ಅವರಗುಪ್ಪ ವಸಂತ ಜಟ್ಟಾ ನಾಯ್ಕ ಕೊಲೆ ಪ್ರಕರಣ: ಜ್ಯೋತಿಷಿ ಕಮಲಾಕರ ಭಟ್ ಹಾಗೂ ಇತರರ ಬಂಧನ

ಅವರಗುಪ್ಪ ವಸಂತ  ಜಟ್ಟಾ ನಾಯ್ಕ ಕೊಲೆ ಪ್ರಕರಣ: ಜ್ಯೋತಿಷಿ ಕಮಲಾಕರ ಭಟ್  ಹಾಗೂ ಇತರರ ಬಂಧನ  Avaraguppa Vasantha Jatta Nayak murder case: Astrologer Kamalakar Bhat and others arrested

ಅವರಗುಪ್ಪ ವಸಂತ  ಜಟ್ಟಾ ನಾಯ್ಕ ಕೊಲೆ ಪ್ರಕರಣ: ಜ್ಯೋತಿಷಿ ಕಮಲಾಕರ ಭಟ್  ಹಾಗೂ ಇತರರ ಬಂಧನ  

ಕಾರವಾರ 03: ಸಿದ್ದಾಪುರದ ಅವರೆಗೊಪ್ಪ ಗ್ರಾಮದಲ್ಲಿ ವಸಂತ  ಜಟ್ಟಾ ನಾಯ್ಕ  ಎಂಬುವವರ ಕೊಲೆ ನಡೆದಿದೆ. ಈ  ಪ್ರಕರಣದಲ್ಲಿ  ಆರೋಪಿಗಳಾದ ಸುಚಿತ್ರಾ, ಜ್ಯೋತಿಷಿ ಕಮಲಾಕರ ಭಟ್ , ಸುಚಿತ್ರಾ ತಂದೆ ಲೋಕನಾಥ ಹಾಗೂ ಇತರೆ ನಾಲ್ಕು ಜನರನ್ನು ಪೊಲೀಸರು ಬಂಧಿಸಿದ್ದಾರೆ.  ಸಿದ್ದಾಪುರದ ಅವರಗುಪ್ಪದಿಂದ  ಜ್ಯೋತಿಷಿ ಕಮಲಾಕರ ಭಟ್ಟ  ಪರಾರಿ ಆಗುತ್ತಿರುವ ಸಂದರ್ಭದಲ್ಲಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ವಸಂತ ನಾಯ್ಕ ಕೊಲೆಯಾದ ಸ್ವಲ್ಪ ಹೊತ್ತಲ್ಲೇ ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.  

ಘಟನೆಯ ಹಿನ್ನೆಲೆ: ಕಮಲಾಕರ ಭಟ್ ಜೊತೆಗೆ ವಿವಾಹಿತ ಮಹಿಳೆ  ಸುಚಿತ್ರಾ ಆಕ್ರಮ ಸಂಬಂಧ  ಹೊಂದಿದ್ದಳು ಎನ್ನಲಾಗಿದೆ.  ಅಕ್ರಮ  ಸಂಬಂಧ ಕುರಿತು  ಸುಚಿತ್ರಾ ಪತಿ  ಮಹೇಶ್ ಜಟ್ಟಾ ನಾಯ್ಕಗೆ, ಮಗಳು ಸೌಮ್ಯಶ್ರೀ  ಮೂಲಕ ತಲುಪಿದೆ. ಅಲ್ಲದೆ ತಾಯಿಯಿಂದ ಕಿರುಕುಳ ಆದ  ಸಂಬಂಧ  ಸಿದ್ದಾಪುರ  ಪೊಲೀಸ್ ಠಾಣೆಗೆ ಎರಡು ದಿನದ ಹಿಂದೆ ದೂರು ನೀಡಲು ಸೌಮ್ಯಶ್ರಿ ತಂದೆ ಮಹೇಶ್ ನಾಯ್ಕ ಜೊತೆ  ತೆರಳಿದ್ದರು. ಮಹೇಶ್ ಅವರ  ಮಗಳಿಗೆ ತಾಯಿ  ಸುಚಿತ್ರಾಳಿಂದ ಟಾರ್ಚರ್ ಆದ ಕಾರಣ , ಮಕ್ಕಳ ರಕ್ಷಣಾ ಘಟಕದಲ್ಲಿ ದೂರು ನೀಡಲು ಪ್ರಯತ್ನ ನಡೆದಿತ್ತು ಎನ್ನಲಾಗಿದೆ. ಮಗಳು ಸೌಮ್ಯಶ್ರಿ ತಮ್ಮ ಅಕ್ರಮ ಸಂಬಂಧ ಬಯಲು ಮಾಡಿದ್ದಾಳೆ ಎಂದು  ಪ್ರಶ್ನಿಸಲು  ಸೋಮವಾರ  ರಾತ್ರಿ  ಸುಚಿತ್ರಾ ಮತ್ತು ಲೋಕನಾಥ (ಸುಚಿತ್ರಾ ತಂದೆ), ಜ್ಯೋತಿಷಿ ಕಮಲಾಕರ ಭಟ್ಟ ಸ್ವಾಮಿ  ಹಾಗೂ ಇತರೆ ನಾಲ್ವರು , ಮಹೇಶ್  ಕುಟುಂಬದ ಮನೆ ಅವರಗುಪ್ಪಕ್ಕೆ ರಾತ್ರಿ ಕಾರ್ ನಲ್ಲಿ   ಬಂದಿದ್ದರು  .  ಈ ವೇಳೆ ಗಲಾಟೆ ನಡೆದಿದೆ. ಜ್ಯೋತಿಷಿ ಕಡೆಯವರು ಮಹೇಶ್ ಗೆ ಥಳಿಸಲು ಆರಂಭಿಸಿದ್ದಾರೆ. ಸಹೋದರ  ಮಹೇಶ್ ನಾಯ್ಕ  ರಕ್ಷಣೆಗೆ  ವಸಂತ ಜಟ್ಟಾ  ನಾಯ್ಕ,  ಪಕ್ಕದ ಮನೆಯ ಕುಮಾರ್ ನಾರಾಯಣ ನಾಯ್ಕ  ಎಂಬುವವರು ಮುಂದಾಗಿದ್ದಾರೆ. 

