ಜನವರಿ 1ರಿಂದ 15ರವರೆಗೆ ಬಿಜೆಪಿಯಿಂದ ಜಾಗೃತಿ ಅಭಿಯಾನ

ಹುಬ್ಬಳ್ಳಿ, ಡಿ.  28 ದೇಶಾದ್ಯಂತ ಸಿಎಎ ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಜನವರಿ 1  ರಿಂದ 15 ರವರೆಗೆ ರಾಜ್ಯಾದ್ಯಂತ ಸಿಎಎ ಪರ ಜಾಗೃತಿ ಅಭಿಯಾನವನ್ನು ನಡೆಸಲು ಬಿಜೆಪಿ  ನಿರ್ಧರಿಸಿದೆ, ಇದರಲ್ಲಿ 30 ಲಕ್ಷ ಕುಟುಂಬವನ್ನು ಸಂಪರ್ಕಿಸಲು ಮನೆ-ಮನೆ ಪ್ರಚಾರ, ಎಲ್ಲಾ  ಜಿಲ್ಲಾ ಕೇಂದ್ರಗಳಲ್ಲಿ ಜಾಥಾ, ಸಾಮಾಜಿಕ ಮಾಧ್ಯಮ ಪ್ರಚಾರ ಮತ್ತಿತರ ಕಾರ್ಯಕ್ರಮಗಳು ಸೇರಿವೆ.ಪಕ್ಷದ 300 ಮಂಡಲ್  ಘಟಕಗಳಲ್ಲಿ ಈ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ತರಬೇತಿ ಕಾರ್ಯಾಗಾರಗಳನ್ನು  ನಡೆಸಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್ . ರವಿಕುಮಾರ್ ಶನಿವಾರ ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ. ಸಿಎಎಯಿಂದ ಯಾವುದೇ  ಭಾರತೀಯರಿಗೆ ತೊಂದರೆ ಇಲ್ಲ ಎಂದು ಜನರಿಗೆ ತಿಳಿಸಲು ಪ್ರತಿ ಬೂತ್‌ನಲ್ಲಿ,  ಬಿಜೆಪಿ ಕಾರ್ಯಕರ್ತರು 50 ಮನೆಗಳಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.ತಮ್ಮ  ಮತ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಸಿಎಎ ಬಗ್ಗೆ ಜನರನ್ನು  ಹೇಗೆ ದಾರಿ ತಪ್ಪಿಸುತ್ತಿವೆ ಎಂದು ಅವರು ವಿವರಿಸುತ್ತಾರೆ ಎಂದು ಅವರು ಹೇಳಿದರು."ಜಿಲ್ಲಾ  ಕೇಂದ್ರಗಳಲ್ಲಿ ಜಾಥಾಗಳ ಜತೆಗೆ, ಹುಬ್ಬಳ್ಳಿ, ಮಂಗಳೂರು, ಬೆಂಗಳೂರು, ಕಲಬುರಗಿ  ಮತ್ತು ಸಿಂಧನೂರುನಲ್ಲಿ ಬೃಹತ್ ಸಮಾವೇಶಗಳನ್ನು ಆಯೋಜಿಸಲಾಗುವುದು. ಸಾಮಾಜಿಕ ಮಾಧ್ಯಮಗಳ  ಮೂಲಕವೂ ನಾವು ಒಂದು ಕೋಟಿ ಜನರನ್ನು ತಲುಪುತ್ತೇವೆ ಎಂದು ರವಿಕುಮಾರ್ ವಿವರಿಸಿದರು."ಸಿಎಎಯಿಂದ ಯಾರ ಪೌರತ್ವವನ್ನೂ ಕಸಿದುಕೊಳ್ಳುವುದಿಲ್ಲ. ಆದರೂ ಕಾಂಗ್ರೆಸ್ ತನ್ನ ರಾಜಕೀಯ ಉದ್ದೇಶಕ್ಕಾಗಿ ಜನರನ್ನು ದಾರಿ ತಪ್ಪಿಸುತ್ತಿದೆ ಮತ್ತು ಅದು ಮುಸ್ಲಿಮರಲ್ಲಿ ಅನಗತ್ಯ ಭಯವನ್ನು ಸೃಷ್ಟಿಸುತ್ತಿದೆ ಎಂದು ಅವರು ದೂರಿದ್ದಾರೆ.