ಬಿ.ಆರ್.ಅವರು ಒಬ್ಬ ವಿಮರ್ಶಾತ್ಮಕ ಸಂಶೋಧಕ, ಹಳ್ಳಿ ಸೋಗಡಿನ ತಾಯಿಗರುಳಿನ ಪ್ರಾಧ್ಯಾಪಕರಾಗಿದ್ದರು: ಡಾ.ಎ.ಮುರಿಗೆಪ್ಪ
B.R. was a critical researcher, a professor of village Soga's mother tongue: Dr. A. Murigappa
ಧಾರವಾಡ 26: ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾಗಿದ್ದ ಡಾ.ಬಿ.ಆರಿ್ಹರೇಮಠ ಅವರು ತಾಯಿಗರುಳಿನ ಒರ್ವ ಶ್ರೇಷ್ಠ ಪ್ರಾಧ್ಯಾಪಕರಾಗಿದ್ದರು. ಅವರ ಸಂಶೋಧನೆ ಮತ್ತು ವಿಮರ್ಶಾತ್ಮಕ ಸಂಶೋಧನೆ ಕಾರ್ಯಗಳು ಇಂದಿನ ಸಂಶೋಧನೆ ಕಾರ್ಯಗಳಿಗೆ ಮಾದರಿ ಆಗಿವೆ ಎಂದು ಕನ್ನಡ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ ಅವರು ಹೇಳಿದರು.ಅವರು ಇಂದು ಬೆಳಿಗ್ಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಡಾ.ಬಿ.ಆರ್. ಹಿರೇಮಠ ಅಭಿಮಾನಿ ಬಳಗ ಆಯೋಜಿಸಿದ್ದ ಲಿಂ. ಡಾ.ಬಿ.ಆರಿ್ಹರೇಮಠ ಅವರ ಸವಿನೆನಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.ಡಾ.ಬಿ.ಆರಿ್ಹರೇಮಠ ಅವರ ಹೆಸರಿನಲ್ಲಿ ಒಂದು ಟ್ರಸ್ಟ್ ರಚನೆ ಮಾಡಿ, ಬಿ.ಆರ್.ಅವರ ಸಾಧನೆ ಮತ್ತು ಸಾಹಿತ್ಯ, ಸಂಸ್ಕೃತಿ ಕಾರ್ಯಗಳನ್ನು ಮುಂದುವರಿಸಲು ನಿರ್ಧರಿಸಲಾಗಿದೆ.
ಮುಂದಿನ ದಿನಗಳಲ್ಲಿ ಉತ್ತಮ ಸಂಶೋಧನೆಗಳಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಡಾ.ಬಿ.ಆರಿ್ಹರೇಮಠ ಅವರ ಹೇಸರಿನಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಡಾ.ಎ.ಮುರಿಗೆಪ್ಪ ಅವರು ತಿಳಿಸುದರು.ಬಿ.ಆರ್.ಅವರ ಶಿಷ್ಯ ಬಳಗ ರಾಜ್ಯದ ವಿವಿಧ ಸಂಸ್ಥೆಗಳಲ್ಲಿ, ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸಹಕಾರದಲ್ಲಿ ಶೈಕ್ಷಣಿಕ, ಸಂಶೋಧನಾತ್ಮಕ ಕಾರ್ಯಾಗಾರಗಳನ್ನು ಆಯೋಜಿಸಲು ಚಿಙತಿಸಲಾಗಿದೆ. ಮತ್ತು ಅವರ ಸಂಶೋಧನಾತ್ಮಕ ಕೃತಿಗಳನ್ನು ಮುದ್ರಿಸಿ, ಪ್ರಕಟಿಸಲು ಯೋಜಿಸಲಾಗಿದೆ ಎಂದು ಅವರು ತಿಳಿಸಿದರು.ಯುವ ಪ್ರಾಧ್ಯಾಪಕರಿಗೆ, ಸಂಶೋಧಕರಿಗೆ ತರಬೇತಿ ನೀಡುವ , ಹೊಸ ಸಂಶೋಧನಾ ಮಾದರಿಗಳನ್ನು ರೂಪಿಸಲು ಪ್ರೋತ್ಸಾಹಿಸುವ ಕಾರ್ಯಗಳನ್ನು ನೂತನ ಟ್ರಸ್ಟ್ ದಿಂದ ಹಮ್ಮಿಕೊಳ್ಳಲಾಗುತ್ತದೆ ಎಂದು ಡಾ.