ಮಹಿಳಾ ಅಭಿವೃದ್ಧಿಗೆ ಅರಿವು ಕಾರ್ಯಕ್ರಮ: ನ್ಯಾ. ಹೇಮಲತಾ

ಬಾಗಲಕೋಟೆ: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಸ್ವಾತಂತ್ರ್ಯಕ್ಕೆ ಯಾವುದೇ ಸ್ಥಾನ ಮಾನಗಳಿಲ್ಲ. ಅದಕ್ಕಾಗಿ ಇಂದು ಸರ್ಕಾರ  ಮಹಿಳಾ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮಹಿಳೆಯರಲ್ಲಿ ಅರಿವು ಮೂಡಿಸುತ್ತಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದಶರ್ಿ ಹೇಮಲತಾ ಹುಲ್ಲೂರು ಹೇಳಿದರು.

      ತಾಲೂಕ ಪಂಚಾಯತ್ ಸಭಾಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಅಂಗನವಾಡಿ ಮೇಲ್ವಾಚರಕಿಯರಿಗೆ ಭೇಟಿ ಬಚಾವೋ, ಭೇಟಿ ಪಡಾವೋ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಪ್ರಾಚೀನ ಕಾಲದ ಮಹಿಳೆಯರ ಸ್ಥಾನಮಾನಗಳನ್ನು ಪುರುಷ ಪ್ರಧಾನ ಸಮಾಜ ಗೌರವಿಸುತ್ತಿರಲಿಲ್ಲ. ಹೆಣ್ಣು ಕೇವಲ ನಾಲ್ಕು ಗೋಡೆಗಳ ಮಧ್ಯೆ ಇರಬೇಕೆಂಬ ಚೌಕಟ್ಟನ್ನು ಹಾಕಲಾಗಿತ್ತು. ಆದರೆ ಇಂದು ಮಹಿಳೆ ಎಲ್ಲ ಕ್ಷೇತ್ರದಲ್ಲಿಯೂ ತನ್ನ ಸ್ಥಾನವನ್ನು ಭದ್ರಗೊಳಿಸಿ ಅಭಿವೃದ್ಧಿಯತ್ತ ಸಾಗುತ್ತಿದ್ದಾಳೆ ಎಂದರು.

ಸಕರ್ಾರದ ಶಿಕ್ಷಣದ ಹಕ್ಕನ್ನು ಎಲ್ಲರಿಗೂ ನೀಡಿದ್ದರೂ ಗ್ರಾಮೀಣ ಭಾಗಗಳಲ್ಲಿ ಕೆಲವು ಸಾಮಾಜಿಕ ಪಿಡಿಗು ಎನಿಸಿಕೊಂಡ ಬಾಲ್ಯವಿವಾಹ, ವರದಕ್ಷಿಣೆ, ದೇವದಾಸಿ ಪದ್ಧತಿ, ಬಾಲಕಾಮರ್ಿಕ ಪದ್ಧತಿ, ಬಲತ್ಕಾರ, ಕೌಟುಂಬಿಕ ತಾರತಮ್ಯಗಳಂತಹ ಅನೇಕ ಸಮಸ್ಯೆಗಳನ್ನು ಮಹಿಳೆ ಎದುರಿಸುತ್ತಿದ್ದಾಳೆ. ಇವೆಲ್ಲವನ್ನು ಸಕರ್ಾರದ ನಿಷೇಧಿಸಿದ್ದರೂ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಅದಕ್ಕೆ ಪೋಸ್ಕೋ ಕಾಯ್ದೆ ಅನ್ವಯ 18 ವರ್ಷದ ಒಳಗಿನ ಹೆಣ್ಣು ಮಗುವಿನ ಯಾವುದೇ ದೈಹಿಕ ಮತ್ತು ಮಾನಸಿಕ ದೌರ್ಜನ್ಯವಾದಲ್ಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಮೂಲಕ ಹೆಣ್ಣು ಮಕ್ಕಳ ರಕ್ಷಣೆಗೆ ಸಕರ್ಾರ ಮುಂದಾಗಿದೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಅವರು ಬದಲಾವಣೆ ಎಂಬುವುದು ಕೇವಲ ಪುಸ್ತಕದಲ್ಲಿ ಇದೇ ಹೊರತು ಮಹಿಳೆಯರ ಜೀವನದಲ್ಲಿ ಆಗುತ್ತಿಲ್ಲ. ಬದಲಾವಣೆ ಎಂಬುವುದು ನಮ್ಮ ಮನೆಗಳಿಂದ ಆರಂಭವಾಗಬೇಕು. ಅಂದಾಗ ಮಾತ್ರ ಕುಟುಂಬದಿಂದ ತಾರತಮ್ಯತೆ ಕಡಿಮೆಯಾಗಲು ಸಾಧ್ಯ. ಇಂದಿನ ಸಾಂಪ್ರದಾಯಿಕ ಮನೆತನಗಳು ಹೆಣ್ಣು ಜನನವಾದರೆ ಕೇವಲ ಖಚರ್ಿಗೆ ದಾರಿ ಅದಕ್ಕಾಗಿ ಹೆಣ್ಣು ಹೆರುವುದೇ ಬೇಡ ಎಂಬ ನಿಧರ್ಾರಗಳನ್ನು ಮಾಡುವುರಿಂದ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗುತ್ತಿದೆ ಎಂದರು.

