ಸತತ 2ನೇ ಬಾರಿ ಅಕ್ಕಮಹಾದೇವಿ ಮಹಿಳಾ ಕಾಲೇಜಿಗೆ ಪ್ರಶಸ್ತಿಯ ಗರಿ

ಬಾಗಲಕೋಟೆ : ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ತನ್ನ 16 ನೆಯ ಸಂಸ್ಥಾಪನಾ ದಿನಾಚಾರಣೆ ಅಂಗವಾಗಿ, ಸಂಲಗ್ನ ಮಹಾವಿದ್ಯಾಲಯಗಳು ಪ್ರಕಟಿಸುತ್ತಿರುವ ವಾಷರ್ಿಕ ಸ್ಮರಣ ಸಂಚಿಕೆಗಳ ಸ್ಪಧರ್ೆಯನ್ನು ಏರ್ಪಡಿಸಲಾಗಿತ್ತು. 

    ಈ ಸ್ಪಧರ್ೆಯಲ್ಲಿ ಬಾಗಲಕೋಟೆಯ ಬಿ.ವ್ಹಿ.ವ್ಹಿ. ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯವು 2018-19 ನೇ ಸಾಲಿನಲ್ಲಿ ಪ್ರಕಟಿಸಿದ 9 ನೆಯ ಕದಳಿಶ್ರೀ ವಾಷರ್ಿಕ ಸಂಚಿಕೆಯು ಸತತ ಎರಡನೇ ಬಾರಿಯೂ ಪ್ರಥಮ ಬಹುಮಾನ ಪಡೆದಿದೆ. 

      ಇತ್ತೀಚೆಗೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಜ್ಞಾನಶಕ್ತಿ ಆವರಣದಲ್ಲಿ ಹಮ್ಮಿಕೊಂಡಿದ್ದ 16 ನೆಯ ಸಂಸ್ಥಾಪನಾ ದಿನಾಚಾರಣೆ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಸಬಿಹಾ ಭೂಮಿಗೌಡ ಅವರಿಂದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್.ಜೆ. ಒಡೆಯರ ಅವರು ಪ್ರಮಾಣ ಪತ್ರ ಹಾಗೂ ಪಾರಿತೋಷಕವನ್ನು ಸ್ವೀಕರಿಸಿರುವರು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಖಖಔ ದ ವಿಜ್ಞಾನಿ ರೂಪಾ, ವಿಧಾನ ಪರಿಷತ್ ಸದಸ್ಯರಾದ ಅರುಣ ಶಹಾಪುರ ಹಾಗೂ ಕುಲಸಚಿವರಾದ ಪ್ರೊ.ಆರ್. ಸುನಂದಮ್ಮ ಉಪಸ್ಥಿತರಿದ್ದರು. 

        ಈ ನಿಮಿತ್ಯ ಬಿ.ವ್ಹಿ.ವ್ಹಿ. ಸಂಘದ ಮಾನ್ಯ ಕಾಯರ್ಾಧ್ಯಕ್ಷರು, ಶಾಸಕರಾದ ಡಾ.ವೀರಣ್ಣ ಸಿ. ಚರಂತಿಮಠ, ಗೌರವ ಕಾರ್ಯದಶರ್ಿಗಳಾದ ಮಹೇಶ ಎನ್. ಅಥಣಿ, ಕಾಲೇಜುಗಳ ಆಡಳಿತ ಮಂಡಳಿಯ ಕಾಯರ್ಾಧ್ಯಕ್ಷರಾದ ಅಶೋಕ ಎಂ. ಸಜ್ಜನ (ಬೇವೂರ) ಆಡಳಿತಾಧಿಕಾರಿಗಳಾದ ಪ್ರೊ. ಎನ್.ಜಿ. ಕರೂರ, ಬಿ.ವ್ಹಿ.ವ್ಹಿ. ಸಂಘದ ಮುಖ್ಯ ಸಲಹೆಗಾರರಾದ ಡಾ. ಮೀನಾ ಆರ್. ಚಂದಾವರಕರ, ಉನ್ನತ ಶಿಕ್ಷಣ ಸಂಯೋಜಕರಾದ ಪ್ರೊ. ವ್ಹಿ. ಕೆ. ಮೊರಬದ ಅವರು ಅಭಿನಂದನೆಗಳನ್ನು ಸಲ್ಲಿಸಿರುವರು. 

      ಕದಳಿಶ್ರೀ 9 ನೇ ಸಂಚಿಕೆಯು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಿಂದ ಸತತ ಎರಡನೇ ಬಾರಿಯೂ ಪ್ರಥಮ ಬಹುಮಾನ ಪಡೆದ ನಿಮಿತ್ತ್ಯ ಬಿ.ವ್ಹಿ.ವ್ಹಿ. ಸಂಘದ ಮಾನ್ಯ ಕಾಯರ್ಾಧ್ಯಕ್ಷರು, ಶಾಸಕರಾದ ಡಾ.ವೀರಣ್ಣ ಸಿ. ಚರಂತಿಮಠ ಅವರು ಕಾರ್ಯ ನಿರ್ವಹಿಸಿದ ತಂಡಕ್ಕೆ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಬಿ.ವ್ಹಿ.ವ್ಹಿ. ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾಯರ್ಾಧ್ಯಕ್ಷರಾದ ಅಶೋಕ ಎಂ. ಸಜ್ಜನ (ಬೇವೂರ), ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್.ಜೆ. ಒಡೆಯರ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.