ಆಯೋಧ್ಯೆ ಸುಪ್ರೀಂ ತೀಪು; ಭಾರತೀಯರು, ಸಂವಿಧಾನಕ್ಕೆ ಸಂದ ಜಯ ; ವಿಶ್ವ ಹಿಂದೂ ಪರಿಷತ್ ಬಣ್ಣನೆ

 ಔರಂಗಾಬಾದ್ (ಮಹಾರಾಷ್ಟ್ರ), ನ 9:        ರಾಮ ಮಂದಿರ - ಬಾಬ್ರಿ ಮಸೀದಿ ವಿವಾದ ಸಂಬಂಧ  ಸುಪ್ರೀಂ ಕೋರ್ಟ್  ಶನಿವಾರ  ನೀಡಿರುವ  ಐತಿಹಾಸಿಕ  ತೀರ್ಪನ್ನು  ಸ್ವಾಗತಿಸಿರುವ  ವಿಶ್ವ ಹಿಂದೂ ಪರಿಷತ್ (ವಿ ಹೆಚ್ ಪಿ)  ಇದು ಭಾರತೀಯ ಸಮುದಾಯ ಹಾಗೂ ಸಂವಿಧಾನಕ್ಕೆ  ಸಂದ  ಜಯ ಎಂದು  ಬಣ್ಣಿಸಿದೆ. ವಿಶ್ವ ಹಿಂದೂ ಪರಿಷತ್  ದೇವಗಿರಿ ಪ್ರಾಂತ್ಯ ಅಧ್ಯಕ್ಷ  ಸಂಜಯಪ್ಪ ಬಗರ್ಾಜೆ ಮಾತನಾಡಿ,  ಸುಮಾರು  400 ವರ್ಷಗಳಿಂದ  ಬಾಕಿ  ಉಳಿದುಕೊಂಡಿದ್ದ  ರಾಮಜನ್ಮಭೂಮಿ   ಸಂಬಂಧ   ಸರ್ವೋಚ್ಛ ನ್ಯಾಯಾಲಯ  ಇಂದು  ನೀಡಿರುವ  ಐತಿಹಾಸಿಕ ತೀರ್ಪನ್ನು ಎಲ್ಲ ಧರ್ಮಿಯರು ಹಾಗೂ  ಸಮುದಾಯಗಳು  ಸ್ವೀಕರಿಸಬೇಕು ಎಂದು ಹೇಳಿದ್ದಾರೆ. ತೀಪು   ಸತ್ಯ  ಹಾಗೂ  ಸಂವಿಧಾನಕ್ಕೆ ದೊರೆತ ಜಯವಾಗಿದ್ದು,   ವಿವಾದಿತ  ಸ್ಥಳ ರಾಮಲಲ್ಲಾಗೆ ಸೇರಿದ್ದು ಎಂಬುದನ್ನು  ನ್ಯಾಯಾಲಯ  ಅಂಗೀಕರಿಸಿದೆ.  ರಾಮಜನ್ಮಭೂಮಿಗಾಗಿ   ವಿಶ್ವ ಹಿಂದೂ ಪರಿಷತ್ 1985 ರಿಂದ  ದೇಶಾದ್ಯಂತ  ಭಾರಿ  ಹೋರಾಟ, ಚಳುವಳಿ  ನಡೆಸಿ, ಜಾಗೃತಿ ಮೂಡಿಸಲು ಪ್ರಯತ್ನಿಸಿತ್ತು.  ಈ ಹೋರಾಟದಲ್ಲಿ  ಹಲವು ವಿಹೆಚ್ ಪಿ ಕಾರ್ಯಕರ್ತರು  ತಮ್ಮ ಜೀವ  ಕಳೆದುಕೊಂಡಿದ್ದರು ಎಂದು ಹೇಳಿದರು. ತೀರ್ಪನ್ನು ಎಲ್ಲ  ಧರ್ಮದ ಜನರು  ಸ್ವೀಕರಿಸಿ ಗೌರವಿಸಬೇಕು.  ದೇಶದ ಅಭಿವೃದ್ದಿಗೆ  ಸರ್ವರೂ ಒಟ್ಟುಗೂಡಬೇಕು  ಎಂದು ಅವರು  ಕರೆನೀಡಿದ್ದಾರೆ. ವಿಹೆಚ್ ಪಿ  ರಾಜ್ಯ  ಕಾರ್ಯದರ್ಶಿ  ಅನಂತ್ ಪಾಂಡೆ,   ನ್ಯಾಯಾಲಯದ ತೀರ್ಪನ್ನು ಯಥಾ ರೀತ್ಯ  ಸಂಘಟನೆ  ಒಪ್ಪಿಕೊಳ್ಳಲಿದೆ.  ಸತ್ಯವನ್ನು ನ್ಯಾಯಾಂಗ  ವ್ಯವಸ್ಥೆ   ಮತ್ತೊಮ್ಮೆ ಅನುಮೋದಿಸಿರುವುದು  ರುಜುವಾತಾಗಿದೆ ಎಂದು ಹೇಳಿದರು. ವಿಹೆಚ್ ಪಿ ನಡೆಸಿದ  ಹೋರಾಟಕ್ಕೆ ಈಗ ಜಯ ದೊರೆತಿದ್ದು,   ನ್ಯಾಯಾಲಯದ ತೀರ್ಪನ್ನು ಎಲ್ಲರೂ ಗೌರವಿಸಬೇಕು ಎಂದು  ವಿಹೆಚ್ ಪಿ ಮತ್ತೊಬ್ಬ ನಾಯಕ  ರಾಜೇಶ್ ಜೈನ್  ಹೇಳಿದ್ದಾರೆ.