ಅಜರ್ುನ್ ಸಜರ್ಾಗೆ ನೋಟಿಸ್ ಜಾರಿ

ಬೆಂಗಳೂರು 04: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಜರ್ುನ್ ಸಜರ್ಾ ವಿರುದ್ಧ  ನಟಿ ಶೃತಿ ಹರಿಹರನ್ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಕಬ್ಬನ್ ಪಾಕರ್್ ಪೊಲೀಸರು ಅಜರ್ುನ್ ಸಜರ್ಾಗೆ ನೋಟಿಸ್ ಜಾರಿ ಮಾಡಿದ್ದಾರೆ.ಸೋಮವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ನಲ್ಲಿ ಸೂಚಿಸಲಾಗಿದೆ.  ನಾಳೆ ಕಬ್ಬನ್ ಪಾಕರ್್ ಪೊಲೀಸ್ ಠಾಣೆಯಲ್ಲಿ ಅಜರ್ುನ್ ಸಜರ್ಾ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ವಿಸ್ಮಯ ಚಿತ್ರದ ಚಿತ್ರೀಕರಣದ ವೇಳೆ ನಟ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಶೃತಿ ಹರಿಹರನ್ ಮೀ ಟೂ ಅಭಿಯಾನದಲ್ಲಿ ಆರೋಪಿಸಿದ್ದರು. ಅಲ್ಲದೇ ಈ ಬಗ್ಗೆ  ಕಬ್ಬನ್ ಪಾಕರ್್ ಪೊಲೀಸರಿಗೆ ದೂರು ಕೂಡ ದಾಖಲಿಸಿದ್ದರು. ಶೃತಿ ದೂರಿನಂತೆ ಸಜರ್ಾ ವಿರುದ್ಧ ಕಬ್ಬನ್ ಪಾಕರ್್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.

ಈಗಾಗಲೇ ದೂರು ಸಂಬಂಧ ಪೊಲೀಸರು ಕೃತ್ಯ ನಡೆದ ಮೂರು ಸ್ಥಳಗಳಲ್ಲಿ ಮಹಜರು ಪ್ರಕ್ರಿಯೆ ನಡೆಸಿದ್ದರು. ಶೃತಿ ಹರಿಹರನ್ ದೂರಿನಲ್ಲಿ  ಪ್ರಸ್ತಾಪಿಸಿದ್ದ ಐವರು ಸಾಕ್ಷಿಗಳ ಹೇಳಿಕೆಯನ್ನು ಕೂಡ ಪೊಲೀಸರು ಪಡೆದುಕೊಂಡಿದ್ದಾರೆ. ವಿಸ್ಮಯ ಚಿತ್ರದ ನಿದರ್ೆಶಕ ಅರುಣ್ ವೈದ್ಯನಾಥನ್, ನಿಮರ್ಾಪಕ ಉಮೇಶ್, ಮೇಕಪ್ ಮ್ಯಾನ್ ಕಿರಣ್, ಸಹ ನಿದರ್ೆಶಕಿ ಮೋನಿಕಾ ಹಾಗೂ ಶೃತಿ ಸಹಾಯಕ ಬೋರೆಗೌಡ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇದೀಗ ತನಿಖೆ ಮುಂದುವರಿಸಿರುವ ಪೊಲೀಸರು ಅಜರ್ುನ್ ಸಜರ್ಾಗೆ ನೋಟಿಸ್ ನೀಡಿದ್ದಾರೆ.