ಕರೋನ ತಡೆಗೆ ಆಯುಷ್ಮಾನ್ ಭಾರತ್ ವೇಗ ಹೆಚ್ಚಿಸಿ: ಡಾ. ಟೆಡ್ರೊಸ್

ಜಿನೀವಾ-/ ನವದೆಹಲಿ, ಜೂನ್ 06,ಭಾರತ  ಕೋವಿಡ್ ಬಿಕ್ಕಟ್ಟಿನ ನಡುವೆಯೂ  ಆಯುಷ್ಮಾನ್ ಭಾರತ್ ಯೋಜನೆಯ ಅನುಷ್ಠಾನವನ್ನು ತ್ವರಿತಗೊಳಿಸುವ   ಅವಕಾಶವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ. ಇದು  ಪರಿಸ್ಥಿತಿಯನ್ನು ಸದ್ಯದ ಸ್ಥಿತಿಯಲ್ಲಿ  ತಹಬಂದಿಗೆ  ತರಲು, ನಿಭಾಯಿಸಲು ಸಹಾಯಕವಾಗಲಿದೆ  ಖಂಡಿತವಾಗಿಯೂ ಕೋವಿಡ್ ಬಹಳ ದುರದೃಷ್ಟಕರ ಮತ್ತು ಇದು ಅನೇಕ ರಾಷ್ಟ್ರಗಳಿಗೆ ಸವಾಲಾಗಿದೆ, ಆದರೆ ನಾವು ಹೊಸ ಅವಕಾಶಗಳನ್ನೂ  ಸಹ ಹುಡುಕಬೇಕಾಗಿದೆ ಎಂದು  ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಡಾ. ಟೆಡ್ ರೋಸ್ ಹೇಳಿದರು.

ಭಾರತಕ್ಕೆ  ಆಯುಷ್ಮಾನ್ ಭಾರತ್ ಅನ್ನು ವಿಶೇಷವಾಗಿ ಪ್ರಾಥಮಿಕ ಆರೋಗ್ಯ ರಕ್ಷಣೆಯ ಮೇಲೆ ಗಮನ  ಕೇಂದ್ರೀಕರಿಸಲು  ಅವಕಾಶವಾಗಲಿದೆ ಎಂದು  ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಡಾ. ಟೆಡ್ ರೋಸ್ ಹೇಳಿದರು.ಆಯುಷ್ಮಾನ್ ಭಾರತ್ ಮೋದಿ ಸರ್ಕಾರದ ಪ್ರಮುಖ ಆರೋಗ್ಯ ಯೋಜನೆಯಾಗಿದ್ದು ಬಡವರಿಗೆ ಉಚಿತ ಆರೋಗ್ಯ ಸೌಲಭ್ಯವನ್ನು ಒದಗಿಸುವ ಗುರಿ ಹೊಂದಿದೆ. 50 ಕೋಟಿ ಬಡತನ  ಕುಟುಂಬಕ್ಕೆ ವರ್ಷಕ್ಕೆ ಐದು ಲಕ್ಷ ರೂ. ಆರೋಗ್ಯದ ವಿಮೆ ಸೌಲಭ್ಯ  ಒದಗಿಸಿದೆ. ಇದು ಆರೋಗ್ಯ ಮೂಲಸೌಕರ್ಯವನ್ನು ತಳಮಟ್ಟದಿಂದ  ಅಭಿವೃದ್ಧಿಪಡಿಸಲು  ಗಮನಹರಿಸುತ್ತದೆ.