ಲೋಕದರ್ಶನ ವರದಿ
ಗುರ್ಲಾಪೂರ 18: ಮೂಡಲಗಿ ಶ್ರೀ ಶ್ರೀಪಾದಬೋದ ಸ್ವಾಮಿಜಿ ಸರಕಾರಿ ಪ್ರಥಮ ದಜರ್ೆ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ಸನ್ 2019-20 ಸಾಲಿನ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರವನ್ನು ಗುರ್ಲಾಪೂರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್.ಬಿ. ಕೊಕಟನೂರ ಅಧ್ಯಕ್ಷತೆಯನ್ನು ವಹಿಸಿದರು. ಮುಖ್ಯ ಅತಿಥಿಗಳಾಗಿ ಉಪನ್ಯಾಸಕರಾದ ಪ್ರೋ. ಮೃತ್ಯುಂಜಯ್ಯ ಗವಿಮಠ ಉಪನ್ಯಾಸಕರು ಎಸ್.ಆರ್. ಕಂಟಿ ಮಹಾವಿದ್ಯಾಲಯ, ಮೂಧೋಳ ಇವರು ಆಗಮಿಸಿದ್ದರು. ಮೂಡಲಗಿ ಪುರಸಭೆಯ ಸದಸ್ಯರಾದ ಆನಂದ ಟಪಾಲ್ದಾರ್ ಹಾಗೂ ಇತರ ಸದಸ್ಯರು ಹಾಗೂ ಗ್ರಾಮದ ಹಿರಿಯರಾದ ಎಮ್.ಜಿ.ಮುಗಳಖೋಡ.ಆರ್.ಬಿ.ನೇಮಗೌಡರ, ಎಸ್.ಜಿ.ಹಂಚಿನಾಳ, ವ್ಹಿ.ಬಿ.ಮುಗಳಖೋಡ, ಎಲ.ಎನ.ಮರಠೆ. ಉಪಸ್ಥಿತರಿದ್ದರು. ಮತ್ತು ಎಂ ಮಂಜುನಾಥ ಮುಖೋಪಾಧ್ಯಾಯರು ಸರಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇವರು ಉಪಸ್ಥಿತರಿದ್ದು ಎಲ್ಲ ಗಣ್ಯರಿಂದ ವಿಶೇಷ ಶಿಬಿರ ಉದ್ಘಾಟನೆಗೊಂಡಿತ್ತು. "ಸಾರ್ವಜನಿಕರಿಗೊಂದು ಸವಾಲು" ಎಂಬ ವಿಷಯ ದಡಿಯಲ್ಲಿ ಡಾ. ಡಿ.ಜಿ. ಪೂಜೇರಿ ಹಿರಿಯ ಆರೋಗ್ಯ ನಿರೀಕ್ಷಕರು, ಜಿಲ್ಲಾ ವೆಕ್ಟರ್ ಬೋರ್ನ ಡಿಸೀಜ್, ಬೆಳಗಾವಿ ಮತ್ತು ಸಮುದಾಯ ಆರೋಗ್ಯ ಕೇಂದ್ರ ಮೂಡಲಗಿ ಇವರ ನೇತೃತ್ವದಲ್ಲಿ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳ ಕುರಿತು ಅದರಲ್ಲಿ ವಿಶೇಷವಾಗಿ ಡೆಂಗ್ಯೂ ಜ್ವರದ ಕುರಿತು ಅರಿವು ಮೂಡಿಸುವ ವಿಶಿಷ್ಟ ಜಾಗೃತಿಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರಾರ್ಥಿಗಳು ಬೆಳಿಗ್ಗೆ 11.00 ಘಂಟೆಯಿಂದ ಮದ್ಯಾಹ್ನ 1.30 ರವರೆಗೆ ಗುರ್ಲಾಪೂರ ಗ್ರಾಮದ ಸುಮಾರು 300 ಕ್ಕಿಂತ ಅಧಿಕ ಮನೆಗಳಿಗೆ ಬೇಟಿ ನೀಡಿ ಡೆಂಗ್ಯೂ ಜ್ವರಕ್ಕೆ ಕಾರಣವಾದ ಸೋಳ್ಳೆಗಳ ಉತ್ಪತ್ತಿಗೆ ಕಾರಣದ ಕುರಿತು ಮತ್ತು ಮನೆಯ ಆವರಣ ಸ್ವಚ್ಚವಾಗಿ ಇಡುವಂತೆ ಜಾಗೃತಿ ಮೂಡಿಸಿದರು. ಡಾ. ರವಿ ಗಡದನ್ನವರ ಹಾಗೂ ಡಾ|| ಕೋಣಿ ಸದರಿ ಜಾಗೃತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
