ತಿಳಿಸಿದರು
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 