ವಿಚಾರಣಾಧಿನ ಖೈದಿಗಳಿಗೆ ಮಕ್ಕಳ ಹಕ್ಕುಗಳ ಕುರಿತು ಅರಿವು

ವಿಚಾರಣಾಧಿನ ಖೈದಿಗಳಿಗೆ ಮಕ್ಕಳ ಹಕ್ಕುಗಳ ಕುರಿತು ಅರಿವು  Awareness of children's rights for undertrial prisoners

ಲೋಕದರ್ಶನ ವರದಿ 

ಧಾರವಾಡ 07 : ಕರ್ನಾಟಕ ರಾಜ್ಯ ಮಕ್ಕಳ ಹಕ್ಕಗಳ ರಕ್ಷಣಾ ಆಯೋಗ ಬೆಂಗಳೂರು, ಮಕ್ಕಳ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೇಂದ್ರ ಕಾರಾಗೃಹ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ದಿ:06-03-2026 ರಂದು ಧಾರವಾಡ ಕೇಂದ್ರ ಕಾರಾಗೃಹದ ವಿಚಾರಣಾಧಿನ ಖೈದಿಗಳಿಗೆ ಮಕ್ಕಳ ಹಕ್ಕುಗಳ ಕುರಿತು  ಅರಿವು ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕಗಳ ರಕ್ಷಣಾ ಆಯೋಗದ ಸದಸ್ಯರಾದ ಎಸ್‌. ಮಂಜು ಇವರ ಅಧ್ಯಕ್ಷತೆಯಲ್ಲಿ ಏರಿ​‍್ಡಸಲಾಗಿತ್ತು.  ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಪ್ರಾರಂಬಿಸಲಾಯಿತು. ಉದ್ಘಾಟಕರಾಗಿ ಸ್ಥಾನವನ್ನು ಅಲಂಕರಿಸಿದ ಶ್ರೀಮತಿ ಮಂಜು ಮಾನ್ಯ ಸದಸ್ಯರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು ಇವರು ಮಾತನಾಡುತ್ತಾ ಕಾರಾಗೃಹದಲ್ಲಿರುವ ಪಾಲಕರ ಮಕ್ಕಳ ಸ್ಥಿತಿ-ಗತಿ, ಮಕ್ಕಳು ಅನುಭವಿಸುತ್ತಿರುವ ಮಾನಸಿಕ ಹಿಂಸೆಗಳ ಬಗ್ಗೆ ವಿವರಿಸಿದರು.  

ನೆರೆದಿರುವ ಬಂಧಿಖಾನೆಯ ಖೈದಿಗಳಿಗೆ ವಿವರಿಸುತ್ತಾ ತಾವುಗಳ ಕ್ಷುಲ್ಲಕ ಕಾರಣದ ಜಗಳಗಳು, ಕೊಲೆ ಸುಲಿಗೆ, ದರೋಡೆ ಅಥವಾ ಇನ್ನಾವುದೇ ಪ್ರಕರಣಗಳಲ್ಲಿ ದಾಖಲಾಗಿ ಈ ನಾಲ್ಕು ಗೋಡೆಗಳ ಒಳಗೆ ಇರುತ್ತೀರಿ ಎಂಬುದನ್ನು ಹೊರತು  ಪಡಿಸಿ ಬಂಧಿಖಾನೆಯಲ್ಲಿ ಸರ್ಕಾರದಿಂದ ಎಲ್ಲ ಸೌಲಭ್ಯಗಳು ದೊರೆಯುತ್ತಿವೆ. ಆದರೆ ನಿಮ್ಮ ಕುಟುಂಬಗಳು ಅನುಭವಿಸುತ್ತಿರುವ ನೋವು ಯಾತನೆಗಳ ಬಗ್ಗೆ ಅರಿವಿರಬೇಕು. ಬಂಧಿಖಾನೆಯಲ್ಲಿರುವ ಪಾಲಕರ ಮಕ್ಕಳಿಗೆ ಶಾಲೆಯಲ್ಲಿನ ಮಕ್ಕಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಕಷ್ಟ ಪಟ್ಟು ಮಾನಸಿಕವಾಗಿ ಖಿನ್ನತೆಗೊಳಗಾಗುತ್ತಾರೆ ಮತ್ತು ಸಾಮಾಜಿಕ ತಾರತಮ್ಯಕ್ಕೆ ಒಳಗಾಗುತ್ತಿದ್ದು,  ಆರ್ಥಿಕ ಹಾಗೂ ಶಿಕ್ಷಣದಿಂದ ವಂಚಿತರಾಗುತ್ತಿವೆ. ಆದ್ದರಿಂದ ನೆರೆದಿರುವಂತಹ ಖೈದಿಗಳು ಬಿಡುಗಡೆ ಹೊಂದಿ ಹೊರಗಡೆ ಹೋದ ಮೇಲೆ ನಿಮ್ಮ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ವಹಿಸಬೇಕು. ಅವರಿಗೆ ದೊರೆಯಬೇಕಾದ ಅಪ್ಪ/ಅಮ್ಮನ ಪ್ರೀತಿ ವಾತ್ಸಲ್ಯಗಳನ್ನು ನೀಡುವುದರೊಂದಿಗೆ ಮಕ್ಕಳು ಸಮಾಜದ ಮುಖ್ಯವಾಹಿನಿಯಲ್ಲಿ ಉತ್ತಮ ಪ್ರಜೆಗಳಾಗಿ ಬದುಕುವಲ್ಲಿ ನಿಮ್ಮಗಳ ಪಾತ್ರ ಮುಖ್ಯವಾದದ್ದು. ಆದ್ದರಿಂದ ಯಾವುದೇ ತಪ್ಪುಗಳನ್ನು ಮಾಡುವುದರ ಮುಂಚೆ ಕುಟುಂಬ ಹಾಗೂ ಮಕ್ಕಳ ಬಗ್ಗೆ ಯೋಚಿಸಬೇಕು.   