"ಜಲ ಸಂರಕ್ಷಣೆ ಮತ್ತು ಅರಣ್ಯೀಕರಣ" ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಶಿಕಾಂತ ದೇಶಪಾಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕೆ.ಎನ್. ವಣ್ಣೂರ ವಲಯ ಅರಣ್ಯಾಧಿಕಾರಿಗಳು, ಗೋಕಾಕ ಇವರು ಅತಿಥಿಗಳಾಗಿ ಆಗಮಿಸಿ ಉಪನ್ಯಾಸ ನೀಡಿದರು. ಗ್ರಾಮದ ಹಿರಿಯರಾದ ವೀರಭದ್ರಪ್ರ ನೇರ್ಲೆರವರು ಜಲ ಸಂರಕ್ಷಣೆಯ ಕುರಿತು ಮಾತಡಿದರು. "ಸ್ವಚ್ಚತಾ ಹೀ ಸೇವಾ" ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಜೇಂದ್ರ ಪ್ರಸಾದ ಆಸಂಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಿ.ಎಮ್. ಮುಗಳಖೋಡ ಹಿರಿಯ ಆರೋಗ್ಯ ನಿರೀಕ್ಷಕರು, ಪುರಸಭೆ ಮೂಡಲಗಿ ಇವರು ಅತಿಥಿಗಳಾಗಿ ಆಗಮಿಸಿ ಸ್ವಚ್ಚತೆ ಕುರಿತು ಉಪನ್ಯಾಸ ನೀಡಿದರು.
"ರಸ್ತೆ ಸಂಚಾರಿ ನಿಯಮಗಳು ಮತ್ತು ಅಪಘಾತ ತಡೆ" ಜಾಗೃತಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಿವಾನಂದ ಚಂಡಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮಲ್ಲಿಕಾರ್ಜುನ ಸಿಂಧೂರ ಪಿ.ಎಸ್.ಆಯ್., ಮೂಡಲಗಿ ಹಾಗೂ ಇವರು ಅತಿಥಿಗಳಾಗಿ ಆಗಮಿಸಿ ಸಂಚಾರಿ ನಿಯಮಗಳು ಮತ್ತು ಅಪಘಾತ ತಡೆಯಲು ವಹಿಸಬೇಕಾದ ಮುಜಾಗೃತೆ ಕುರಿತು ಉಪನ್ಯಾಸ ನೀಡಿದರು.
"ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ" ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀಮತಿ ಶಿವಲೀಲಾ ಎಚ್.ಬಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಎಸ್.ಜಿ. ನಾಯಕ ಉಪನ್ಯಾಸಕರು, ಎಮ್.ಇ.ಎಸ್. ಪದವಿ ಮಹಾವಿದ್ಯಾಲಯ ಮೂಡಲಗಿ ಇವರು ಅತಿಥಿಗಳಾಗಿ ಆಗಮಿಸಿ ಉಪನ್ಯಾಸ ನೀಡಿದರು. ಗುರ್ಲಾಪೂರ ಗ್ರಾಮದಲ್ಲಿರುವ ಐತಿಹಾಸಿಕ ಕಟ್ಟಡಗಳ ಕುರಿತು ಗ್ರಾಮದ ಹಿರಿಯರಾಧ ಬಿ.ಸಿ. ಮುಗಳಖೋಡರವರು ಮಾಹಿತಿ ನೀಡಿದರು.
