ವಕ್ಕುಂದ ಗ್ರಾಮದಲ್ಲಿ ಪೀಡೆನಾಶಕಗಳ ಸುರಕ್ಷತೆ ಕುರಿತು ಜಾಗ್ರತಿ ಕಾರ್ಯಕ್ರಮ
Awareness program on pesticide safety in Vakkunda village
ಬೈಲಹೊಂಗಲ 24 : ತಾಲೂಕಿನ ವಕ್ಕುಂದ ಗ್ರಾಮದಲ್ಲಿ ಶುಕ್ರವಾರದಂದು ಕೃಷಿ ಇಲಾಖೆ ಬೈಲಹೊಂಗಲ ವತಿಯಿಂದ ಸಂಗತಿಕೊಪ್ಪ ಬಸವೇಶ್ವರ ದೇವಸ್ಥಾನದಲ್ಲಿ ಕೃಷಿಯಲ್ಲಿ ಪೀಡೆನಾಶಕಗಳ ಸುರಕ್ಷಿತ ಮತ್ತು ವಿವೇಚನಾತ್ಮಕ ಬಳಕೆ ಕುರಿತು ರೈತರಿಗೆ ಜಾಗೃತಿ ಕಾರ್ಯಕ್ರಮ ಜರುಗಿತು.
ಇವತ್ತಿನ ಆಧುನಿಕ ಜಗತ್ತಿನಲ್ಲಿ ಕೃಷಿ ಭೂಮಿಯನ್ನು ಆರೋಗ್ಯದಿಂದ ಇಡಲು ರಾಸಾಯನಿಕ ಗೊಬ್ಬರ ಮತ್ತು ಪಿಡೆನಾಶಕಗಳ ಬಳಕೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಿ ವಿಷಮುಕ್ತ ಆಹಾರ ಉತ್ಪಾದನೆ ಮಾಡಲು ಕೃಷಿ ಅಧಿಕಾರಿ ಯಮನಪ್ಪ ಆರ್ ಎಂ ರೈತರಿಗೆ ಮನವಿ ಮಾಡಿದರು. ಕೃಷಿ ಕಾಯಕದಲ್ಲಿ ರೈತರು ಸುರಕ್ಷಿತವಾಗಿ ರಾಸಾಯನಿಕ ವಸ್ತುಗಳನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕಿಟಶಾಸ್ತ್ರಜ್ಞ.
ಕೆ.ಎಲ್. ಈ ಕೃಷಿ ಮಹಾವಿದ್ಯಾಲಯದ ಡಾ. ನಿಂಗರಾಜ ಬೆಳಗಲ್ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಊರಿನ ಹಿರಿಯರಾದ ಅಶೋಕ ಪಾಟೀಲ, ಅಶೋಕ ಜಂತಿ ವಹಿಸಿದ್ದರು ಮತ್ತು ಇಲಾಖೆಯ ಜಾಗೃತಿ ಕಾರ್ಯಕ್ರಮದ ಕುರಿತು ಹರ್ಷ ವ್ಯಕ್ತಪಡಿಸಿದರು.
ಹಾಗೆಯೇ ಶಿಕ್ಷಣ ಪ್ರೇಮಿಗಳು, ಸಮಾಜ ಸೇವಕರು ಹಾಗೂ ಉದ್ಯಮಿಗಳು ಆದ ನಾರಾಯಣ ನಲವಡೆ ಅವರು ಕಾರ್ಯಕ್ರಮದಲ್ಲಿ ರೈತರಿಗೆ ಪ್ರಸ್ತುತ ಕೃಷಿಯಲ್ಲಿ ರೈತರು ಅನುಸರಿಸ ಬೇಕಾದ ವಿವಿಧ ರೀತಿಯ ಕೆಲಸಗಳ ಬಗ್ಗೆ ವಿವರಿಸಿ ಇಲಾಖೆಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೋರ್ಟಿವ ಕಂಪನಿ ಪ್ರತಿನಿಧಿಗಳು, ಕೃಷಿ ಅಧಿಕಾರಿ ಬಿ. ಕೆ ಜಮಾದಾರ, ಗಂಗಾಧರ, ಬಸವರಾಜ, ಚಂದ್ರಕಾಂತ ಮರಡಿ ನಿರೂಪಿಸಿ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 