ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಅಂಗೀಕಾರ | ಮತ್ತೆ ಗಡಿಖ್ಯಾತೆ ಕೆದಕಿದ ಚಂದಗಡ ಶಾಸಕ
ಮರಾಠಿ ಕಾರ್ಯಕ್ರಮಗಳಿಗೆ ಆಥರ್ಿಕ ನೆರವು ನೀಡಲಿ
ಲೋಕದರ್ಶನ ವರದಿ
ಬೆಳಗಾವಿ: ಗಡಿಭಾಗದಲ್ಲಿ ನಡೆಯುವ ಎಲ್ಲ ಸಾಹಿತ್ಯ ಸಮ್ಮೇಳನ ಹಾಗೂ ಮರಾಠಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಹಾರಾಷ್ಟ್ರ ಸಕರ್ಾರ ಆಥರ್ಿಕ ಸಹಾಯ ನೀಡಬೇಕು. ಕನರ್ಾಟಕಮಹಾರಾಷ್ಟ್ರ ಗಡಿವಿವಾದ ಸುಪ್ರೀಂಕೋಟರ್್ನಲ್ಲಿದೆ. ದೀರ್ಘಕಾಲದ ವಿವಾದಿಂದ ಎರಡೂ ಭಾಷಿಕರು ಹಾಗೂ ರಾಜ್ಯಗಳ ಮಧ್ಯೆ ವೈರತ್ವ ಭಾವನೆ ನಿಮರ್ಾಣವಾಗಿದೆ. ಹೀಗಾಗಿ ಗಡಿವಿವಾದ ಬಗೆಹರಿಸಲು ಕೇಂದ್ರ ಸಕರ್ಾರ ಮಧ್ಯೆ ಪ್ರವೇಶಿಸಲು ಮಹಾರಾಷ್ಟ್ರ ಸಕರ್ಾರ ಒತ್ತಾಯಿಸಬೇಕು.
ಗಡಿಭಾಗದಲ್ಲಿ ಶೇಕಡ 15ಕ್ಕಿಂತ ಹೆಚ್ಚಿರುವ ಮರಾಠಿಗರ ಅನುಕೂಲಕ್ಕಾಗಿ ಸಕರ್ಾರಿ ಕಚೇರಿಗಳಲ್ಲಿ ಮರಾಠಿ ದಾಖಲೆ ನೀಡುವ ವ್ಯವಸ್ಥೆಯಾಗಬೇಕು. ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ವೈಶಿಷ್ಟತೆ. ಹೀಗಾಗಿ ದೇಶದ ರಾಷ್ಟ್ರ ಹಾಗೂ ರಾಷ್ಟ್ರಭಾಷೆಗೆ ಪ್ರಥಮ ಆದ್ಯತೆ ನೀಡಿ ಸರ್ವಧರ್ಮ, ಸರ್ವ ಭಾಷಿಕರನ್ನು ಒಗ್ಗೂಡಿಸುವ ಪ್ರಯತ್ನ
ಮಾಡಬೇಕು.
ಇವು ಉಚಗಾಂವ ಗ್ರಾಮದಲ್ಲಿ ಭಾನುವಾರ ನಡೆದ 18ನೇ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳಿವು. ಎಲ್ಲ ವೇದಿಕೆಗಳಲ್ಲೂ ಗಡಿವಿವಾದ ಕೆಣಕುವ ಕೆಲವು ಹಿತಾಶಕ್ತಿಗಳು ಸಾಹಿತ್ಯ ಸಮ್ಮೇಳನದಂತಹ ವೇದಿಕೆಯಲ್ಲೂ ಗಡಿವಿವಾದವನ್ನೇ ಮುಖ್ಯ ಅಜೆಂಡಾ ಮಾಡಿಕೊಂಡಿದ್ದು ವಿಪಯರ್ಾಸ.
ಗಡಿವಿವಾದ ಕೆದಕಿದ ಚಂದಗಡ ಶಾಸಕ
ಇತ್ತೀಚೆಗೆ ಬೆಳಗಾವಿಗೆ ಬಂದು ಎಂಇಎಸ್ ನಾಯಕರಿಂದ ಸತ್ಕಾರ ಸ್ವೀಕರಿಸಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು. ಮುಂದಿನ ಬಾರಿ ಈ ನೆಲದಿಂದಲೇ ಮಹಾರಾಷ್ಟ್ರ ವಿಧಾನಸಭೆ ಪ್ರತಿನಿಧಿಸುವಂತಾಗಬೇಕು ಎಂದು ಪ್ರಚೋದನಕಾರಿ ಹೇಳಿಕೆ ನೀಡಿ ಗಡಿಕ್ಯಾತೆ ತೆಗೆದಿದ್ದ ಚಂದಗಡ ಶಾಸಕ ರಾಜೇಶ್ ಪಾಟೀಲ ಭಾನುವಾರ ಉಚಗಾಂವದಲ್ಲಿ ನಡೆದ ಮರಾಠಿ ಸಾಹಿತ್ಯ ಸಮ್ಮೇಳನದಲ್ಲೂ ಮತ್ತದೆ ಖ್ಯಾತೆ ತೆಗೆದಿದ್ದಾರೆ.
ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಶಾಸಕ ರಾಜೇಶ್ ಪಾಟೀಲ, ನನ್ನ ತಂದೆ ಎಂಎಲ್ಎ ಆದಾಗ ಗಡಿಭಾಗದ ಮರಾಠಿ ಜನರ ಸ್ಮರಿಸಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಕನರ್ಾಟಕದ ಗಡಿಭಾಗ ಮಹಾರಾಷ್ಟ್ರದಲ್ಲಿ ಇದ್ದಿದ್ದರೆ ಬೆಳಗಾವಿ ಎಂಎಲ್ಎ ಆಗಿರುತ್ತಿದ್ದೆ. ಆದರೆ ಆ ವೇಳೆ ಮಹಾರಾಷ್ಟ್ರ ಸಕರ್ಾರದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.
ಗಡಿವಿವಾದ ಬಗೆಹರಿಸಲು ಆಗಿನ ಸಕರ್ಾರ ಮುಂದೆ ಬರಲಿಲ್ಲ. ಮಹಾರಾಷ್ಟ್ರದ ರಾಜಕೀಯ ನಾಯಕರ ಗಮನ ಸೆಳೆಯಲು ಗಡಿಭಾಗದ ಮರಾಠಿಗರನ್ನು ಸ್ಮರಿಸಿ ಪ್ರಮಾಣ ವಚನ ಸ್ವೀಕರಿಸಿದೆ ಎಂದರು.
ನಿಮ್ಮ ಪ್ರತಿನಿಧಿಯಾಗಿ ಸಾಹಿತ್ಯ ಸಮ್ಮೇಳನದಲ್ಲಿ ಹೊರಡಿಸಿದ ಠರಾವುಗಳನ್ನು ಮಹಾರಾಷ್ಟ್ರ ಸಕರ್ಾರದ ಗಮನಕ್ಕೆ ತರುವೆ ಎಂದು ಭರವಸೆ ನೀಡುವ ಮೂಲಕ ಮತ್ತೆ ಗಡಿಕ್ಯಾತೆ ತೆಗೆದಿದ್ದಾರೆ.