ಕಳೆದ ನಾಲ್ಕು ವರ್ಷದಿಂದ ಆರಂಭವಾದ ಭೇಟಿ ಭಚಾವೋ, ಭೇಟಿ ಪಡಾವೋ ಕಾರ್ಯಕ್ರಮ ಇಂದು ಸ್ವಲ್ಪಮಟ್ಟಿಲ್ಲಿ ಯಶಸ್ಸು ಕಾಣುತ್ತಿದೆ. ನಮ್ಮ ಸಂವಿಧಾನ ಪ್ರಬುದ್ಧವಾಗಿದೆ. ಒಂದು ಹೆಣ್ಣಿಗೆ ಒಂದು ಗಂಡು ಮಾತ್ರ ಸೀಮಿತ ಎನ್ನುತ್ತದೆ. ಆದರೆ ನಮ್ಮ ಪೌರಾಣಿಕ ಗ್ರಂಥಗಳು ಪುರಷತ್ವದ ಬಗ್ಗೆ ಹೆಚ್ಚಿನ ಮಟ್ಟದಲ್ಲಿ ಗರ್ಭಪಡುತ್ತವೆ. ಯಾವುದೇ ಗ್ರಂಥಗಳನ್ನು ಓದಿದರೂ ಅಲ್ಲಿ ಮಹಿಳೆಯರಿಗೆ ಯಾವುದೇ ಉತ್ತಮ ಸ್ಥಾಮಾನಗಳಿಲ್ಲ. ಕೆವಲ ಪೌರುಷತ್ವದ ಘಟನೆಗಳು ಮಾತ್ರ ಓದಲು ಸಿಗುತ್ತವೆ. ಇದನ್ನು ಪ್ರಶ್ನಿಸುವ ಧೈರ್ಯ ಮಹಿಳೆ ಮಾಡುತ್ತಿಲ್ಲವೆಂದರು. 

   ಸಂವಿಧಾನ ಎಲ್ಲರಿಗೂ ಸಮಬಾಳು ಸಮಪಾಲು ಎಂದು ಹೇಳುತ್ತದೆ. ಅದು ಕೇವಲ ಹೇಳಿಕೆಗೆ ಮಾತ್ರ ಸೀಮಿತವಾಗಿರಬಾರದು ಹೆಣ್ಣು ಸಮಾಜದ ಕಣ್ಣಿನಂತೆ ಎಲ್ಲಿ ಹೆಣ್ಣನ್ನು ಪೂಜಿಸುತ್ತಾರೋ ಅಲ್ಲಿ ಶಾಂತಿ, ನೆಮ್ಮದಿ ಇರುತ್ತದೆ. ಅದಕ್ಕಾಗಿ ಹೆಣ್ಣಿಗೆ ಇಂದು ಆಗುತ್ತಿರುವ ಎಲ್ಲ ಸಮಸ್ಯೆಗಳನ್ನು ಪ್ರಶ್ನಿಸುವ ಶಕ್ತಿ ತರುವ ಕಾರ್ಯ ಆಗಬೇಕಿದೆ ಎಂದು ಹೇಳಿದರು. 

   ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಗುಲಾಬ್ ನದಾಫ್ ಅವರು ಪ್ರೋಸ್ಕೋ 2012ರ ಕುರಿತು ಮಾಹಿತಿ ನೀಡಿದರು. ಇನ್ನೊರ್ವ ಅತಿಥಿ ಉಪನ್ಯಾಸಕರಾದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ತೇಜಸ್ವಿನಿ ಹಿರೇಮಠ ಮಹಿಳೆ ಮತ್ತು ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು. 

        ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಕೆ.ಆರ್ ಪವಾರ ಮಾತನಾಡಿ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮತ್ತು ನಿಯಂತ್ರಣ ಅಧಿನಿಯಮ 1994ರ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಿಡಿಪಿಒಗಳು ವಿವಿಧ ಇಲಾಖೆ ಅಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.