ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ -ಶಾಸಕಎಲ್ ಕೃಷ್ಣನಾಯಕ
Awareness about mental health is necessary - MLA L Krishnanayake
ಹೂವಿನ ಹಡಗಲಿ 14- ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಶ್ಲಾಘನೀಯ ಎಂದು ಶಾಸಕ ಎಲ್ ಕೃಷ್ಣನಾಯಕ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ರಾಮಸ್ವಾಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಿ. ಜೈನ್ ಸಮಾಜದ ಜೈನರ ನಾಗರಾಜ್ ರವರ 2ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ಬೆಂಗಳೂರಿನ ತಥಾಗತ್ ಹೃದಯ ರೋಗ ಸಂಸ್ಥೆ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ರಂಗಭಾರತಿ , ಎಂ ಪಿ ಪ್ರಕಾಶ್ ಸಮಾಜಮುಖಿ ಟ್ರಸ್ಟ್ ,ಶ್ರೀ ರಾಮ ಸನ್ಮಂಗಳಂ, ಭಾರತೀಯ ಜೈನ್ ಮಿಲನ್ ನಾನಾ ಕಾಯಿಲೆಗಳ ಸಂಘ ಸಂಸ್ಥೆಗಳ ವತಿಯಿಂದ ಭಾನುವಾರ ಆಯೋಜಿಸಿದ್ದ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಅನೇಕ ರೋಗಗಳಿಗೆ ಬಡವರು ಸಾವಿರಾರು ರೂಪಾಯಿ ವೆಚ್ಚದಲ್ಲಿ ಚಿಕಿತ್ಸೆ ಖರ್ಚು ಮಾಡುತ್ತಾರೆ.
ಇಂತಹ ಉಚಿತ ಆರೋಗ್ಯ ಶಿಬಿರಗಳು ವರದಾನ ಎಂದರು.ತಥಾಗತ್ ಹೃದಯ ರೋಗ ಸಂಸ್ಥೆಯ ಅಧ್ಯಕ್ಷ ಡಾ ಮಹಾಂತೇಶ್ ಆರ್ ಚರಂತಿಮಠ, ಡಾ ಸುಭಾಷ್ ಚಂದ್ರ ಹಿರಿಯ ವೈದ್ಯ ಡಾ. ಎಂ ಧರ್ಮಣ್ಣ ರಾಮಸ್ವಾಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ ರಾಕೇಶಯ್ಯ ರಾಮಸ್ವಾಮಿ, ಜೈನ ಸಮಾಜದ ಅಧ್ಯಕ್ಷ ಎಚ್ ಎಸ್ ಪ್ರಶಾಂತ್ ರಂಗಭಾರತಿಯ ಎಂ ಪಿ ಸುಮಾ ವಿಜಯ್, ವಾರದ ಗೌಸ್ ಮೊಹಿದ್ದೀನ್, ಚೇತನ್ ರಾಮಸ್ವಾಮಿ ಬಾಹುಬಲಿ ಜೈನ್ ಆಯೋಜಕರಾದ ಸಂತೋಷ್ ಜೈನ್ ಇತರರು ಉಪಸ್ಥಿತರಿದ್ದರು.ಹೃದ್ರೋಗ, ರಕ್ತದಲ್ಲಿ ಸಕ್ಕರೆ ಅಂಶ, ಕ್ಯಾನ್ಸರ್ ಪತ್ತೆ ಹಚ್ಚುವ,ರಕ್ತದೊತ್ತಡ, ಕಿವಿ ಗಂಟಲು ಮೂಗು , ಕಣ್ಣಿನ ಪರೀಕ್ಷೆ ಒಳಗೊಂಡಂತೆ ನಾನಾ ಕಾಯಿಲೆ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಿದರು. ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಜನರು ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡರು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 