ಜಿ.ಎಸ್.ಟಿ. ದರ ಬದಲಾವಣೆ ಮತ್ತು ಪರಿವರ್ತನಾ ಸಮಸ್ಯೆಗಳ ಜಾಗೃತಿ ಕಾರ್ಯಕ್ರಮ
Awareness program on GST rate changes and transition issues
ಬಳ್ಳಾರಿ 19 : ನಗರದಲ್ಲಿಜಿ.ಎಸ್.ಟಿ.2.0 ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಿ ಕಾರ್ಯಗತಗೊಳಿಸಲು ಸುಲಭವಾಗುವಂತೆ ರೂಪಿಸಲಾಗಿದೆ” ಯಶವಂತರಾಜ್ ನಾಗಿರೆಡ್ಡಿ. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವತಿಯಿಂದ ಜಿ.ಎಸ್.ಟಿ.2.0 ದರ ಬದಲಾವಣೆ ಮತ್ತು ಪರಿವರ್ತನಾ ಸಮಸ್ಯೆಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಏರಿ್ಡಸಲಾಯಿತು.
ಬಿಡಿಸಿಸ್ಘಿಐ ಸಂಸ್ಥೆಯ ಅಧ್ಯಕ್ಷರಾದ ಯಶವಂತರಾಜ್ ನಾಗಿರೆಡ್ಡಿ, ಸಿಎ ರಾಜೇಶ ಕುಮಾರ ಟಿಆರ್. ನಿರ್ದೇಶಕರು, ಎಫ್.ಕೆ.ಸಿ.ಸಿ.ಐ, ಬೆಂಗಳೂರು ಹಾಗೂ ಸಿಎ ಮುಸನಳ್ಳಿ ರಾಘವೇಂದ್ರ ರೆಡ್ಡಿ. ಚಾರ್ಟರ್ಡ್ ಅಕೌಂಟೆಂಟ್. ಬೆಂಗಳೂರು ಅವರ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯಶವಂತರಾಜ್ ನಾಗಿರೆಡ್ಡಿ, ಸಂಸ್ಥೆಯ ಉದ್ದೇಶ, ಗುರಿ ಹಾಗೂ ಸಾಧನೆಗಳ ಕುರಿತು ವಿವರಿಸಿ, ವ್ಯಾಪಾರಸ್ಥರು, ವರ್ತಕರು ಮತ್ತು ಕೈಗಾರಿಕಾ ಉದ್ದಿಮೆಗಳಿಗೆ ಅನುಕೂಲವಾಗುವಂತೆ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.
ಅವರು, “ಜಿಎಸ್ಟಿ 1.0 ರ ಮುಖ್ಯ ಉದ್ದೇಶ ಒಂದು ರಾಷ್ಟ್ರ, ಒಂದು ತೆರಿಗೆ ಆಗಿದ್ದರೆ, ಜಿ.ಎಸ್.ಟಿ.2.0 ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಿ ಕಾರ್ಯಗತಗೊಳಿಸಲು ಸುಲಭವಾಗುವಂತೆ ರೂಪಿಸಲಾಗಿದೆ” ಜಿಎಸ್ಟಿ 2.0 ಆಟೋಮೊಬೈಲ್ಗಳು, ಸಿಮೆಂಟ್, ರಿಯಲ್ ಎಸ್ಟೇಟ್, ವಿಮೆ ಮತ್ತು ಕೃಷಿಯಂತಹ ಕ್ಷೇತ್ರಗಳಿಗೆ ಹೆಚ್ಚಿನ ಪರಿಣಾಮ ಮಾಡಲಿದ್ದು, ಜನಸಾಮಾನ್ಯರಿಗೆ ಇದರಿಂದ ನೆರವಾಗಲಿದೆ ಹಾಗೂ ಹಣದುಬ್ಬರ ಮತ್ತಷ್ಟು ತಗ್ಗಲು ಸಹಾಯವಾಗಬಹುದು ಎಂದರು.ಸಿಎ ರಾಜೇಶ ಕುಮಾರ ಟಿ.ಆರ್. ಎಫ್.ಕೆ.