ಬ್ರಿಡ್ಜ್‌ ಮೇಲೆ ಸಂಗ್ರಹವಾದ ನೀರನ್ನು ಹೋಗುವ ಹಾಗೆ ಅಧಿಕಾರಿಗಳು ಕ್ರಮ

ಬ್ರಿಡ್ಜ್‌ ಮೇಲೆ ಸಂಗ್ರಹವಾದ ನೀರನ್ನು ಹೋಗುವ ಹಾಗೆ ಅಧಿಕಾರಿಗಳು ಕ್ರಮ Authorities take action to drain water accumulated on the bridge

ಲೋಕದರ್ಶನ ವರದಿ 

ತಾಂಬಾ 25 :  ಗ್ರಾಮದ ದೊಡ್ಡ ಹಳ್ಳಕ್ಕೆ ಕಟ್ಟಲಾದ ಬ್ರಿಜ್ ಮೇಲೆ ಮಳೆಯ ನೀರು ನಿಂತು ಕೆರೆಯಂತಾಗಿತ್ತು, ಇಂಡಿ- ದೇವರಹಿಪ್ಪರಗಿ ಹೆದ್ದಾರಿಯ ಮಧ್ಯದಲ್ಲಿರುವ ಈ ಬ್ರಿಜ್ ಮೇಲೆ ನಿಂತ ನೀರನ್ನು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರಿಗೆ ಹೋಗಲು ತೊಂದರೆಯಾಗದಂತೆ ಮಾಡಿಕೊಡಬೇಕು ಈ ಬ್ರಿಡ್ಜ್‌ ತುಂಬಾ ಹಳೆಯದಾಗಿದ್ದು ಅನಾಹುತ ವಾಗುವ ಸಂಭವ ಇರುವುದರಿಂದ ಜನಪ್ರತಿನಿಧಿಗಳು ಹೊಸ ಬ್ರಿಜ್ ಮಾಡಲು ಟೆಂಡರ್ ಕರೆಯಬೇಕು ಹಾಗೂ ಕೂಡಲೇ ಬ್ರಿಡ್ಜ್‌ ಮೇಲೆ ಸಂಗ್ರಹವಾದ ನೀರನ್ನು ಹೋಗುವ ಹಾಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಇದಕ್ಕೆ ವಿಳಂಬ ಮಾಡಿದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಹೋರಾಟಗಾರರಾದ ಮಲ್ಲಯ್ಯ ಸಾರಂಗಮಠ ಅವರು ಎಚ್ಚರಿಸಿದ್ದಾರೆ.