ಈ ವೇಳೆ ವಸಂತ ನಾಯ್ಕಗೆ ಚೂರಿ ಇರಿತವಾಗಿದೆ ಎನ್ನಲಾಗಿದೆ.  ಗಾಯಗೊಂಡ ವಸಂತ ನಾಯ್ಕನನ್ನು ಆಸ್ಪತ್ರೆಗೆ ಸಾಗಿಸುವಾಗ ವಸಂತ ನಾಯ್ಕ ಮೃತಪಟ್ಟಿದ್ದಾನೆ. ಈ ಸುದ್ದಿ ತಿಳಿದು ಗ್ರಾಮಸ್ಥರು ಜ್ಯೋತಿಷಿ  ಕಮಲಾಕರ ಭಟ್ಟ ಸ್ವಾಮಿಯ ಕಾರನ್ನು ಜಖಂ ಗೊಳಿಸಿದ್ದಾರೆ ಎನ್ನಲಾಗಿದೆ. ಜ್ಯೋತಿಷಿ ಕಮಲಾಕರ ಭಟ್ ಸಿದ್ದಪುರ  ಮೂಲದ ಹೆಮ್ಮನಬೈಲ್ ಗ್ರಾಮದವ. ಶಿವಮೊಗ್ಗದಲ್ಲಿ ನೆಲೆ ನಿಂತಿದ್ದ. ಟಿವಿ ವಾಹಿನಿ ಒಂದರಲ್ಲಿ ಜ್ಯೋತಿಷಿ ಹೇಳುತ್ತಿದ್ದ ಎನ್ನಲಾಗಿದೆ.ಸುಚಿತ್ರಾ ಮತ್ತು ಜ್ಯೋತಿಷಿ  ಕಮಲಾಕರ ಭಟ್ ನಡುವೆ ಇದ್ದ ಅಕ್ರಮ ಸಂಬಂಧ ಕುರಿತು ಸುಚಿತ್ರಾ ಅವರ  ಮಗಳೇ ಬಯಲು ಮಾಡುತ್ತಿದ್ದಳು. ತಂದೆಗೆ ಕರೆ ಮಾಡಿ ನನಗೆ ತಾಯಿ ಮತ್ತು ಜ್ಯೋತಿಷಿ ತೊಂದರೆ ಕೊಡುತ್ತಿದ್ದಾರೆ. ನನ್ನ ಕರೆದುಕೊಂಡು ಹೋಗಿ  ಎಂದು ಹೇಳಿಕೊಂಡಿದ್ದಳು ಎನ್ನಲಾಗಿದೆ.  

ಇದಾದ ನಂತರ, ಸೋಮವಾರ ರಾತ್ರಿ ಗಲಾಟೆ ನಡೆದಿದೆ. ಮಹೇಶ್ ನಾಯ್ಕ್‌, ಕುಮಾರ ಹಾಗೂ ವಸಂತ್ ಮೇಲೆ  ಮಾರಣಾಂತಿಕ ಹಲ್ಲೆ  ನಡೆದಿತ್ತು.ಹಲ್ಲೆಯ ಪರಿಣಾಮ ವಸಂತ ಸಾವನ್ನಪ್ಪಿದ್ದಾನೆ.  ಮಹೇಶ್ ಹಾಗೂ ಕುಮಾರ್ ಎಂಬುವವರಿಗೆ  ಚಿಕಿತ್ಸೆ ಮುಂದುವರೆದಿದೆ. ವಸಂತ ನಾಯ್ಕ ಪತ್ನಿ ಸಂಧ್ಯಾ ಪೊಲೀಸರಿಗೆ ದೂರು ನೀಡಿದ್ದು,7 ಜನರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ತನಿಖೆ ಮುಂದುವರಿಸಿದ್ದಾರೆ.