ಮನೆಯಲ್ಲಿ ಕುಳಿತು‘ಇ-ಖಾತಾ ಪಡೆದುಕೊಳ್ಳಲು ಜಾಗೃತಿ ಜಾಥಾ’ ಅಭಿಯಾನ

ಮನೆಯಲ್ಲಿ ಕುಳಿತು‘ಇ-ಖಾತಾ ಪಡೆದುಕೊಳ್ಳಲು ಜಾಗೃತಿ ಜಾಥಾ’ ಅಭಿಯಾನ Awareness rally to get e-Khata while sitting at home

ದೇವರಹಿಪ್ಪರಗಿ 25: ಸರ್ಕಾರದ ನಿರ್ದೇಶನದಂತೆ ಸಾರ್ವಜನಿಕರು ತಮ್ಮ ಆಸ್ತಿಗಳನ್ನು ಇ-ಖಾತಾವನ್ನು ಮನೆಯಲ್ಲಿ ಕುಳಿತು ತಂತ್ರಾಂಶದಲ್ಲಿ ನೊಂದಣಿ ಮಾಡಿಕೊಳ್ಳಬಹುದಾದ ಸುಲಭ ವಿಧಾನವನ್ನು ಸರ್ಕಾರ ಆಸ್ತಿ ಮಾಲೀಕರಿಗೆ ನೀಡಲಾಗಿದೆ ಇದರ ಸದುಪಯೋಗವನ್ನು ಪಟ್ಟಣದ ಜನತೆ ಮಾಡಿಕೊಳ್ಳಬೇಕು ಎಂದು ಪ.ಪಂ ಮುಖ್ಯಾಧಿಕಾರಿ ಅಪ್ರೋಜ ಅಹ್ಮದ ಪಟೇಲ ಹೇಳಿದರು. 

ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ಗುರುವಾರ ಹಮ್ಮಿಕೊಂಡ ಮನೆಯಲ್ಲಿ ಕುಳಿತು ಇ-ಖಾತಾವನ್ನು ಪಡೆದುಕೊಳ್ಳುವ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಅಗತ್ಯ ದಾಖಲೆಗಳನ್ನು ನೀಡಿ ಈ ವಿನೂತನ ತಂತ್ರಾಂಶದಲ್ಲಿ ತಮ್ಮ ಆಸ್ತಿ ನೋಂದಣಿ ಮಾಡಿಕೊಳ್ಳಬೇಕು’ ಇದರಿಂದ ನೇರವಾಗಿ ಸರ್ಕಾರದ ಸೌಲಭ್ಯ ಪಡೆಯಲು ಸುಲಭವಾಗುತ್ತದೆ‘ ಎಂದು ಹೇಳಿ. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಈ ಖಾತಾ ಬಗ್ಗೆ ಮಾಹಿತಿ ನೀಡಿದರು. ಆನ್ಲೈನ್ ನಲ್ಲಿಯೇ ಕಂದಾಯ, ಆಸ್ತಿ ನೋಂದಣಿ, ತೆರಿಗೆಯನ್ನು ಕೂಡ ಪಾವತಿಸಬಹುದಾಗಿದೆ.

ಅದಕ್ಕೆ ಬೇಕಾದ ದಾಖಲೆಗಳನ್ನು ಆನ್ಲೈನ್ ಮೂಲಕ 07 ದಾಖಲಾತಿಗಳು ಸಲ್ಲಿಸಬಹುದಾಗಿದೆ.1. ಮಾಲೀಕರ ಭಾವಚಿತ್ರ ಮತ್ತು ಆಧಾರ್2. ಆಸ್ತಿ ತೆರಿಗೆ ಎಸ್‌.ಎ.ಎನ್‌.ಚಲನ್ ಸಂಖ್ಯೆ 3. ಸ್ವತ್ತಿನ ಕ್ರಯ / ನೋಂದಾಯಿತ ಪತ್ರ ಸಂಖ್ಯೆ (ಕಾವೇರಿ ತಂತ್ರಾಶದಿಂದ ವಿದ್ಯುನ್ಮಾನವಾಗ 4. ವಿದ್ಯುತ್ ಆರ್ ಆರ್ ಸಂಖ್ಯೆ (ಖಾಲಿ ನಿವೇಶನಗಳಿಗೆ ಅಗತ್ಯವಿಲ್ಲ)5. ಸ್ವತ್ತಿನ ಛಾಯಾಚಿತ್ರ 6. ಇಅ: 15/16 7. ಸ್ವತ್ತಿಗೆ ಸಂಬಂಧಿಸಿದ ಇತರೆ ಪೂರಕ ಅಗತ್ಯ ದಾಖಲೆಗಳು ಪಟ್ಟಣದ ನಿವಾಸಿಗಳು ಅಸ್ತಿ ದಾಖಲೆ ಇ-ಅಸ್ತಿ ತಂತ್ರಾಂಶದಲ್ಲಿ ಪ್ರಕಟಿಸಲು  ನಲ್ಲಿ ಆಸ್ತಿ ದಾಖಲೆ ಪರೀಶೀಲಿಸಬಹುದು. ಅಗತ್ಯವಿದ್ದಲ್ಲಿ ದಾಖಲೆ ನೀಡಿ ತಿದ್ದುಪಡಿ/ತಕರಾರು ಅರ್ಜಿ ಸಲ್ಲಿಸಬಹುದು.ಆನ್‌ಲೈನ್‌ನಲ್ಲೇ ಶುಲ್ಕ ಪಾವತಿಸಿ ದಾಖಲೆ ಸಲ್ಲಿಸಿ ಅನುಮೋದಿತ ಅಧಿಕೃತ ಇ-ಖಾತೆ ಪಡೆಯಬಹುದು ಹಾಗೂ ನಾಗರಿಕರು ಇ-ಖಾತಾ ಪಡೆಯುವ ಮೂಲಕ ಸರಳವಾಗಿ ಆಸ್ತಿ ತೆರಿಗೆಯನ್ನು ಆನ್‌ಲೈನ್ ಮುಖಾಂತರ ಪಾವತಿಸಲು ಸರ್ಕಾರ ಅನುಕೂಲ ಕಲ್ಪಿಸಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. 

ಪಟ್ಟಣದ ಜನತೆ ಮನೆಯಲ್ಲೇ ಕುಳಿತು ಇ-ಖಾತಾವನ್ನು  ಪಡೆದುಕೊಳ್ಳುವ ವಿಷಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.ಇದೇ ಸಂದರ್ಭದಲ್ಲಿ ಪ.ಪ ಸಿಬ್ಬಂದಿಗಳಾದ ಮುತ್ತುರಾಜ ಹಿರೇಮಠ, ಸೋಮು ಭೋವಿ, ಬಂದಗಿಸಾಬ ಮಂಡೆ, ಶ್ರೀಧರ ಘತ್ತರಗಿ, ಪ್ರವೀಣ್ ಹಿರೇಮಠ, ಅಕ್ಷಯ ಹಿರೇಮಠ, ಅಂಬರಿಶ ನಾಲತವಾಡ ಹಾಗೂ ಸಾರ್ವಜನಿಕರು ಭಾಗವಹಿಸಿದರು.