ಎ.ಮುರಿಗೆಪ್ಪ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ, ಡಾ.ಬಿ.ಆರ್. ಅವರ ವಿದ್ಯಾರ್ಥಿಗಳಾದ ರಾಯಚೂರ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಡಾ.ಶಿವಾನಂದ ಕೆಳಗಿನಮನಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಶ್ರಾಂತ ಅಪರ ಆಯುಕ್ತ ಡಾ.ವೆಂಕಟೇಶ ಮಾಚಕನೂರ, ಡಾ.ಬಸವರಾಜ ಸಾದರ, ಡಾ.ವಿ.ಎಸ್.ಮಾಳಿ, ಡಾ.ಅಶೋಕ ನರೋಡೆ, ಡಾ.ಎಫ್.ಟಿ.ಹಳ್ಳಿಕೇರಿ, ಡಾ.ವೀರೇಶ ಬಡಿಗೇರ, ಡಾ.ಎಸ್.ಸಿ.ಪಾಟೀಲ, ಶೈಲಜಾ ಹೊಸಳ್ಳೇರ, ಸಂಶೋಧಕಿ ದಿ. ನೇತ್ರಾವತಿ ದೊಡಮನಿ ಅವರ ಪುತ್ರ ವಿಶಾಲ ಕುಲಕರ್ಣಿ ಅವರು ಮಾತನಾಡಿ, ಡಾ.ಬಿ.ಆರ್. ಹಿರೇಮಠ ಅವರ ಒಡನಾಟ, ಸಾಧನೆ ಮತ್ತು ಸಂಶೋಧನೆ, ಸಾಂಸ್ಕೃತಿಕ ಸೇವೆಗಳನ್ನು ಸ್ಮರಿಸಿದರು.ಡಾ.ಬಿ.ಆರಿ್ಹರೇಮಠ ಅವರ ಚಿರಂಜೀವಿ ಡಾ.ಮೃತ್ಯಂಜಯ ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ.ವೈ.ಎಂ.ಯಾಕೊಳ್ಳಿ ಅವರು ಕಾರ್ಯಕ್ರಮ ನಿರೂಪಿಸಿದರು. ಡಾ.ಬಿ.ಆರ್. ಸಹೋದರ ಶಿವಪೂಜಯ್ಯ ಹಿರೇಮಠ ಅವರು ವಂದಿಸಿದರು.ಇದೇ ಸಂದರ್ಭದಲ್ಲಿ ಡಾ.ಬಿ.ಆರಿ್ಹರೇಮಠ ಅವರ ಒಡನಾಡಿಗಳನ್ನು, ಸಹೋದ್ಯೋಗಿಗಳನ್ನು ಬಿ.ಆರ್. ಅವರ ಕುಟುಂಬದಿಂದ ಸನ್ಮಾನಿಸಿ, ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಅನುಷಾ (ಅಮ್ಮಣ್ಣಿ) ಹಿರೇಮಠ ದಾನಮ್ಮ ಶಿವಪೂಜಯ್ಯ ಹಿರೇಮಠ, ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಡಾ. ಬಸವರಾಜ ಡೊಣೂರ, ಪ್ರೊ. ರವಿ ಹಿರೇಮಠ, ಡಾ.ಜಗದೀಶ ಕಾಡದೇವರಮಠ, ಡಾ.ಎಸ್.ಬಿ.ಹಿರೇಮಠ, ಡಾ.ಆರಿ್ಬ.ಚಿಲುಮಿ, ಡಾ. ಚಂದ್ರಶೇಖರ ರೊಟ್ಟಿಗವಾಡ, ಡಾ.ಎಸ್.ಬಿ.ಸಾತಿಹಾಳ, ಡಾ.ಸಮಂಗಮೇಶ ಕಲ್ಯಾಣಿ, ಡಾ.ಮಲ್ಲಿಕಾರ್ಜುನ.ಕೆ. ಮತ್ತು ಡಾ.ಬಿ.ಆರಿ್ಹರೇಮಠ ಅವರ ಸಹೋದ್ಯೋಗಿಗಳು, ಒಡನಾಡಿಗಳು, ಸಂಶೋಧನಾ ವಿದ್ಯಾರ್ಥಿಗಳು, ಶಿಷ್ಯಂದಿರು, ಬಿ.ಆರ್. ಅಭಿಮಾನಿಗಳು, ಕುಟುಂಬ ಸದಸ್ಯರು ಭಾಗವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 