ನೂರಾರು ಎಕರೆ ಜಮೀನುಗಳಿಗೆ ನುಗ್ಗಿದ ಚರಂಡಿ ನೀರು ವೀಕ್ಷಿಸಿದ ಬಿ.ಟಿ. ಚಂದ್ರಶೇಖರ್

ನೂರಾರು ಎಕರೆ ಜಮೀನುಗಳಿಗೆ ನುಗ್ಗಿದ ಚರಂಡಿ ನೀರು ವೀಕ್ಷಿಸಿದ ಬಿ.ಟಿ. ಚಂದ್ರಶೇಖರ್  B.T. Chandrashekhar inspected hundreds of acres of land inundated by drainage water

ಲಕ್ಷ್ಮೇಶ್ವರ 15: ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ರೈತರ ಸಮಸ್ಯೆಗಳನ್ನು ಆಲಿಸುತ್ತಿರುವ ರಾಜ್ಯ ರೈತೋದಯ ಹಸಿರು ಸೇನೆ ರಾಜ್ಯಾಧ್ಯಕ್ಷರು ಹಾಗೂ1008 ಬಡ ಕುಟುಂಬಗಳ ಕಲ್ಯಾಣೋತ್ಸವ ನೆರವೇರಿಸಿದ ಕಲ್ಯಾಣ ಪುರುಷ ಬಿ. ಟಿ. ಚಂದ್ರಶೇಖರ್ ಅವರು ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ಗ್ರಾಮದ ರೈತರ ನೂರಾರು ಎಕರೆ ಜಮೀನುಗಳಿಗೆ ಸೇರುತ್ತಿರುವ ಚರಂಡಿ ಹಳ್ಳದ ನೀರಿನಿಂದ ಜವಳು ಬಿದ್ದಿರುವ ಜಮೀನುಗಳನ್ನು ಗ್ರಾಮದ ರೈತರೊಂದಿಗೆ ವೀಕ್ಷಿಸಿದರು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಫೋನ್ ಮುಖಾಂತರ ಮಾತನಾಡಿದಅವರು ಸಂಬಂಧಿಸಿದ ಅಧಿಕಾರಿಗಳು ರೈತರ ಫಲವತ್ತಾದ ಜಮೀನುಗಳಿಗೆ ಸೇರುತ್ತಿರುವ ಚರಂಡಿ ನೀರು ಜಮೀನಿಗೆ ಹೋಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಇದು ಗ್ರಾಮದ ನೂರಾರು ರೈತರ ಬಹುದಿನಗಳ ಸಮಸ್ಯೆಯಾಗಿದ್ದು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸಬೇಕು ಎಂದು ಹೇಳಿದವರು ಇದೇ ವಿಷಯವಾಗಿ ಬರುವ ಸೋಮವಾರ ಗ್ರಾಮದ ಎಲ್ಲ ರೈತದೊಂದಿಗೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳಿಗೆ ಪುರಸಭೆಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು ಈ ಸಮಯದಲ್ಲಿ ರಾಜ್ಯ ರೈತೋದಯ ಹಸಿರು ಸೇನೆ ಮಹಿಳಾ ಪದಾಧಿಕಾರಿಗಳು ಅಡರಕಟ್ಟಿ ಗ್ರಾಮದ ನೂರಾರು ರೈತ ಮುಖಂಡರು ಇದ್ದರು.