ಸಿ.ಸಿ.ಐ, ಬೆಂಗಳೂರು, ಇವರು ಮಾತನಾಡಿ, 12ಅ ಮತ್ತು 28ಅ ತೆರಿಗೆ ಸ್ಲ್ಯಾಬ್ಗಳನ್ನು ತೆಗೆದುಹಾಕುವ ಹೊಸ ಜಿಎಸ್ಟಿ 2.0 ಘೋಷಣೆಯ ಮುಖ್ಯ ಉದ್ದೇಶ ಜಿಎಸ್ಟಿ 2.0 ಐಷಾರಾಮಿ ಖರೀದಿಗಳಿಗೆ 40% ಹೆಚ್ಚಿನ ಸ್ಲ್ಯಾಬ್ ಅನ್ನು ಪ್ರಸ್ತಾಪಿಸುತ್ತದೆ. ಇದರಿಂದಾಗಿ 5% ಮತ್ತು 18% ಸ್ಲ್ಯಾಬ್ಗಳಿಗೆ ಬದಲಾವಣೆಯು ಆದಾಯದ ಮೇಲೆ ಪರಿಣಾಮ ಬೀರುವುದಿಲ್ಲ.ಶಾಂಪೂ, ಸೋಪ್ಗಳು, ಟೂತ್ಪೇಸ್ಟ್, ಬೆಣ್ಣೆ, ತುಪ್ಪ, ಚೀಸ್ ಮತ್ತು ಬ್ರೆಡ್ಗಳಂತಹ ದಿನನಿತ್ಯದ ಅಗತ್ಯ ವಸ್ತುಗಳು ಈಗ ಕನಿಷ್ಠ 5% ತೆರಿಗೆಯನ್ನು ಆಕರ್ಷಿಸುತ್ತವೆ. ವಿವಿಧ ಆಹಾರ ಮತ್ತು ಡೈರಿ ಉತ್ಪನ್ನಗಳನ್ನು ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಆರೋಗ್ಯ ರಕ್ಷಣೆ, ವಿಮೆ ಮತ್ತು ಲೇಖನ ಸಾಮಗ್ರಿಗಳಂತಹ ಶಿಕ್ಷಣ ಸಂಬಂಧಿತ ವಸ್ತುಗಳ ಮೇಲೂ ಯಾವುದೇ ತೆರಿಗೆ ಇರುವುದಿಲ್ಲ ಎಂದರು.ಮುಖ್ಯ ಅತಿಥಿಗಳಾಗಿ, ಉಪನ್ಯಾಸ ನೀಡಿದ ಸಿಎ ಮುಸನಳ್ಳಿ ರಾಘವೇಂದ್ರ ರೆಡ್ಡಿ, ಜಿ.ಎಸ್.ಟಿ.2.0 ದರ ಬದಲಾವಣೆ ಹಾಗೂ ಪರಿವರ್ತನಾ ಸಮಸ್ಯೆಗಳ ಬಗ್ಗೆ ವಿಸ್ತೃತ ಮಾಹಿತಿ ಹಂಚಿಕೊಂಡರು.ವ್ಯಾಪಾರಸ್ಥರು, ವರ್ತಕರು ಮತ್ತು ಕೈಗಾರಿಕಾ ಉದ್ದಿಮೆಗಳು ಕೇಳುವ ಪ್ರಶ್ನೆಗಳಿಗೆ ಬಂದಂತಹ ಮುಖ್ಯ ಅತಿಥಿಗಳು ಉತ್ತರ ನೀಡಿದರು.ಸಿಎ ಕೆ. ರಾಜಶೇಖರ, ಚೇರ್ಮನ್, ತೆರಿಗೆ ಸಮಿತಿ, ಬಿಡಿಸಿಸ್ಘಿಐ, ಬಳ್ಳಾರಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀ ಕೆ.ಸಿ. ಸುರೇಶಬಾಬು ವಂದನಾರೆ್ಣ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಅವ್ವಾರು ಮಂಜುನಾಥ, ಉಪಾಧ್ಯಕ್ಷರಗಳಾದ, ಸೊಂತಗಿರಿಧರ, ಜಂಟಿ ಕಾರ್ಯದರ್ಶಿಗಳಾದ ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ.ರಾಮಚಂದ್ರ, ಇತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವರ್ತಕರು, ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 