ತಂದೆ ತಾಯಿಗಳ ಪ್ರೀತಿ, ವಾತ್ಸಲ್ಯದಿಂದ ವಂಚಿತರಾದ ಮಕ್ಕಳು ಬಗೆ ಬಗೆಯ ಮಾದಕ ವ್ಯಸನಕ್ಕೆ ಪೀಡಿತರಾಗುವುದು, ದೌರ್ಜನ್ಯಕ್ಕೆ ಒಳಗಾಗುವುದು, ಬೇರೆಯವರಿಂದ ಮೋಸಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ಇಲ್ಲಿ ನೆರೆದ ಖೈದಿಗಳಿಗೆ ತಮ್ಮ ಮಕ್ಕಳ ಪುನರ್ವಸತಿಗಾಗಿ ಯಾವುದಾದರೂ ಸಹಾಯದ ಅವಶ್ಯಕತೆಯಿದ್ದಲ್ಲಿ ದಯವಿಟ್ಟು ಕಾರಾಗೃಹದ ಅಧೀಕ್ಷಕರಿಗೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಅಥವಾ ಮಕ್ಕಳ ಸಹಾಯವಾಣಿ 1098ಗೆ ಅಥವಾ ಕರ್ನಾಟಕ ರಾಜ್ಯ ಮಕ್ಕಳ ಹಕ್ಕಗಳ ರಕ್ಷಣಾ ಆಯೋಗ ಬೆಂಗಳೂರು ಇವರ ಗಮನಕ್ಕೆ ತರಲು ಕೋರುತ್ತೇನೆ. ಎಂದು ಮನಮಟ್ಟುವ ಹಾಗೆ ತಿಳಿಹೇಳಿದರು.  

ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಶ್ರೀಮತಿ ದೀಪಾ ಜಾವೂರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಧಾರವಾಡ ಇವರು ಮಾತನಾಡುತ್ತಾ ಸರ್ಕಾರದಿಂದ ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳಿಗಾಗಿ ಬಾಲಮಂದಿರಗಳನ್ನು ನಡೆಸಲಾಗುತ್ತಿದೆ. ಅಲ್ಲಿ ತಮ್ಮ ಮಕ್ಕಳನ್ನು ಕಳುಹಿಸಿದರೆ. ಮಕ್ಕಳಿಗೆ ಉಚಿತ ಊಟ, ವಸತಿ, ಶಿಕ್ಷಣ, ಹಾಗೂ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು. 0-6 ವರ್ಷದ ಮಕ್ಕಳಿಗಾಗಿ ಶಿಶುಗೃಹ ಸಂಸ್ಥೆಯಲ್ಲಿ ದಾಖಲಿಸಿ ಪುನರ್ವಸತಿಗೊಳಿಸಲಾಗುತ್ತಿದೆ. ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.  

ಕಾರ್ಯಕ್ರಮದಲ್ಲಿ ಇನ್ನೊರ್ವ ಮುಖ್ಯ ಅತಿಥಿಗಳಾದ ಮಹಾದೇವಿ ಮರಕಟ್ಟಿ, ಪ್ರಭಾರ ಸಹಾಯಕ ಅಧೀಕ್ಷಕರು, ಕೇಂದ್ರಕಾರಾಗೃಹ ಧಾರವಾಡ ಇವರು ಮಾತನಾಡಿ ವಿಚಾರಣಾಧಿನ ಖೈದಿಗಳ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ನಾವು ಸಹ ಕೈ ಜೋಡಿಸಿ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು.  ಕಾರ್ಯಕ್ರಮದಲ್ಲಿ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಪಿ. ಮಹಾದೇವ ನಾಯಕ ಇವರು ಅಧ್ಯಕ್ಷತೆ ವಹಿಸಿದ್ದರು. ಸುರೇಶ ಕರಗಾವಿ, ಅತಿಥಿಗಳಾಗಿ ಭಾಗವಹಿಸಿದ್ದರು. ಪಿ.ಬಿ. ಕುರುಬೆಟ್ಟ ಶಿಕ್ಷಕರು, ಕೇಂದ್ರ ಕಾರಾಗೃಹ, ಧಾರವಾಡ ಇವರು ನಿರೂಪಿಸಿ ವಂದಿಸಿದರು. ಶ್ವೇತಾ ಕಿಲ್ಲೇದಾರ ಪ್ರಾರ್ಥಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೇಂದ್ರ ಕಾರಾಗೃಹದ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.