ಸಮಾರೋಪ ಸಮಾರಂಭದಲ್ಲಿ. ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್.ಬಿ. ಕೊಕಟನೂರ ಅಧ್ಯಕ್ಷತೆಯನ್ನು ವಹಿಸಿದರು. ಮುಖ್ಯ ಅತಿಥಿಗಳಾಗಿ ಡಿ.ಜಿ. ಹಾಗೂ ಶಾನೂರ ಐಹೋಳೆ ಉಪನ್ಯಾಸಕರು, ಕಲ್ಲೋಳಿ ಇವರು ಅತಿಥಿಗಳಾಗಿ ಆಗಮಿಸಿದರು. ಸದರಿ ಕಾರ್ಯಕ್ರಮದಲ್ಲಿ ಶಿಬಿರದ ಉತ್ತಮ ತಂಡ, ಶಿಬಿರದ ಪುರುಷ, ಶಿಬಿರದ ಮಹಿಳೆ, ಉತ್ತಮ ಶಿಬಿರಾರ್ಥಿಗಳ ಬಹುಮಾನವನ್ನ ವಿತರಿಸಲಾಯಿತು. ಹಾಗೂ ವಿಶೇಷ ಶಿಬಿರಕ್ಕೆ ಸಹಕಾರ ನೀಡಿದವರನ್ನು ಸನ್ಮಾನಿಸಲಾಯಿತು.
ವಿಶೇಷ ಶಿಬಿರದಲ್ಲಿ ಶಿಬಿರಾಥರ್ಿಗಳು 07 ದಿನಗಳಲ್ಲಿ ಗುಲರ್ಾಪೂರ ಗ್ರಾಮದ ಪ್ರಾಥಮಿಕ ಶಾಲೆ, ಪ್ರೌಢಧಾಲೆ, ಗ್ರಾಮದ ಬಿದಿಗಳನ್ನು, ಗ್ರಾಮದಲ್ಲಿರುವ ಎರಡು ರುಧ್ರಭೂಮಿಗಳನ್ನು ಸ್ವಚ್ಚಗೊಳಿಸುವುದರ ಮೂಲಕ ಶ್ರಮಧಾನ ಮಾಡಿದರು. ಎರಡು ರುಧ್ರಭೂಮಿಗಳಲ್ಲಿ ಮತ್ತು ಗುರ್ಲಾಪೂರ ಗ್ರಾಮದಲ್ಲಿರುವ ವಿಶ್ರಾಂತಿ ಗೃಹದ ಆವರಣದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಪರಿಸರ ಜಾಗೃತಿಯನ್ನು ಮೂಡಿಸಿದರು.
ಪ್ರತಿದಿನ ಸಾಯಂಕಾಲ ಶಿಬಿರಾರ್ಥಿಗಳು ಸಾರ್ವಜನಿಕ ಸಮಸ್ಯೆಗಳ ಕುರಿತು ನಾಟಕಗಳನ್ನು ಆಡುವುದರ ಮುಖಾಂತರ ಸಾರ್ವಜನಿಕ ಅರಿವು ಮೂಡಿಸಿದರು. ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಗ್ರಾಮದ ಆನಂದ ಟಪಾಲ. ಶಿಬಿರದಲ್ಲಿ ಗ್ರಾಮದ ಪ್ರಮುಖರು ಸಹ ಭಾಗವಹಿಸಿದ್ದರು. ಸದರಿ ಶಿಬಿರದಲ್ಲಿ. ಸಹ ಶಿಬಿರಾಧಿಕಾರಿಯಾದ ನಿಂಗಪ್ಪ ಸಂಗ್ರೇಜಿಕೊಪ್ಪ ಮತ್ತು ಶಿವರಾಜ ಮುಗಳಖೋಡ ಮತ್ತು ಸುಮಾರು 50 ಶಿಬಿರಾರ್ಥಿಗಳು ಭಾಗವಹಿಸಿ ಶಿಬಿರವನ್ನು ಯಶಸ್ಸುಗೊಳಿಸಿದರು.