ದಿ.29 ರಂದು ಅಯ್ಯಪ್ಪಸ್ವಾಮಿ ಮಹಾಪೂಜೆ ಅನ್ನಸಂತರ್ಪಣೆ ಕಾರ್ಯಕ್ರಮ

Ayyappaswamy Mahapuja Mahaprasad program on 29th

ಬೆಳಗಾವಿ 28 : ಸ್ಥಳೀಯ ರುಕ್ಮಿಣಿ ನಗರ ಕಣಬರ್ಗಿ ರಸ್ತೆಯ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ದಿ.29 ರಂದು ರವಿವಾರ ಸಡಗರದಿಂದ ನಡೆಯಲಿದೆ.  

ಈ ನಿಮಿತ್ತ ದಿ.29 ರಂದು ಬೆಳಿಗ್ಗೆ 5 ರಿಂದ ಅಭಿಷೇಕ 9ರಿಂದ ಸಹಸ್ರ ನಾಮಾರ್ಚನೆ, 10-30 ರಿಂದ ಭಜನೆ ಕಾರ್ಯಕ್ರಮ ನಡೆಯಲಿದೆ.  

ಮಧ್ಯಾಹ್ನ 12-30 ರಿಂದ ಮಂಗಳಾರತಿ 1-30 ರಂದ ಅನ್ನಪ್ರಸಾದ ನೆಡಯಲಿದೆ ಸಂಜೆ 7ರಿಂದ ಲಕ್ಷ ದಿಪೋತ್ಸವ ನಡೆಯಲಿದೆ. ಈ ಕಾರ್ಯಕ್ರಮಗಳಿಗೆಸರ್ವ ಭಕ್ತರು ಆಗಮಿಸಿ ಸಹಕರಿಸಬೇಕೆಂದು ಶ್ರೀ ನವದುರ್ಗಾ ಅಯ್ಯಪ್ಪ ಮಂದಿರ ಸೇವಾ ಸಮಿತಿ ಅಧ್ಯಕ್ಷ ಆನಂದ ಶೆಟ್ಟಿ, ಕಾರ್ಯದರ್ಶಿ ಮಹಾವೀರ ಜೈನ, ಪ್ರಧಾನ ಅರ್ಚಕ ಸುರೇಂದ್ರ ಗುರುಸ್ವಾಮಿ ಇವರು ಜಂಟಿಯಾಗಿ ಕೋರಿದ್ದಾರೆ.