ರಾ್ಯಗಿಂಗ್ ನಿಷೇಧ ಹಾಗೂ ಲೈಂಗಿಕ ಹಿಂಸೆ ತಡೆಗೆ ಜಾಗೃತಿ ಕಾರ್ಯಕ್ರಮ
Awareness program to ban ragging and prevent sexual violence
ಕೊಪ್ಪಳ 01: ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೊಪ್ಪಳ, ಜಿಲ್ಲಾ ಕಾನೂನು ಸೇವಾ ಇಲಾಖೆ, ಕೊಪ್ಪಳ ಹಾಗೂ ಜಿಲ್ಲಾ ಪೋಲೀಸ್ ಇಲಾಖೆ ಇವರುಗಳ ಸಹಯೋಗದೊಂದಿಗೆ ರಾ್ಯಗಿಂಗ್ ನಿಷೇಧ ಹಾಗೂ ಲೈಂಗಿಕ ಹಿಂಸೆ ತಡೆಗೆ ಜಾಗೃತಿ ಮತ್ತು ಸಂವೇದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಗಳು ಹಾಗೂಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾಂತೇಶ ದರಗದ ಇವರು ವಿದ್ಯಾರ್ಥಿಗಳಿಗೆ ರಾ್ಯಗಿಂಗ್ ಮತ್ತು ಲೈಂಗಿಕ ಹಿಂಸೆ ಯಾವ ರೀತಿ ಸಾಮಾಜಿಕ ಹಾಗೂ ಕಾನೂನುಗಳ ಚೌಕಟ್ಟಿನಲ್ಲಿ ಬರುತ್ತದೆ ಮತ್ತು ಕಾಯಿದೆಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.ಜಿಲ್ಲಾ ಪೋಲೀಸ್ ಇಲಾಖೆ, ಕೊಪ್ಪಳದ ಉಪಪೋಲೀಸ್ ವರಿಷ್ಠಾಧಿಕಾರಿಗಳಾದ ಮುತ್ತಣ್ಣ ಸರವಗೋಳ ಮಾತನಾಡಿ ವಿದ್ಯಾರ್ಥಿಗಳ ರಕ್ಷಣೆ ಮತ್ತು ಮಹಿಳಾ ಗೌರವ ರಕ್ಷಣೆಯ ದೃಷ್ಟಿಯಿಂದ ಇಂತಹ ಸಕಾರಾತ್ಮಕ ಶಿಕ್ಷಣ ಪರಿಸರ ನಿರ್ಮಿಸುವುದು ಮಹಾವಿದ್ಯಾಲಯದ ಆದ್ಯ ಕರ್ತವ್ಯವಾಗಿದೆ ಎಂದರು.
ಇನ್ನೋರ್ವ ಜಿಲ್ಲಾ ಪೋಲೀಸ್ ಇಲಾಖೆ, ಸೈಬರ್‌ಕ್ರೈಮ್ ವಿಭಾಗ, ಕೊಪ್ಪಳದ ಉಪಪೋಲೀಸ್ ವರಿಷ್ಠಾಧಿಕಾರಿಗಳಾದ ಯಶವಂತಕುಮಾರ ಮಾತನಾಡಿ ರಾ್ಯಗಿಂಗ್ ಮತ್ತು ಲೈಂಗಿಕ ಹಿಂಸೆಯಿಂದ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಕುಗ್ಗುತ್ತದೆ. ಇದರ ಕಾನೂನು ಅರಿವು ತುಂಬಾ ಅವಶ್ಯಕ ಹಾಗೂ ಇದರ ಜ್ಞಾನದಿಂದ ಸುರಕ್ಷಿತ ವಾತಾವರಣ ನಿರ್ಮಿಸಲಿಕ್ಕೆ ಸಹಾಯವಾಗುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷರಾದ ಪ್ರಾಂಶುಪಾಲರಾದ ಡಾ.ಮಹಾಂತೇಶ ಸಾಲಿಮಠ ಮಾತನಾಡಿ ಮಹಾವಿದ್ಯಾಲಯದಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ರಾ್ಯಗಿಂಗ್ ನಿಷೇಧ ಹಾಗೂ ಲೈಂಗಿಕ ಹಿಂಸೆ ತಡೆಗೆ ಅಗತ್ಯ ಕ್ರಮ ಹಾಗೂ ಮಾಹಿತಿ ನೀಡುತ್ತಿದ್ದು ಯಾವುದೇ ತೊಂದರೆ ಗೊಳಗಾದಲ್ಲಿ ಮಹಾವಿದ್ಯಾಲಯವು ಸಹಾಯಕ್ಕೆ ಇರುತ್ತದೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಸೂರ್ಯ ನಾರಾಯಣ ಸ್ವಾಗತ ಭಾಷಣ ಗೈದರು.ಡಾ. ಬಸವಂತರಾವ್ ಪೋಲೀಸ್ ಪಾಟೀಲ್ ವಂದನಾರ್ಪಣೆ ಮಾಡಿದರು. ಡಾ. ಶಶಿಕಲಾ ಕಡಬಡಿ ನಿರೂಪಿಸಿದರು.ಉಪ ಪ್ರಾಂಶುಪಾಲರಾದ ಡಾ. ಸುರೇಶ ಹಕ್ಕಂಡಿ ಹಾಗೂ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 